ಆರ್‌ಎಸ್‌ಕೆಯಲ್ಲೇ ಬಿತ್ತನೆ ಬೀಜ ಖರೀದಿಸಿ

P PURA KRISHI 13
Published on

ಪರಶುರಾಮಪುರ: ರೈತರು ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ಸಿಗುವ ಬಿತ್ತನೆ ಬೀಜಗಳನ್ನು ಖರೀದಿಸುವಂತೆ ಜಿಲ್ಲಾ ಪಂಚಾಯಿತಿ ಸದಸ್ಯ ಟಿ.ಮುತ್ತುರಾಜು ತಿಳಿಸಿದರು.

ಜಿಪಂ, ತಾಪಂ, ಕೃಷಿ ಇಲಾಖೆ ಗ್ರಾಮದ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮುಂಗಾರು ಹಂಗಾಮು ಬಿತ್ತನೆ ಬೀಜಗಳ ವಿತರಣೆ, ಟೋಕನ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸರ್ಕಾರದ ನಿರ್ದೇಶನದಂತೆ ಕೃಷಿ ಇಲಾಖೆ ರೈತರಿಗೆ ಶೇಂಗಾ, ಮೆಕ್ಕೆಜೋಳ, ತೊಗರಿ ಸೇರಿ ಅಗತ್ಯ ಲಘುಪೋಷಕಾಂಶಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತದೆ. ಕರೊನಾ ಹಿನ್ನೆಲೆಯಲ್ಲಿ ಪರಸ್ಪರ ಅಂತರ ಕಾಪಾಡಿಕೊಂಡೇ ಬೀಜ ಖರೀದಿಸಬೇಕು ಎಂದರು.

ಕೃಷಿ ಅಧಿಕಾರಿ ಗಿರೀಶ ಮಾತನಾಡಿ, ಹೋಬಳಿಯ ಹತ್ತು ಗ್ರಾಪಂ ವ್ಯಾಪ್ತಿಯ ಹಳ್ಳಿಗಳ ರೈತರಿಗೆ ನಿಗದಿತ ವೇಳಾಪಟ್ಟಿಯಂತೆ ದಾಖಲೆ ಪಡೆದು ಬಿತ್ತನೆಬೀಜ ವಿತರಿಸಲಾಗುವುದು ಎಂದು ತಿಳಿಸಿದರು.

ತಾಪಂ ಅಧ್ಯಕ್ಷೆ ವಿಜಯಲಕ್ಷಿ ್ಮ, ಸದಸ್ಯೆ ಹನುಮಕ್ಕ, ಕರಡಪ್ಪ, ಗ್ರಾಪಂ ಅಧ್ಯಕ್ಷರಾದ ಎಂ.ಆರ್.ರುದ್ರೇಶ್, ಬೊಮ್ಮಲಿಂಗಪ್ಪ, ರುದ್ರಣ್ಣ, ಹನುಮಂತರಾಯ, ಕೃಷಿ ಅಧಿಕಾರಿಗಳಾದ ಗಿರೀಶ್, ಜೀವನ್, ಆತ್ಮಯೋಜನೆಯ ಪ್ರತಾಪರೆಡ್ಡಿ, ಕೃಷಿಕರಾದ ತಿಮ್ಮಣ್ಣ, ಸತ್ಯನಾರಾಯಣ, ಲಕ್ಷ್ಮಣ, ಮಹಾಲಿಂಗಪ್ಪ, ನಾಗಭೂಷಣ, ಜಯಣ್ಣ, ರುದ್ರಣ್ಣ ಪಗಡಲಬಂಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net