

ನವದೆಹಲಿ: 80 ದಿನಗಳ ಬಳಿಕ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು 60 ಪೈಸೆ ಹೆಚ್ಚಿಸಿವೆ. ಕಳೆದ ಮಾ.16ರಂದು ತೈಲ ಬೆಲೆ ಪರಿಷ್ಕರಣೆ ಆಗಿತ್ತು. ಮಾ.14ರಂದು ಕೇಂದ್ರ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹೆಚ್ಚುವರಿಯಾಗಿ 3 ರೂ. ಸುಂಕ ವಿಧಿಸಿತ್ತು. ಇದರಿಂದ ಪ್ರತಿ ಲೀಟರ್ ಪೆಟ್ರೋಲ್ ಮೇಲೆ ಕೇಂದ್ರದ ತೆರಿಗೆ 22.98 ರೂ. ಮತ್ತು ಡೀಸೆಲ್ ಮೇಲೆ 18.83 ರೂ.ಕ್ಕೆ ಏರಿತು.
ವಿಶ್ವಾದ್ಯಂತ ಬಹುತೇಕ ರಾಷ್ಟ್ರಗಳು ಲಾಕ್ಡೌನ್ ನಿರ್ಬಂಧ ಸಡಿಲಿಸಿರುವುದರಿಂದ ಅಂತಾ ರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್ ಬ್ರೆಂಟ್ ತೈಲದ ಬೆಲೆ 42 ಡಾಲರ್ಗೆ ತಲುಪಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 74.18 ರೂ., ಡೀಸೆಲ್ - 66.54 ರೂ.ಕ್ಕೆ ಏರಿಕೆ ಆಗಿದೆ.
ಇದನ್ನೂ ಓದಿ: ಚಾಮುಂಡಿ ಬೆಟ್ಟದಲ್ಲಿ ದೇವಿ ದರ್ಶನ ಇಂದಿನಿಂದ