

ನವದೆಹಲಿ: ಎಂಎಸ್ಎಂಇಗಳನ್ನು ಸ್ಪರ್ಧಾತ್ಮಕವಾಗಿಸುವುದಕ್ಕೆ ಮತ್ತು ಸಿಂಗಲ್ ವಿಂಡೋ ಇ-ಲಾಜಿಸ್ಟಿಕ್ಸ್ ಮಾರ್ಕೆಟ್ ಸ್ಥಾಪನೆಗೆ ಅನುವಾಗುವಂತೆ ನ್ಯಾಷನಲ್ ಲಾಜಿಸ್ಟಿಕ್ಸ್ ಪಾಲಿಸಿಯನ್ನು ಶೀಘ್ರವೇ ಜಾರಿಗೊಳಿಸಲಾಗುವುದು ಎಂದು ಕೇಂದ್ರ ಸರ್ಕಾರ ಶನಿವಾರ ಹೇಳಿದೆ.
ಕೇಂದ್ರ ಬಜೆಟ್ 2020 ಮಂಡಿಸುವ ವೇಳೆ ಈ ವಿಚಾರ ಪ್ರಸ್ತಾಪಿಸಿದ ಸಚಿವೆ ನಿರ್ಮಲಾ ಸೀತಾರಾಮನ್, ಈ ನಿಯಮ ಜಾರಿಗೊಂಡರೆ ಕೇಂದ್ರ, ರಾಜ್ಯ ಸರ್ಕಾರಗಳು ಮತ್ತು ಪ್ರಮುಖ ರೆಗ್ಯುಲೇಟರ್ಗಳ ಪಾತ್ರವೇನು ಎಂಬುದು ಸ್ಪಷ್ಟವಾಗಲಿದೆ ಎಂದರು.
ಮೈಕ್ರೋ, ಸ್ಮಾಲ್ ಆ್ಯಂಡ್ ಮೀಡಿಯಂ ಎಂಟರ್ಪ್ರೈಸೆಸ್ (ಎಂಎಸ್ಎಂಇ)ಗಳನ್ನು ಕಾಂಪಿಟೇಟಿವ್ ಆಗಿಸುವುದು, ಉದ್ಯೋಗ ಸೃಜನೆ ಮೇಲೆ ಗಮನ ಕೇಂದ್ರೀಕರಿಸುವುದು ಮತ್ತು ಏಕಗವಾಕ್ಷಿಯ ಇ-ಲಾಜಿಸ್ಟಿಕ್ಸ್ ಮಾರ್ಕೆಟ್ ಸ್ಥಾಪಿಸುವುದು ಈ ಪಾಲಿಸಿಯ ಉದ್ದೇಶ ಎಂದು ಅವರು ವಿವರಿಸಿದರು.
ಜಾಗತಿಕ ಸ್ಪರ್ಧಾತ್ಮಕ ನೀತಿಗೆ ಅನುಗುಣವಾಗಿ ದೇಶದ ಲಾಜಿಸ್ಟಿಕ್ಸ್ ವೆಚ್ಚವನ್ನು ಇಳಿಸುವ ಉದ್ದೇಶ ಸರ್ಕಾರದ್ದು. ಈ ನಿಟ್ಟಿನಲ್ಲಿ ಈ ನೀತಿ ಸಹಕಾರಿಯಾಗಿ ಇರಲಿದೆ. ಭಾರತದಲ್ಲಿ ಲಾಜಿಸ್ಟಿಕ್ಸ್ ವೆಚ್ಚ ಜಿಡಿಪಿಯ ಶೇಕಡ 14ರಷ್ಟು ಇದೆ. ಇದು ಜಗತ್ತಿನ ಇತರೆ ದೇಶಗಳಿಗೆ ಹೋಲಿಸಿದರೆ ತುಂಬಾ ಅಧಿಕ. ಮುಂಬರುವ ವರ್ಷಗಳಲ್ಲಿ ಇದನ್ನು ಶೇಕಡ 9ಕ್ಕೆ ಇಳಿಸುವ ಗುರಿ ಸರ್ಕಾರದ ಮುಂದಿದೆ ಎಂದು ಅವರು ಹೇಳಿದರು. (ಏಜೆನ್ಸೀಸ್)