ಬ್ಯಾಂಕ್‌ನಲ್ಲಿ ಕಾಸಿಲ್ಲದಿದ್ದರೂ UPI ಮಾಡಿ; 45 ದಿನಗಳವರೆಗೆ ಸಿಗಲಿದೆ ಬಡ್ಡಿ ರಹಿತ ಭರ್ಜರಿ ಲೋನ್..UPI Interest Free Loan

UPI Interest Free Loan
UPI Interest Free Loan
Published on

ಪ್ರಮುಖ ಮುಖ್ಯಾಂಶಗಳು

  • ಯುಪಿಐನಲ್ಲೇ ಸಿಗಲಿದೆ 45 ದಿನಗಳ ಬಡ್ಡಿ ರಹಿತ ಸಾಲ ಲಭ್ಯ
  • 'ಭಾರತ್‌ಪೇ', ಯೆಸ್ ಬ್ಯಾಂಕ್ ಸಹಯೋಗದೊಂದಿಗೆ 'ಭಾರತ್‌ಪೇ ಫ್ಲೆಕ್ಸ್' ಸೇವೆ ಆರಂಭ
  • ಗ್ರಾಹಕರು ಪಾವತಿಸಿದ ಹಣವನ್ನು 45 ದಿನಗಳ ಒಳಗೆ ಹಿಂದಿರುಗಿಸಿದರೆ ಬಡ್ಡಿ ಪಾವತಿಸಬೇಕಿಲ್ಲ
ಬೆಂಗಳೂರು: ಇತ್ತೀಚಿನ ಕಾಲಮಾನದಲ್ಲಿ ಎಲ್ಲರೂ ಆನ್​ಲೈನ್​ ಪಾವತಿಯನ್ನೇ ಹೆಚ್ಚು ಬಳಕೆ ಮಾಡುವುದು. ಒಂದು ರೂಪಾಯಿಗೆ ಖರೀದಿಸುವ ಚಾಕೋಲೇಟ್​ನಿಂದ ಹಿಡಿದು, ಹತ್ತು, ಹದಿನೈದು ಸಾವಿರದವರೆಗೂ ಆನ್​ಲೈನ್​ ವಹಿವಾಟನ್ನೇ ನೆಚ್ಚಿಕೊಂಡಿದ್ದೇವೆ. ಕೆಲವೊಮ್ಮೆ ತಿಂಗಳ ಅಂತ್ಯದಲ್ಲಿ ಹಣ ಖಾಲಿಯಾಗಿ ಸ್ನೇಹಿತರು, ಸಂಬಂಧಿಕರ ಬಳಿ ಸಾಲ ಕೇಳಲು ಹಿಂದೇಟು ಹಾಕುತ್ತೇವೆ. ಅಂತಹ ಇಂಟ್ರೋವರ್ಟ್​ ಪರ್ಸನ್​ಗಳನ್ನು ಗಮನದಲ್ಲಿಟ್ಟುಕೊಂಡು ಭಾರತದ ಪ್ರಮುಖ ಡಿಜಿಟಲ್ ಪಾವತಿ ಸಂಸ್ಥೆ 'ಭಾರತ್‌ಪೇ', ಯೆಸ್ ಬ್ಯಾಂಕ್ ಸಹಯೋಗದೊಂದಿಗೆ 'ಭಾರತ್‌ಪೇ ಫ್ಲೆಕ್ಸ್' ಎಂಬ ವಿನೂತನ ಸೇವೆಯನ್ನು ಆರಂಭಿಸಿದೆ.
ಇನ್ಮುಂದೆ ಅಂಗಡಿಗೆ ಹೋಗಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವಾಗ ಬ್ಯಾಂಕ್ ಅಕೌಂಟ್‌ನಲ್ಲಿ ದುಡ್ಡಿಲ್ಲವೆಂದು ಟೆನ್ಷನ್ ಮಾಡಿಕೊಳ್ಳದೆ ಅರಾಮದಾಯಕಾಗಿ ಸಾಲ ಪಡೆದು ಹಣ ಪಾವತಿ ಮಾಡಬಹುದಾಗಿದೆ.

ಏನಿದು ಭಾರತ್‌ಪೇ ಫ್ಲೆಕ್ಸ್?

ಸಾಮಾನ್ಯವಾಗಿ ನಾವು ಯುಪಿಐ ಮೂಲಕ ಪಾವತಿ ಮಾಡಿದಾಗ, ಆ ಹಣ ನೇರವಾಗಿ ನಮ್ಮ ಬ್ಯಾಂಕ್ ಖಾತೆಯಿಂದ ಕಡಿತಗೊಳ್ಳುತ್ತದೆ. ಆದರೆ, 'ಭಾರತ್‌ಪೇ ಫ್ಲೆಕ್ಸ್' ಎಂಬುದು ಯುಪಿಐ ಆಧಾರಿತ ಸಾಲದ ಸೌಲಭ್ಯವಾಗಿದೆ.
ಗ್ರಾಹಕರು ಅಂಗಡಿಗಳಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪಾವತಿ ಮಾಡಲು, ಆನ್‌ಲೈನ್ ಶಾಪಿಂಗ್ ಮಾಡಲು, ಕರೆಂಟ್ ಬಿಲ್ ಕಟ್ಟಲು, ರೀಚಾರ್ಜ್ ಮಾಡಲು ಹಾಗೂ ಪೆಟ್ರೋಲ್ ಹಾಕಿಸಲು ಈ 'ಕ್ರೆಡಿಟ್ ಲೈನ್' (ಸಾಲ ಸೌಲಭ್ಯ) ಅನ್ನು ಬಳಸಬಹುದು. ಆಕಸ್ಮಿಕವಾಗಿ ಎದುರಾಗುವ ತುರ್ತು ಖರ್ಚುಗಳನ್ನು ನಿಭಾಯಿಸಲು ಇದು ಗ್ರಾಹಕರಿಗೆ ನೆರವಾಗಲಿದೆ.

ಬಡ್ಡಿ ಇಲ್ಲ, ಇಎಂಐ ಪಾವತಿಗೂ ಅವಕಾಶ

  • ಗ್ರಾಹಕರು ಪಾವತಿಸಿದ (ಬಳಸಿದ) ಹಣವನ್ನು 45 ದಿನಗಳ ಒಳಗೆ ಹಿಂದಿರುಗಿಸಿದರೆ ಯಾವುದೇ ಬಡ್ಡಿ ಪಾವತಿಸಬೇಕಾಗಿಲ್ಲ.
  • ಒಂದು ವೇಳೆ ಪೂರ್ತಿ ಹಣವನ್ನು ಒಂದೇ ಬಾರಿಗೆ ಕಟ್ಟಲು ಸಾಧ್ಯವಾಗದಿದ್ದರೆ, ಆ ಮೊತ್ತವನ್ನು ಸುಲಭವಾದ ಇಎಂಐ ಕಂತುಗಳಾಗಿ ಪರಿವರ್ತಿಸಿಕೊಳ್ಳುವ ಅವಕಾಶವಿದೆ.
  • ಆ್ಯಪ್ ಮೂಲಕವೇ ಸಂಪೂರ್ಣ ಡಿಜಿಟಲ್ ಆಗಿ (ಕೆವೈಸಿ) ಖಾತೆ ತೆರೆಯಬಹುದು. ಅರ್ಹರಿಗೆ ಕೇವಲ 3 ನಿಮಿಷಗಳಲ್ಲಿ ಅನುಮೋದನೆ ಸಿಗಲಿದೆ.
  • ಎಷ್ಟು ಸಾಲ ಇದೆ, ಇಎಂಐ ಎಷ್ಟು ಕಟ್ಟಬೇಕು ಎಂಬುದನ್ನು ಆ್ಯಪ್‌ನಲ್ಲೇ ಟ್ರ್ಯಾಕ್ ಮಾಡಬಹುದು ಮತ್ತು ಪ್ರತಿ ಪಾವತಿಗೂ ರಿವಾರ್ಡ್ಸ್ ಗಳಿಸಬಹುದು.
ಈ ಹೊಸ ಸೇವೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು 'ಪೇ ನೌ, ಸೆಟಲ್ ಲೇಟರ್' (ಈಗ ಪಾವತಿಸಿ, ನಂತರ ತೀರಿಸಿ) ಎಂಬ ಜಾಹೀರಾತು ಅಭಿಯಾನವನ್ನು ಸಹ ಕಂಪನಿ ಆರಂಭಿಸಿದೆ.

ಭಾರತ್‌ಪೇ ಫ್ಲೆಕ್ಸ್ ಸೌಲಭ್ಯ ಪಡೆಯುವುದು ಹೇಗೆ?

  • ಭಾರತ್‌ಪೇ (BharatPe) ಆ್ಯಪ್ ತೆರೆದು 'BharatPe Flex' ಮೇಲೆ ಕ್ಲಿಕ್ ಮಾಡಿ.
  • ಡಿಜಿಟಲ್ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
  • ನಿಮಗೆ ಮಂಜೂರಾದ ಕ್ರೆಡಿಟ್ ಲಿಮಿಟ್ (ಸಾಲದ ಮಿತಿ) ಅನ್ನು ಯುಪಿಐಗೆ ಲಿಂಕ್ ಮಾಡಿ.
  • ನಿಮ್ಮ ಯುಪಿಐ ಪಿನ್ ಅನ್ನು ಸೆಟ್ ಮಾಡಿ.
  • ಯಾವುದೇ ಯುಪಿಐ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪಾವತಿ ಆರಂಭಿಸಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net