2020 ಹೊಸವರ್ಷ: ಗೋಲ್ಡನ್ ಲೈಫಿಗೆ ಸೂಪರ್ ಐಡಿಯಾ ಕೊಟ್ಟಿದ್ದಾರೆ ವಾಗ್ಮಿ ಚಿಂತಕ ಚಕ್ರವರ್ತಿ ಸೂಲಿಬೆಲೆ...

Chakravarthi sulibele 1 JAN 20
Published on
ಒಂದೊಳ್ಳೆ ಲೈಫು, ಚಿಕ್ಕದಾದ್ರೂ ಚೊಕ್ಕ ಕೆಲಸ. ಅದ್ದೂರಿ ಅಲ್ಲದಿದ್ರೂ ಗೌರವವಾಗಿ ಬದುಕಿ, ಸ್ವಲ್ಪ ಉಳಿಸಿ ಕೂಡಿಡುವಷ್ಟು
ಆದಾಯ…. ಇಂತಹ ಸಣ್ಣ ಸಣ್ಣ ಕನಸುಗಳನ್ನು ಹೊತ್ತ ಎಷ್ಟೋ ಜೀವಗಳು ಇವುಗಳ ನನಸಿನ ಬಗ್ಗೆ ಪ್ರತಿನಿತ್ಯ ಕನವರಿಸುತ್ತಿರುತ್ತವೆ. ತೋಳಲ್ಲಿ ಶಕ್ತಿ ಇದ್ದರೂ ಏನು ಮಾಡಬೇಕೆಂಬ ಗೊಂದಲ, ಗೋಜಲು. ಏನು ಮಾಡಿದರೆ ಅದೇನು ಆಗುವುದೋ ಎಂಬ ಭಯ, ದುಗುಡ. ಈ ಆತಂಕ, ಭಯವನ್ನು ಗಂಟು ಮೂಟೆ ಕಟ್ಟಿ ಪಕ್ಕಕ್ಕಿಟ್ಟು ಮುನ್ನಡೆದ ಅದೆಷ್ಟೋ ಮಂದಿ ಕೇವಲ ಆತ್ಮವಿಶ್ವಾಸ ಎಂಬ ಬಂಡವಾಳ ಹೂಡಿ ಕೋಟಿ ಕೋಟಿ ಗಳಿಸುತ್ತಿದ್ದಾರೆ. ಇಂತಹ ಹಲವು ಸ್ಪೂರ್ತಿದಾಯಕರ ಜತೆಗೆ ವಿಜಯವಾಣಿಯ ಅಪಾರ ಓದುಗರು ನ್ಯಾಯಮಾರ್ಗದಿಂದ ದುಡಿಮೆ ದುಪ್ಪಟ್ಟು ಮಾಡುವ ಬಗ್ಗೆ ತಮ್ಮ ಅನುಭವ, ಸಲಹೆಗಳನ್ನು ಧಾರೆ ಎರೆದಿದ್ದಾರೆ. ಹೊಸ ವರ್ಷದ ದಿನ ನೀವು ಓದುವ ಈ ಆತ್ಮವಿಶ್ವಾಸದ ಸೂತ್ರಗಳು ನಿಮ್ಮ ಜೀವನಕ್ಕೆ ಹೊಸ ದಾರಿಯಾಗಲಿ ಎಂಬುದು ವಿಜಯವಾಣಿ ಆಶಯ, ಕಳಕಳಿ.
ಊಟ ಕೊಟ್ರೆ ಆಯ್ತು!

ಹೆಣ್ಣುಮಕ್ಕಳು ಚೆನ್ನಾಗಿ ಅಡುಗೆ ಮಾಡ್ತಾರೆ. ‘ಈ ಅಡುಗೆ ರುಚಿಯಾಗಿದೆ’ ಅಂತ ಫೇಸ್​ಬುಕ್​ನಲ್ಲಿ ಮೊಬೈಲ್ ನಂಬರ್

ಹಾಕಿದರೆ ಸಾಕು. ಒಬ್ಬಿಬ್ಬರು ಡೆಲಿವರಿ ಬಾಯ್್ಸ ನೇಮಿಸಿ ಆರ್ಡರ್ ತಲುಪಿಸಿದರಾಯಿತು. ಇದು ಹೆಚ್ಚೇನು ಬಂಡವಾಳವಿಲ್ಲದೆ ಆರಂಭಿಸಬಹುದಾದಂಥ ಸ್ಟಾರ್ಟಪ್. ಮಹಿಳೆಯರು ಹೇಗೂ ಮನೆಯ ನಾಲ್ಕೈದು ಸದಸ್ಯರಿಗೆ ಅಡುಗೆ ಮಾಡುತ್ತಾರೆ; ಅದರ ಜತೆಗೆ ಒಂದಿಷ್ಟು ಜನರಿಗೆ ಮಾಡಿದರೆ ಆದಾಯದ ಮಾರ್ಗವೂ ತೆರೆದುಕೊಳ್ಳುತ್ತದೆ. ಇದರತ್ತ ಗಮನ ವಹಿಸಿದರೆ ಸ್ವಯಂಉದ್ಯೋಗಿಗಳ ಹಾಗೂ ಸ್ವಾವಲಂಬಿಗಳ ಸಂಖ್ಯೆ ಹೆಚ್ಚಾಗುತ್ತದೆ.

| ಚಕ್ರವರ್ತಿ ಸೂಲಿಬೆಲೆ ಖ್ಯಾತ ವಾಗ್ಮಿ, ಚಿಂತಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net