

ಬೆಂಗಳೂರು: ಟೊಯೋಟಾ ಕಿಲೋಸ್ಕರ್ ಮೋಟಾರ್ ಕಂಪನಿಯು ನೂತನ ಸ್ಪೋರ್ಟಿ ನ್ಯೂ ಫಾರ್ಚುನರ್ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ವಿಶೇಷವಾಗಿ ಈ ಕಾರನ್ನು ಟೊಯೋಟೊ ರೇಸಿಂಗ್ ಡೆವಲಪ್ವೆುಂಟ್ಗೆ (ಟಿಆರ್ಡಿ) ಅಭಿವೃದ್ಧಿ ಪಡಿಸಲಾಗಿದೆ. 42 ಎಟಿ ಡೀಸೆಲ್ ಗ್ರೇಡ್ ಕಾರಿಗೆ 34.98 ಲಕ್ಷ ರೂ. ಹಾಗೂ 44 ಎಟಿ ಡೀಸೆಲ್ ಗ್ರೇಡ್ ಕಾರಿಗೆ 36.88 ಲಕ್ಷ ರೂ. ಬೆಲೆ (ಎಕ್ಸ್ ಶೋ ರೂಂ) ಇದೆ. ಮಿಶ್ರ ಲೋಹದ ಚಕ್ರಗಳ ಮೂಲಕ ನೂತನ ಆವೃತ್ತಿಯ ಕಾರು
ನೋಡಲು ಆಕರ್ಷಕ
ಆಗಿದ್ದು, ಶನಿವಾರ ದಿಂದ ಬುಕಿಂಗ್ ಪ್ರಾರಂಭವಾಗಿದೆ. 2009ರಲ್ಲಿ ಪ್ರಾರಂಭವಾದ ಟೊಯೋಟಾ ಫಾರ್ಚುನರ್ ಒಂದು ದಶಕ್ಕೂ ಹೆಚ್ಚು ಕಾಲ ದೇಶದಲ್ಲಿ ಹೆಚ್ಚು ಪ್ರಿಯವಾದ ಎಸ್ಯುುವಿ ಆಗಿದೆ. ಪ್ರೀಮಿಯಂ ವೈಶಿಷ್ಟ್ಯತೆಗಳು, ಅತ್ಯಾರ್ಷಕ ಮತ್ತು ಊಬರ್ ಕೂಲ್ ಒಳಾಂಗಣ, ಉತ್ತಮ ದರ್ಜೆಯ ಸುರಕ್ಷತೆ, ಶಕ್ತಿಯುತ ಕಾರ್ಯಕ್ಷಮತೆ ಹೊಂದಿದೆ ಎಂದು ಕಂಪನಿಯ ಹಿರಿಯ ಉಪಾಧ್ಯಕ್ಷ ನವೀನ್ ಸೋನಿ ತಿಳಿಸಿದ್ದಾರೆ.
ಸುರಕ್ಷತೆ, ಭದ್ರತಾ ವೈಶಿಷ್ಟ್ಯ
ಕಾರಿನ ವಿಶೇಷತೆಗಳು?