ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಎನ್​ಪಿಎ 7.27 ಲಕ್ಷ ಕೋಟಿ ರೂಪಾಯಿ

NPA-Indian-Banks 3 FEB 20
Published on

ಆರ್​ಬಿಐ ಡೇಟಾ ಪ್ರಕಾರ, ಒಂದು ಲಕ್ಷ ಮತ್ತು ಮೇಲ್ಪಟ್ಟು ಮೌಲ್ಯದ ವಂಚನೆ ನಡೆದ ಪ್ರಕರಣಗಳ ಮೌಲ್ಯ 2016-17ರಲ್ಲಿ 23,934 ಕೋಟಿ ರೂಪಾಯಿ ಇತ್ತು. ಇದು 2017-18ರಲ್ಲಿ 41,167 ಕೋಟಿ ರೂಪಾಯಿ, 2018-19ರಲ್ಲಿ 71,543 ಕೋಟಿ ರೂಪಾಯಿ ಮತ್ತು ಈ ಹಣಕಾಸು ವರ್ಷದ ಆರಂಭದ ಅರ್ಧ ಭಾಗದಲ್ಲಿ 1,13,374 ಕೋಟಿ ರೂಪಾಯಿ ಆಗಿದೆ ಎಂದು ಅವರು ವಿವರಿಸಿದರು. (ಏಜೆನ್ಸೀಸ್)

ಷೆಡ್ಯೂಲ್ಡ್​ ಕಮರ್ಷಿಯಲ್ ಬ್ಯಾಂಕುಗಳು ಮತ್ತು ಆಯ್ದ ಹಣಕಾಸು ಸಂಸ್ಥೆಗಳಿಗೆ ಈ ಹಣಕಾಸು ವರ್ಷದ ಆರಂಭದ ಅರ್ಧ ಭಾಗದಲ್ಲಿ ಆಗಿರುವ ವಂಚನೆ ಪ್ರಮಾಣ 1,13,374 ಕೋಟಿ ರೂಪಾಯಿ ಎಂಬ ಅಂಶವನ್ನೂ ಠಾಕೂರ್ ಬಹಿರಂಗಪಡಿಸಿದರು.

ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್​ ಲೋಕಸಭೆಯಲ್ಲಿ ಈ ವಿಷಯ ತಿಳಿಸಿದ್ದು, ಆರ್​ಬಿಐ ಪ್ರಕಟಿಸಿರುವ ಜಾಗತಿಕ ವಹಿವಾಟಿನ ಡೇಟಾ ಪ್ರಕಾರ, ಪಿಎಸ್​ಬಿಗಳ ಒಟ್ಟು ಎನ್​ಪಿಎ ಪ್ರಮಾಣ 2015ರ ಮಾರ್ಚ್ 31ರ ಪ್ರಕಾರ 2,79,016 ಕೋಟಿ ರೂಪಾಯಿ ಇದ್ದದ್ದು, 2017ರ ಮಾರ್ಚ್ 31ಕ್ಕೆ 6,84,732 ಕೋಟಿ ರೂಪಾಯಿ, 2018ರ ಮಾರ್ಚ್​ 31ಕ್ಕೆ 8,95,601 ಕೋಟಿ ರೂಪಾಯಿ ಇತ್ತು. ಸರ್ಕಾರದ ಸ್ಟ್ರಾಟಜಿಯ ಅನ್ವಯ ಸುಧಾರಣಾ ಕ್ರಮಗಳನ್ನು ಕೈಗೊಂಡ ಕಾರಣ, 2019ರ ಸೆಪ್ಟೆಂಬರ್ 30ರ ವೇಳೆಗೆ ಎನ್​ಪಿಎ ಪ್ರಮಾಣ 1,68,305 ಕೋಟಿ ಇಳಿಕೆಯಾಗಿದ್ದು, 7,27,296 ಕೋಟಿಗೆ ಇಳಿಕೆಯಾಗಿದೆ ಎಂದು ಅವರು ವಿವರಿಸಿದರು.

ನವದೆಹಲಿ: ಸಾರ್ವಜನಿಕ ಸ್ವಾಮ್ಯದ ಬ್ಯಾಂಕು(ಪಿಎಸ್​ಬಿ)ಗಳ ಅನುತ್ಪಾದಕ ಆಸ್ತಿ(ಎನ್​ಪಿಎ) ಪ್ರಮಾಣ 2019ರ ಸೆಪ್ಟೆಂಬರ್ 30ಕ್ಕೆ ಅನ್ವಯವಾಗುವಂತೆ 7.27 ಲಕ್ಷ ಕೋಟಿ ರೂಪಾಯಿ ತಲುಪಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಸಂಸತ್ತಿಗೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net