ನಾಳೆ ಹೊಸ 'ಟ್ರಾನ್ಸ್​ಪರೆಂಟ್​ ​ ಟ್ಯಾಕ್ಸೇಷನ್'​ ಪ್ಲಾಟ್​ಫಾರಂ ಉದ್ಘಾಟಿಸಲಿದ್ದಾರೆ ಪ್ರಧಾನಿ

PM MODI Aug 10
Published on

ನವದೆಹಲಿ: ಟ್ರಾನ್ಸ್​ಪರೆಂಟ್​ ಟ್ಯಾಕ್ಸೇಷನ್​ - ಹಾನರಿಂಗ್ ದ ಹಾನೆಸ್ಟ್ ಎಂಬ ಹೊಸ ಪ್ಲಾಟ್​ಫಾರಂ ಒಂದಕ್ಕೆ ನಾಳೆ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಲಿದ್ದಾರೆ. ಇದು ನೇರ ತೆರಿಗೆ ವ್ಯವಸ್ಥೆ ಸುಧಾರಣೆ ದೃಷ್ಟಿಯಿಂದ ಮಹತ್ವದ ಬೆಳವಣಿಗೆ ಎಂದು ಸರ್ಕಾರ ಹೇಳಿದೆ.

ವರ್ಚುವಲ್ ಕಾರ್ಯಕ್ರಮದ ಮೂಲಕ ಈ ಪ್ಲಾಟ್​ಫಾರಂಗೆ ಪ್ರಧಾನಿ ಚಾಲನೆ ನೀಡಲಿದ್ದು, ದೇಶದ ವಿವಿಧ ಚೇಂಬರ್ ಆಫ್ ಕಾಮರ್ಸ್​, ಟ್ರೇಡ್ ಅಸೋಸಿಯೇಷನ್​, ಚಾರ್ಟರ್ಡ್​ ಅಕೌಂಟಂಟ್ಸ್​ ಅಸೋಸಿಯೇಷನ್​ಗಳ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​, ವಿತ್ತ ಖಾತೆ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಕೂಡ ಉಪಸ್ಥಿತರಿರಲಿದ್ದಾರೆ.

ಹೊಸ ವ್ಯವಸ್ಥೆಯಲ್ಲಿ ಡಾಕ್ಯುಮೆಂಟ್ ಐಡೆಂಟಿಫಿಕೇಷನ್ ನಂಬರ್​(ಡಿಐಏನ್​) ಪರಿಚಯಿಸಲಾಗಿದ್ದು, ಇದು ಅಧಿಕೃತ ಸಂವಹನ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ತಂದಿದೆ. ಕೇಂದ್ರ ನೇರ ತೆರಿಗೆ ಮಂಡಳಿ ಇತ್ತೀಚಿನ ವರ್ಷಗಳ ಅವಧಿಯಲ್ಲಿ ಹಲವಾರು ಮಹತ್ವದ ತೆರಿಗೆ ಸುಧಾರಣೆಗಳನ್ನು ಮಾಡಿದ್ದು, ಅದರ ಭಾಗವಾಗಿ ಈ ಪ್ಲಾಟ್​ಫಾರಂ ಪರಿಚಯಿಸಲಾಗುತ್ತಿದೆ. ಕಳೆದ ವರ್ಷ ಕಾರ್ಪೊರೇಟ್ ತೆರಿಗೆಯನ್ನು ಶೇಕಡ 30ರಿಂದ ಶೇಕಡ 22ಕ್ಕೆ ಇಳಿಸಲಾಗಿದೆ. ಹೊಸ ಉತ್ಪಾದನಾ ಘಟಕಗಳಿಗೆ ಈ ತೆರಿಗೆಯನ್ನು ಶೇಕಡ 15ಕ್ಕೆ ಇಳಿಸಲಾಗಿದೆ. ಡಿವಿಡೆಂಡ್​ ಹಂಚಿಕೆ ತೆರಿಗೆಯನ್ನೂ ರದ್ದುಗೊಳಿಸಲಾಗಿದೆ ಎಂದು ಸರ್ಕಾರದ ಪ್ರಕಟಣೆ ಹೇಳಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net