50 ಲಕ್ಷ ರೂಪಾಯಿ ಮಾಸಿಕ ವ್ಯವಹಾರಕ್ಕೆ ಶೇ. 1 ನಗದು ಜಿಎಸ್​ಟಿ ಕಡ್ಡಾಯ

GST 3 Jan 20
Published on

ನವದೆಹಲಿ: ಮಾಸಿಕ 50 ಲಕ್ಷ ರೂಪಾಯಿಗಿಂತ ಹೆಚ್ಚಿನ ವ್ಯವಹಾರವಿರುವವರು ಶೇಕಡ 1ರಷ್ಟು ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್​ಟಿ) ನಗದು ರೂಪದಲ್ಲಿ ಕಡ್ಡಾಯವಾಗಿ ಪಾವತಿಸಬೇಕೆಂದು ಹಣಕಾಸು ಸಚಿವಾಲಯ ಸೂಚಿಸಿದೆ. ನಕಲಿ ಇನ್​ವಾಯ್್ಸ ಮೂಲಕ ತೆರಿಗೆ ತಪ್ಪಿಸುವುದನ್ನು ನಿವಾರಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಪರೋಕ್ಷ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಮತ್ತು ಕಸ್ಟಮ್ಸ್ (ಸಿಬಿಐಸಿ) ಜಿಎಸ್​ಟಿ ನಿಯಮಗಳಲ್ಲಿ 86ಬಿ ನಿಯಮವನ್ನು ಸೇರಿಸಿದೆ. ಜಿಎಸ್​ಟಿ ಹೊಣೆಗಾರಿಕೆಯನ್ನು ಶೇಕಡ 99ಕ್ಕೆ ನಿಭಾಯಿಸುವುದಕ್ಕೆ ಇನ್​ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಬಳಸುವವರ ಮೇಲೆ ನಿಯಂತ್ರಣ ಹೇರುವುದು ಇದರ ಉದ್ದೇಶವಾಗಿದೆ.

ವ್ಯವಹಾರ (ಟರ್ನ್​ಓವರ್) ಲೆಕ್ಕ ಹಾಕುವಾಗ ಜಿಎಸ್​ಟಿಯಿಂದ ವಿನಾಯಿತಿಯಿರುವ ಹಾಗೂ ಶೂನ್ಯ ದರ ಸರಬರಾಜುಗಳನ್ನು ಪರಿಗಣಿಸಲಾಗುವುದಿಲ್ಲ. ಆದರೆ, ಸಂಸ್ಥೆಯ ಆಡಳಿತ ನಿರ್ದೇಶಕ ಅಥವಾ ಯಾವುದೇ ಪಾಲುದಾರರು ಒಂದು ಲಕ್ಷ ರೂಪಾಯಿಗಿಂತ ಅಧಿಕ ಆದಾಯ ತೆರಿಗೆ ಪಾವತಿಸಿದಲ್ಲಿ ಅಥವಾ ಹಿಂದಿನ ಆರ್ಥಿಕ ವರ್ಷದಲ್ಲಿ ಒಂದು ಲಕ್ಷ ರೂಪಾಯಿಗಿಂತ ಹೆಚ್ಚಿನ ರೀಫಂಡ್ ಪಡೆದಲ್ಲಿ ಈ ನಿರ್ಬಂಧ ಅನ್ವಯವಾಗುವುದಿಲ್ಲ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net