2020 ಹೊಸವರ್ಷ: ಗೋಲ್ಡನ್ ಲೈಫಿಗೆ ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ಸೂಪರ್ ಐಡಿಯಾ

d-roopa IPS 1 JAN 20
Published on
ಒಂದೊಳ್ಳೆ ಲೈಫು, ಚಿಕ್ಕದಾದ್ರೂ ಚೊಕ್ಕ ಕೆಲಸ. ಅದ್ದೂರಿ ಅಲ್ಲದಿದ್ರೂ ಗೌರವವಾಗಿ ಬದುಕಿ, ಸ್ವಲ್ಪ ಉಳಿಸಿ ಕೂಡಿಡುವಷ್ಟು
ಆದಾಯ…. ಇಂತಹ ಸಣ್ಣ ಸಣ್ಣ ಕನಸುಗಳನ್ನು ಹೊತ್ತ ಎಷ್ಟೋ ಜೀವಗಳು ಇವುಗಳ ನನಸಿನ ಬಗ್ಗೆ ಪ್ರತಿನಿತ್ಯ ಕನವರಿಸುತ್ತಿರುತ್ತವೆ. ತೋಳಲ್ಲಿ ಶಕ್ತಿ ಇದ್ದರೂ ಏನು ಮಾಡಬೇಕೆಂಬ ಗೊಂದಲ, ಗೋಜಲು. ಏನು ಮಾಡಿದರೆ ಅದೇನು ಆಗುವುದೋ ಎಂಬ ಭಯ, ದುಗುಡ. ಈ ಆತಂಕ, ಭಯವನ್ನು ಗಂಟು ಮೂಟೆ ಕಟ್ಟಿ ಪಕ್ಕಕ್ಕಿಟ್ಟು ಮುನ್ನಡೆದ ಅದೆಷ್ಟೋ ಮಂದಿ ಕೇವಲ ಆತ್ಮವಿಶ್ವಾಸ ಎಂಬ ಬಂಡವಾಳ ಹೂಡಿ ಕೋಟಿ ಕೋಟಿ ಗಳಿಸುತ್ತಿದ್ದಾರೆ. ಇಂತಹ ಹಲವು ಸ್ಪೂರ್ತಿದಾಯಕರ ಜತೆಗೆ ವಿಜಯವಾಣಿಯ ಅಪಾರ ಓದುಗರು ನ್ಯಾಯಮಾರ್ಗದಿಂದ ದುಡಿಮೆ ದುಪ್ಪಟ್ಟು ಮಾಡುವ ಬಗ್ಗೆ ತಮ್ಮ ಅನುಭವ, ಸಲಹೆಗಳನ್ನು ಧಾರೆ ಎರೆದಿದ್ದಾರೆ. ಹೊಸ ವರ್ಷದ ದಿನ ನೀವು ಓದುವ ಈ ಆತ್ಮವಿಶ್ವಾಸದ ಸೂತ್ರಗಳು ನಿಮ್ಮ ಜೀವನಕ್ಕೆ ಹೊಸ ದಾರಿಯಾಗಲಿ ಎಂಬುದು ವಿಜಯವಾಣಿ ಆಶಯ, ಕಳಕಳಿ.
ಕೌಶಲವೇ ಬಂಡವಾಳ

ನಮ್ಮಲ್ಲಿರುವ ಕೌಶಲ ಬಳಸಿಕೊಂಡು ಹೊಸ ಉತ್ಪನ್ನ ಉತ್ಪಾದಿಸಿ ಅವುಗಳನ್ನು ಆನ್​ಲೈನ್ ಮೂಲಕ ಮಾರಾಟ

ಮಾಡಬಹುದು. ಮನೆಯಲ್ಲೇ ಹೊಸ ಶೈಲಿ ಬಟ್ಟೆ ತಯಾರಿಸುವುದು, ಕಲಾಕೃತಿ, ಆಹಾರ ಉತ್ಪನ್ನ ತಯಾರಿಸಿ ಆನ್​ಲೈನ್​ನಲ್ಲಿ ಮಾಹಿತಿ ಅಪ್​ಲೋಡ್ ಮಾಡಿದರೆ ಅವಶ್ಯಕತೆಯಿರುವವರು ಖರೀದಿಸುತ್ತಾರೆ. ಇನ್ನು ಕೆಲವರಲ್ಲಿ ಬರವಣಿಗೆ, ವೀಡಿಯೋಗ್ರಫಿ, ಫೋಟೋಗ್ರಫಿಯಂತಹ ಕಲೆಗಳಿರುತ್ತವೆ. ಅವುಗಳನ್ನು ಅಂತರ್ಜಾಲದಲ್ಲಿ ಅಪ್​ಲೋಡ್ ಮಾಡಿ ಹೆಚ್ಚಿನ ಬಂಡವಾಳವಿಲ್ಲದೆ ಅಡ್ಡದಾರಿಯನ್ನೂ ಹಿಡಿಯದೆ ದುಡಿಯಲು ಸಾಧ್ಯ. ಯಾವುದಕ್ಕೆ ಬೇಡಿಕೆಯಿದೆ ಎಂಬುದನ್ನು ತಿಳಿದುಕೊಂಡು ಅಂತಹ ಚಟುವಟಿಕೆಗಳತ್ತ ಗಮನಹರಿಸಿ.

| ಡಿ.ರೂಪಾ ಮೌದ್ಗಿಲ್  ಐಪಿಎಸ್ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net