ಇಎಂಐ ಪಾವತಿ ಗೊಂದಲ ಬೇಡ

sudir april 20
Published on

ಸಾಲದ ಇಎಂಐ ಮುಂದೂಡಿಕೆ ಲಾಭವೋ, ನಷ್ಟವೋ? ನಾನು ಆರ್​ಬಿಐ ನೀಡಿರುವ ಮೊರಟೊರಿಯಂ ಪಡೆದುಕೊಳ್ಳಲೇ ಅಥವಾ ಎಂದಿನಂತೆ ಸಾಲದ ಮಾಸಿಕ ಕಂತು ಪಾವತಿಸುವುದು ಸೂಕ್ತವೇ? ಹೀಗೆ ಹತ್ತಾರು ಪ್ರಶ್ನೆಗಳು ಜನಸಾಮಾನ್ಯರಲ್ಲಿವೆ. ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುವ ಮಾಹಿತಿ ಇಲ್ಲಿದೆ.

ಬ್ಯಾಂಕ್​ಗಳ ಲೆಕ್ಕಾಚಾರ ಹೇಗಿರುತ್ತೆ ಗೊತ್ತಾ?: ಭಾರತೀಯ ರಿಸರ್ವ್ ಬ್ಯಾಂಕ್ ಸಾಲ ಮನ್ನಾ ಮಾಡಿಲ್ಲ. ಮೊರಟೊರಿಯಂ ಅಂದರೆ ಸಾಲದ ಕಂತುಗಳನ್ನು ಮೂರು ತಿಂಗಳ ಮಟ್ಟಿಗೆ ಮುಂದೂಡಲು ಅವಕಾಶ ನೀಡಿದೆ. ಉದಾಹರಣೆಗೆ, ನೀವು -ಠಿ; 30 ಲಕ್ಷ ಗೃಹಸಾಲ ಪಡೆದು ತಿಂಗಳಿಗೆ 30 ಸಾವಿರ ಇಎಂಐ ಪಾವತಿಸುತ್ತಿರುತಿ್ತೕರಿ ಎಂದು ಭಾವಿಸೋಣ. ಮೊರಟೊರಿಯಂನ ಕಾರಣದಿಂದಾಗಿ ನೀವು 3 ತಿಂಗಳು ಇಎಂಐ ಕಟ್ಟುವುದಿಲ್ಲ ಎಂದಿಟ್ಟುಕೊಳ್ಳಿ. ಆಗ ನಿಮ್ಮ 3 ತಿಂಗಳ ಇಎಂಐ ಮೊತ್ತ (30 ಸಾವಿರ ್ಡ 3= 90,000) 90 ಸಾವಿರವನ್ನು ನಿಮ್ಮ ಅಸಲಿನ ಮೊತ್ತದ ಜತೆಗೆ ಸೇರಿಸಿ ಬ್ಯಾಂಕ್ ಬಡ್ಡಿ ಹೇರುತ್ತದೆ. ಇದರಿಂದಾಗಿ ಸಾಲ ಮರುಪಾವತಿಯ ಅವಧಿ 6ರಿಂದ 10 ತಿಂಗಳವರೆಗೂ ವಿಸ್ತರಣೆ ಆಗಲಿದೆ. (ಇನ್ನಷ್ಟು ಸ್ಪಷ್ಟತೆಗೆ ಪಟ್ಟಿ ಗಮನಿಸಿ)

ನೀವೇನು ಮಾಡಬಹುದು?: ಕರೊನಾ ಸೋಂಕಿನ ಕಾರಣದಿಂದಾಗಿ ದೇಶವೇ ಲಾಕ್​ಡೌನ್ ಆಗಿರುವುದರಿಂದ ಸಾಲದ ಮಾಸಿಕ ಕಂತು (ಇಎಂಐ) ಪಾವತಿಗೆ ತೊಡಕಾಗಬಾರದು ಎನ್ನುವ ಕಾರಣದಿಂದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಮಾರ್ಚ್1ರಿಂದ ಮೇ 30ರವರೆಗಿನ ಅವಧಿಯ ಸಾಲದ ಕಂತುಗಳನ್ನು ಮುಂದೂಡಲು (ಮೊರಟೊರಿಯಂ) ಅವಕಾಶ ಕಲ್ಪಿಸಿದೆ, ಲಾಕ್​ಡೌನ್ ಸಂದರ್ಭದಲ್ಲೂ ನಿಮಗೆ ಸಂಬಳ ಬರುತ್ತಿದೆ ಮತ್ತು ನಿಮ್ಮ ಬಳಿ ಮುಂದಿನ 6 ತಿಂಗಳ ಎಲ್ಲ ತುರ್ತು ಖರ್ಚುಗಳಿಗೆ ಸಾಕಷ್ಟು ಹಣ ಇದೆ ಎಂದಾದಲ್ಲಿ ಸಾಲದ ಕಂತು ಮುಂದೂಡಿಕೆ ಆಯ್ಕೆ ಪರಿಗಣಿಸುವ ಅಗತ್ಯವಿಲ್ಲ.

ಎಂದಿನಂತೆ ಈ ಮೂರು ತಿಂಗಳ ಅವಧಿಯಲ್ಲಿ ಮಾಸಿಕ ಕಂತು ಪಾವತಿಸುತ್ತ ಹೋಗಬಹುದು. ಆದರೆ ನೆನಪಿನಲ್ಲಿಡಿ, ಎಂದಿನಂತೆ ಮಾಸಿಕ ಕಂತು ಪಾವತಿಸುವ ಉದ್ದೇಶ ಹೊಂದಿದ್ದರೆ ಬ್ಯಾಂಕಿನ ರಿಲೇಷನ್​ಶಿಪ್ ಮ್ಯಾನೇಜರ್​ಗೆ ಈ ಬಗ್ಗೆ ತಿಳಿಸಬೇಕು, ಕೆಲ ಬ್ಯಾಂಕ್​ಗಳಲ್ಲಿ ಆನ್​ಲೈನ್ ಮತ್ತು ಇಮೇಲ್ ಮೂಲಕವೂ ಕೋರಿಕೆ ಸಲ್ಲಿಸುವ ಅವಕಾಶವಿದೆ, ನಿಮ್ಮ ಬಳಿ ತುರ್ತು ನಿಧಿ ಇಲ್ಲ, ತಾತ್ಕಾಲಿಕವಾಗಿ ಸಾಕಷ್ಟು ಹಣದ ಲಭ್ಯತೆ ಇಲ್ಲ ಎಂದಾದಲ್ಲಿ ಆರ್​ಬಿಐ ನೀಡಿರುವ ಸಾಲದ ಕಂತು ಮುಂದೂಡಿಕೆ ಆಯ್ಕೆ ಪರಿಗಣಿಸುವುದು ಸೂಕ್ತ. ಕರೊನಾ ಸೋಂಕಿನಿಂದಾಗಿ ಇಡೀ ಜಗತ್ತಿನ ಆರ್ಥಿಕತೆ ಹಳಿ ತಪ್ಪಿದೆ. ಮುಂದಿನ ಒಂದೆರಡು ವರ್ಷಗಳಲ್ಲಿ ಆರ್ಥಿಕ ಹಿಂಜರಿತ ಎಲ್ಲರನ್ನೂ ಕಾಡುತ್ತದೆ. ಆರ್ಥಿಕ ಹಿಂಜರಿತದ ಪರಿಣಾಮ ನೇರವಾಗಿ ಉದೊ್ಯೕಗದ ಮೇಲೆ ಆಗುತ್ತದೆ. ಸಂಭಾವ್ಯ ಉದೊ್ಯೕಗ ನಷ್ಟ ಮುಂತಾದ ಸವಾಲುಗಳನ್ನು ಎದುರಿಸಲು ನಿಮಗೆ ಮೊರಟೊರಿಯಂ ಸಹಾಯಕ್ಕೆ ಬರುತ್ತದೆ. ಕ್ರೆಡಿಟ್ ಸೊ್ಕೕರ್ (ಸಿಬಿಲ್ ಸೊ್ಕೕರ್) ಮೇಲೆ ಯಾವುದೇ ಪರಿಣಾಮ ಆಗದ ರೀತಿ ಮೂರು ತಿಂಗಳ ಮಟ್ಟಿಗೆ ಸಾಲದ ಕಂತು

ಮುಂದೂಡಲು ಸಂಕಷ್ಟದ ಕಾಲದಲ್ಲಿ ಸಿಕ್ಕಿರುವ ಅವಕಾಶವನ್ನು ಸದ್ಯದ ಮಟ್ಟಿಗೆ ‘ಮರುಭೂಮಿಯಲ್ಲಿ ಸಿಕ್ಕ ಓಯಸಿಸ್’ ಎಂದುಕೊಳ್ಳಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net