

ಬೆಂಗಳೂರು: ಕಬ್ಬಿಣದ ಸಿಲಿಂಡರ್ಗಳ ಸ್ಪೋಟದಿಂದ ಭಾರಿ ಅನಾಹುತಗಳಾಗುತ್ತವೆ. ಇದನ್ನು ತಡೆಗಟ್ಟಲು ‘ಗೋ ಗ್ಯಾಸ್’ ಕಂಪನಿ ಎಲೈಟ್ ಕಾಂಪೋಸಿಟ್ ಸಂಯೋಜಿತ ತಂತ್ರಜ್ಞಾನದಿಂದ ಸ್ಫೋಟ ಗೊಳ್ಳದ ಸಿಲಿಂಡರ್ ಪರಿಚಯಿಸಿದೆ. ಜತೆಗೆ ಗ್ರಾಹಕರು ಸರಳವಾಗಿ ತ್ವರಿತವಾಗಿ ಗ್ಯಾಸ್ ಸಂಪರ್ಕ ಪಡೆಯಲು ಅವಕಾಶ ಕಲ್ಪಿಸಿದೆ.
ಸಾಮಾನ್ಯ ಕಬ್ಬಿಣದ ಸಿಲಿಂಡರ್ಗೆ ಹೋಲಿಸಿದರೆ ಗೋಗ್ಯಾಸ್ ಸಿಲಿಂಡರ್ ತೂಕದಲ್ಲಿ ಅರ್ಧದಷ್ಟು ಕಡಿಮೆ ಇದೆ. ಜತೆಗೆ ಹೆಚ್ಚು ಬಾಳಿಕೆ ಬರುತ್ತದೆ. ವೃದ್ಧರು ಕೂಡ ಸುಲಭವಾಗಿ ಇದನ್ನು ಸಾಗಿಸಬಹುದು. ಪಾರದರ್ಶಕವಾಗಿರುವುದರಿಂದ ಹೊರಗಿನಿಂದಲೇ ಸಿಲಿಂಡರ್ನಲ್ಲಿ ಎಷ್ಟು ಪ್ರಮಾಣದ ಅನಿಲ ಇದೆ ಎಂಬುದನ್ನು ತಿಳಿದುಕೊಳ್ಳಬಹುದು.
ಸುಲಭ ಸಂಪರ್ಕ: ದೇಶದಲ್ಲಿ ಪ್ರತಿ ತಿಂಗಳು 1 ಕೋಟಿ ಜನ ವಿವಿಧ ಕಾರಣಗಳಿಗಾಗಿ ತಮ್ಮ ವಾಸಸ್ಥಳಗಳನ್ನು ಬದಲಿಸುತ್ತಾರೆ. ಅವರೆಲ್ಲರಿಗೂ ಅನುಕೂಲವಾಗುವಂತೆ ಎಲೈಟ್ ಗೋ ಗ್ಯಾಸ್ ತ್ವರಿತ ಎಲ್ಪಿಜಿ ಸಂಪರ್ಕಗಳನ್ನು ಸುಲಭವಾಗಿ ಒದಗಿಸುತ್ತದೆ. ವರ್ಗಾವಣೆ ಸಂದರ್ಭದಲ್ಲಿ ಇತರ ನಗರಗಳಲ್ಲಿಯೂ ಸುಲಭವಾಗಿ ಸಂಪರ್ಕ ಪಡೆಯಲು ಅವಕಾಶ ನೀಡುತ್ತಿದೆ. ನವವಿವಾಹಿತರಿಗೆ ಉಡುಗೊರೆಯಾಗಿಯೂ ಇದನ್ನು ಕೊಡಬಹುದಾಗಿದೆ.
4,499 ರೂ. ಪಾವತಿಸಬೇಕು
ಗ್ಯಾಸ್ ಸಂಪರ್ಕ ಪಡೆಯಲು ವಾರಗಟ್ಟಲೆ ಕಾಯಬೇಕಿಲ್ಲ. ಹತ್ತಿರದ ಗೋ ಗ್ಯಾಸ್ ವ್ಯಾಪಾರಿಗಳಿಗೆ ಗುರುತಿನಚೀಟಿ, ವಿಳಾಸದ ಮಾಹಿತಿ ಜತೆಗೆ 4,499 ರೂ. ಶುಲ್ಕ ಪಾವತಿಸಿದರೆ ಸಂಪರ್ಕ ನೀಡಲಾಗುತ್ತದೆ. ಪಾವತಿಸಿದ ಹಣಕ್ಕೆ 10 ಕೆ.ಜಿ. ಭರ್ತಿಯಾದ ಸ್ಫೋಟ ನಿರೋಧಕ ಗ್ಯಾಸ್ ಸಿಲಿಂಡರ್, ಗ್ಲಾಸ್ ಟಾಪ್ನ 3 ಬರ್ನರ್ ಗ್ಯಾಸ್ ಸ್ಟೌ, ರೆಗ್ಯುಲೇಟರ್, ಪೈಪ್ ನೀಡಲಾಗುತ್ತದೆ.
22 ರಾಜ್ಯಗಳಲ್ಲಿ ಸೇವೆ
ದೇಶದ 22 ರಾಜ್ಯಗಳಲ್ಲಿ 1,200ಕ್ಕೂ ಹೆಚ್ಚು ವಿತರಕರು ಮತ್ತು ವ್ಯಾಪಾರಿಗಳು ಗ್ರಾಹಕರ ಸೇವೆಗೆ ಲಭ್ಯರಿದ್ದಾರೆ. ಸಿಲಿಂಡರ್ ಮರುಪೂರಣ ಮತ್ತು ಪೂರೈಕೆ ಮಾಡಲು 58 ಬಾಟ್ಲಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಒಂದು ರಾಜ್ಯದಲ್ಲಿನ ಸಂಪರ್ಕವನ್ನು ಮತ್ತೊಂದು ರಾಜ್ಯದಲ್ಲೂ ಪಡೆದುಕೊಳ್ಳುವ ಸೌಲಭ್ಯವಿದೆ. ಗೋಗ್ಯಾಸ್ ಖಾಸಗಿ ಕಂಪನಿ ಯಾಗಿರುವುದರಿಂದ, ಸಬ್ಸಿಡಿ ಸಿಗುವುದಿಲ್ಲ.