2000 ರೂ. ನೋಟು ರದ್ದತಿ ಪ್ರಸ್ತಾಪ ಇಲ್ಲ

NIRMALA REACTS
Published on

ನವದೆಹಲಿ: ಗ್ರಾಹಕರಿಗೆ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ನೀಡದಂತೆ ಬ್ಯಾಂಕ್​ಗಳಿಗೆ ನಿರ್ದೇಶನ ನೀಡಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಸ್ಪಷ್ಟಪಡಿಸಿದ್ದಾರೆ.

ಸಾರ್ವಜನಿಕ ರಂಗದ ಬ್ಯಾಂಕ್​ಗಳ ಮುಖ್ಯಸ್ಥರ ಸಭೆೆಯೊಂದರಲ್ಲಿ ಮಾತನಾಡಿದ ಸಚಿವರು, ‘ನನಗೆ ಗೊತ್ತಿರುವ ಪ್ರಕಾರ ಬ್ಯಾಂಕ್​ಗಳಿಗೆ ಈ ರೀತಿಯ ಯಾವುದೇ ಸೂಚನೆಯನ್ನು ನೀಡಲಾಗಿಲ್ಲ’ ಎಂದರು. ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳು ಎಟಿಎಂಗಳಲ್ಲಿ ಸಿಗುತ್ತಿಲ್ಲ. ಕ್ರಮೇಣ ಅದನ್ನು ಚಲಾವಣೆಯಿಂದ ರದ್ದುಡಿಸಲಾಗುತ್ತದೆ ಎಂಬ ವ್ಯಾಪಕ ಊಹಾಪೋಹಗಳ ಹಿನ್ನೆಲೆಯಲ್ಲಿ ಸಚಿವೆ ಸೀತಾರಾಮನ್ ಈ ಸ್ಪಷ್ಟನೆ ನೀಡಿದ್ದಾರೆ.

2000 ರೂಪಾಯಿಗೆ ಚಿಲ್ಲರೆ ಸಿಗದೆ ಜನರು ಸಮಸ್ಯೆ ಎದುರಿಸುತ್ತಿರುವುದರಿಂದ ಅವುಗಳನ್ನು ವಿತರಿಸದಿರಲು ಕೆಲವು ಬ್ಯಾಂಕ್​ಗಳು ನಿರ್ಧರಿಸಿವೆ ಎಂದು ವರದಿಯಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net