2020, ಹೊಸವರ್ಷ: ಗೋಲ್ಡನ್ ಲೈಫಿಗೆ ಸಿ.ಎಸ್.ಸುಧೀರ್ ಸೂಪರ್ ಐಡಿಯಾ...!

New Year 31 Dec 19
Published on

ಒಂದೊಳ್ಳೆ ಲೈಫು, ಚಿಕ್ಕದಾದ್ರೂ ಚೊಕ್ಕ ಕೆಲಸ. ಅದ್ದೂರಿ ಅಲ್ಲದಿದ್ರೂ ಗೌರವವಾಗಿ ಬದುಕಿ, ಸ್ವಲ್ಪ ಉಳಿಸಿ ಕೂಡಿಡುವಷ್ಟು ಆದಾಯ.... ಇಂತಹ ಸಣ್ಣ ಸಣ್ಣ ಕನಸುಗಳನ್ನು ಹೊತ್ತ ಎಷ್ಟೋ ಜೀವಗಳು ಇವುಗಳ ನನಸಿನ ಬಗ್ಗೆ ಪ್ರತಿನಿತ್ಯ ಕನವರಿಸುತ್ತಿರುತ್ತವೆ. ತೋಳಲ್ಲಿ ಶಕ್ತಿ ಇದ್ದರೂ ಏನು ಮಾಡಬೇಕೆಂಬ ಗೊಂದಲ, ಗೋಜಲು. ಏನು ಮಾಡಿದರೆ ಅದೇನು ಆಗುವುದೋ ಎಂಬ ಭಯ, ದುಗುಡ. ಈ ಆತಂಕ, ಭಯವನ್ನು ಗಂಟು ಮೂಟೆ ಕಟ್ಟಿ ಪಕ್ಕಕ್ಕಿಟ್ಟು ಮುನ್ನಡೆದ ಅದೆಷ್ಟೋ ಮಂದಿ ಕೇವಲ ಆತ್ಮವಿಶ್ವಾಸ ಎಂಬ ಬಂಡವಾಳ ಹೂಡಿ ಕೋಟಿ ಕೋಟಿ ಗಳಿಸುತ್ತಿದ್ದಾರೆ. ಇಂತಹ ಹಲವು ಸ್ಪೂರ್ತಿದಾಯಕರ ಜತೆಗೆ ವಿಜಯವಾಣಿಯ ಅಪಾರ ಓದುಗರು ನ್ಯಾಯಮಾರ್ಗದಿಂದ ದುಡಿಮೆ ದುಪ್ಪಟ್ಟು ಮಾಡುವ ಬಗ್ಗೆ ತಮ್ಮ ಅನುಭವ, ಸಲಹೆಗಳನ್ನು ಧಾರೆ ಎರೆದಿದ್ದಾರೆ. ಹೊಸ ವರ್ಷದ ದಿನ ನೀವು ಓದುವ ಈ ಆತ್ಮವಿಶ್ವಾಸದ ಸೂತ್ರಗಳು ನಿಮ್ಮ ಜೀವನಕ್ಕೆ ಹೊಸ ದಾರಿಯಾಗಲಿ ಎಂಬುದು ವಿಜಯವಾಣಿ ಆಶಯ, ಕಳಕಳಿ.

ಪಾರ್ಟ್ ಟೈಂ ಕೆಲಸ ಮಾಡಿ
ಕೆಲಸದ ಜತೆಯಲ್ಲೇ ಮ್ಯೂಚುವಲ್ ಫಂಡ್, ಎಫ್​ಡಿಯಂಥ ಹೂಡಿಕೆಯಿಂದಲೂ ಆದಾಯ ಹೆಚ್ಚಿಸಿಕೊಳ್ಳಬಹುದು. ನಮ್ಮ ಕೆಲಸದ ಪರಿಣತಿಯನ್ನು ಪಾರ್ಟ್​ಟೈಂ ಕೆಲಸದತ್ತ ತಿರುಗಿಸಿ ಆದಾಯ ಗಳಿಸಬಹುದು. ಅದು ರೈತರು, ವೇತನ ಪಡೆಯುವವರಿಗೂ ಅನ್ವಯವಾಗುತ್ತದೆ. ಎಲ್ಲರೂ ತಮ್ಮ ಮೂಲ ಆದಾಯದೊಂದಿಗೆ ಮತ್ತೊಂದು ಆದಾಯದ ಮೂಲ ಹುಡುಕಿಕೊಳ್ಳುವುದು ಒಳಿತು. ಅದರ ಜತೆಗೆ ಕಾಲಕ್ಕೆ ತಕ್ಕಂತೆ ಪರಿಣಿತಿ ಹೊಂದಿ ಕೆಲಸದಲ್ಲಿ ಬದಲಾವಣೆ ತಂದುಕೊಳ್ಳಬೇಕು. ಅದರಿಂದ ಕಾರ್ಯಕ್ಷೇತ್ರದಲ್ಲಿ ಬೆಳವಣಿಗೆಗೂ ಕಾರಣವಾಗುತ್ತದೆ.

| ಸಿ.ಎಸ್.ಸುಧೀರ್ ಇಂಡಿಯಾ ಮನಿ ಡಾಟ್​ಕಾಮ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net