

ಬ್ಯಾಡಗಿ: ಸ್ಥಳೀಯ ಮೆಣಸಿನಕಾಯಿ ಮಾರುಕಟ್ಟೆಗೆ ಸೋಮವಾರ ಲಕ್ಷ ಚೀಲ ಮೆಣಸಿಸಕಾಯಿ ಆವಕವಾಗುವ ಮೂಲಕ ಹೊಸ ದಾಖಲೆ ಸೃಷ್ಟಿಯಾಗಿದೆ. ಕರೊನಾ ಹಾವಳಿಯಿಂದ ವಹಿವಾಟು ಕುಗ್ಗಬಹುದೆಂಬ ವದಂತಿ ಇತ್ತು. ಆದರೆ, 126903 ಚೀಲ ಆವಕವಾಗಿದ್ದು, ವ್ಯಾಪಾರವಂತೂ ಭರ್ಜರಿಯಾಗಿ ನಡೆದಿದೆ.
ಬ್ಯಾಡಗಿ ಕಡ್ಡಿ 2,499 ರಿಂದ 25,009, ಡಬ್ಬಿ 3,009 ರಿಂದ 32,000, ಗುಂಟೂರು 1089 ರಿಂದ 11,509 ರೂ. ದರದಲ್ಲಿ ಮಾರಾಟವಾಗಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ. 2020ರ ಫೆ.24ರಂದು 121644 ಚೀಲ, 27ರಂದು 126583, ಮಾ.2ರಂದು 120083, 5ರಂದು 118106 ಚೀಲ ಆವಕವಾಗಿದ್ದು ದಾಖಲೆಯಾಗಿತ್ತು.