ಕೋಟಿ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆಗೆ ಸೂಚನೆ

kisan card
Published on

ಬೆಂಗಳೂರು: ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ 1 ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ಫಲಾನುಭವಿಗಳಿಗೆ ಫೆ.24ರೊಳಗೆ 1 ಕೋಟಿ ಕಿಸಾನ್ ಕ್ರೆಡಿಟ್ ಕಾರ್ಡ್ (ಬೆಳೆಸಾಲ) ವಿತರಿಸಲು ಬ್ಯಾಂಕ್​ಗಳಿಗೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ.

ಪಿ.ಎಂ. ಕಿಸಾನ್ ಯೋಜನೆಯಡಿಯಲ್ಲಿ ದೇಶಾದ್ಯಾಂತ 9.22 ಕೋಟಿ ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ. ಇದರಲ್ಲಿ 6.76 ಕೋಟಿ ಫಲಾನುಭವಿಗಳು ಕಿಸಾನ್ ಕ್ರೆಡಿಟ್ ಕಾರ್ಡ್ (ಬೆಳೆಸಾಲ) ಪಡೆದಿದ್ದು 2.47 ಕೋಟಿ ಫಲಾನುಭವಿಗಳು ಇದರ ಲಾಭ ಪಡೆಯಲು ಬಾಕಿ ಇರುತ್ತಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 39,143 ರೈತರು ಪಿ.ಎಂ. ಕಿಸಾನ್ ಯೋಜನೆಯಡಿಯಲ್ಲಿ ನೋಂದಣಿ ಮಾಡಿಸಿದ್ದಾರೆ. ಕೇಂದ್ರ ಸರ್ಕಾರದ ವತಿಯಿಂದ 6 ಸಾವಿರ ರೂ.ಗಳನ್ನು ಮೂರು ಸಮ ಕಂತುಗಳಲ್ಲಿ ನೇರವಾಗಿ ನೋಂದಾಯಿಸಿರುವ ರೈತರ ಖಾತೆಗಳಿಗೆ ಜಮಾ ಮಾಡಲಾಗುತ್ತಿದೆ. ಇದರಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯದ ರೈತರು ತಮ್ಮ ಸೇವಾ ಕ್ಷೇತ್ರದ ಬ್ಯಾಂಕ್ ಖಾತೆಯನ್ನು ಸಂರ್ಪಸಿ ಬೆಳೆಸಾಲ (ಕೆ.ಸಿ.ಸಿ.) ಪಡೆಯಲು ವಿನಂತಿಸಲಾಗಿದೆ.

ಜಿಲ್ಲೆಯ ಎಲ್ಲ ಬ್ಯಾಂಕ್ ವ್ಯವಸ್ಥಾಪಕರು ಪಿ.ಎಂ. ಕಿಸಾನ್ ಪಲಾನುಭವಿ ಗಳಿಗೆ ನಿಯಮಾನುಸಾರ ಆದ್ಯತೆ ಮೇರೆಗೆ ಬೆಳೆಸಾಲ (ಕೆ.ಸಿ.ಸಿ) ವಿತರಿಸಲು ಸೂಚಿಸಿದೆ. ಕೇಂದ್ರ ಸರ್ಕಾರದ ಫೆ.24 ವರೆಗೆ ನಿಗದಿಪಡಿಸಿದ ಗುರಿ ಸಾಧನೆಗೆ ನಮ್ಮ ಜಿಲ್ಲೆಯಿಂದ ಅತಿ ಹೆಚ್ಚು ಕೊಡುಗೆ ನೀಡಲು ಜಿಲ್ಲಾ ಮಟ್ಟದ ಎಲ್ಲ ಬ್ಯಾಂಕ್​ಗಳಿಗೆ ನಿರ್ದೇಶಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ. ಶಿವಮೂರ್ತಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net