ಮಾರಟೋರಿಯಂ ಒಳ್ಳೆಯದಲ್ಲವೇ ಅಲ್ಲ: ಸುಪ್ರೀಂಕೋರ್ಟ್‌ಗೆ ಖಡಕ್ಕಾಗಿ ಹೇಳಿದ ಆರ್‌ಬಿಐ!

RBI-logo
Published on

ನವದೆಹಲಿ: ಕರೊನಾ ಸಂದರ್ಭದಲ್ಲಿ ಸಾಲದ ಸಮಾನ ಮಾಸಿಕ ಕಂತು ಪಾವತಿಸುವುದನ್ನು ಮುಂದೂಡಲು ಅವಕಾಶ ನೀಡುವ ‘ಮಾರಟೋರಿಯಂ ಯೋಜನೆ’ ಗ್ರಾಹಕರಿಗೂ ಒಳ್ಳೆಯದಲ್ಲ, ಬ್ಯಾಂಕುಗಳಿಗೂ ಒಳ್ಳೆಯದಲ್ಲ. ಇಂತಹ ವಿಷಯಗಳಲ್ಲಿ ಕೋರ್ಟುಗಳು ಹಸ್ತಕ್ಷೇಪ ಮಾಡುವುದೂ ಸರಿಯಲ್ಲ ಎಂದು ರಿಸರ್ವ್ ಬ್ಯಾಂಕ್ ಇಂದು ಸುಪ್ರೀಂ ಕೋರ್ಟಿಗೆ ಖಡಕ್ಕಾಗಿ ಹೇಳಿದೆ.

ಅವಧಿಯಲ್ಲಿನ ಚಕ್ರ ಡ್ಡಿ ಮನ್ನಾ ಕುರಿತು ಕೇಂದ್ರ ಸರ್ಕಾರ ಅಕ್ಟೋರ್ 3ರಂದು ಸಲ್ಲಿಸಿದ್ದ ಅಫಿಡವಿಟ್‌ಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ‘‘ಅರ್ಜಿದಾರರು ಎತ್ತಿದ್ದ ಹಲವು ವಿಚಾರಗಳಿಗೆ ಉತ್ತರಿಸುವಲ್ಲಿ ಸರ್ಕಾರ ವಿಲವಾಗಿದ್ದು ಅಕ್ಟೋರ್ 13ರೊಳಗೆ ಪರಿಷ್ಕೃತ ವರದಿ ಸಲ್ಲಿಸಬೇಕು’’ ಎಂದು ಕೇಂದ್ರ ಹಾಗೂ ಆರ್‌ಬಿಐಗೆ ನ್ಯಾಯಾಲಯ ಸೂಚಿಸಿತ್ತು.

ಈ ಹಿನ್ನೆಲೆಯಲ್ಲಿ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ‘‘ಮಾರಟೋರಿಯಂ ಅವಧಿಯನ್ನು ಆರು ತಿಂಗಳಿಗಿಂತ ಹೆಚ್ಚಿಗೆ ವಿಸ್ತರಿಸಿದರೆ ಆರ್ಥಿಕ ಅಶಿಸ್ತು ಉಂಟಾಗುತ್ತದೆ. ಹಾಗಾಗಿ ಅದನ್ನು ಮುಂದುವರಿಸುವುದು ಸಲ್ಲದು’’ ಎಂದು ಕೋರ್ಟ್‌ಗೆ ಆರ್‌ಬಿಐ ಹೇಳಿತು. ನಂತರ ಅಕ್ಟೋರ್ 13ಕ್ಕೆ ವಿಚಾರಣೆ ಮುಂದೂಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net