ಮನಿ ಮಾತು ಅಂಕಣ| ಬೇಕರಿ, ಸ್ವೀಟ್ಸ್ ಬಿಸಿನೆಸ್ ಆರಂಭಿಸೋದು ಹೇಗೆ?

bakery
Published on
ಸಾಮಾನ್ಯರೊಬ್ಬರು 750 ಕೋಟಿ ರೂ. ವಹಿವಾಟು ನಡೆಸುವ ಬೇಕರಿ ಕಟ್ಟಿದ ಕಥೆ ಇದು. ಅಯ್ಯೋ ಏನ್ ಉದ್ಯೋಗ ಮಾಡೋದು ಸಾರ್? ಯಾರೂ ಕೆಲಸನೇ ಕೊಡ್ತಿಲ್ಲ, ಏನಾದ್ರು ಬಿಸಿನೆಸ್ ಮಾಡೋಣ ಅಂದ್ರೆ ಯಾರು ಸಹಾಯ ಮಾಡಲ್ಲ, ನನ್ನ ಹತ್ರ ಹಣನೂ ಇಲ್ಲ, ನನಗೆ ಯಾವ ಬಿಸಿನೆಸ್ ಮಾಡೋದು ಅಂತನೂ ಗೊತ್ತಿಲ್ಲ. ಹೀಗೆ ಬರೀ ಸಮಸ್ಯೆಗಳನ್ನೇ ಹೇಳಿಕೊಂಡು ಸಮಯ ವ್ಯರ್ಥ ಮಾಡೋ ಸಾಕಷ್ಟು ಮಂದಿ ನಮ್ಮ ನಡುವೆ ಇದ್ದಾರೆ. ಇಂಥವರು ಒಂದು ಕಡೆಯಾದರೆ ಸಮಸ್ಯೆಗಳನ್ನೇ ಸವಾಲಾಗಿ ಸ್ವೀಕರಿಸಿ ಸಾಧನೆಯ ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳುವ ಮತ್ತೊಂದು ವರ್ಗದ ಜನರೂ ನಮ್ಮ ನಡುವೆ ಇದ್ದಾರೆ. ಹೌದು, ಅಂತಹವರ ಸಾಲಿಗೆ ಮಿಸಸ್ ರಜನಿ ಬೆಕ್ಟರ್ ಸೇರುತ್ತಾರೆ. ಅಡುಗೆ ಮನೆಯಿಂದ ಕೇಕ್, ಬಿಸ್ಕೆಟ್ ಸ್ವೀಟ್ಸ್ ಬಿಸಿನೆಸ್ ಅನ್ನು ಸಣ್ಣದಾಗಿ ಅರಂಭಿಸಿದ ಮಿಸಸ್ ಬೆಕ್ಟರ್, ಪರಿಶ್ರಮ ಮತ್ತು ಛಲದಿಂದ ಸದ್ಯ ವಾರ್ಷಿಕ 750 ಕೋಟಿ ರೂ. ಮೊತ್ತದ ವಹಿವಾಟು ನಡೆಸುವ ಬೇಕರಿ ಮತ್ತು ಸ್ವೀಟ್ಸ್ ಉದ್ಯಮ ಕಟ್ಟಿದ್ದಾರೆ. 1970ರಲ್ಲಿ ರಜನಿ ಬೆಕ್ಟರ್ ಅವರು ವಸ್ತು ಪ್ರದರ್ಶವನವೊಂದರಲ್ಲಿ ಸ್ಟಾಲ್ ಹಾಕಿರುತ್ತಾರೆ. ಆ ಸ್ಟಾಲ್​ನಲ್ಲಿ ಖರೀದಿಸಲು ಜನ ಮುಗಿ ಬೀಳುತ್ತಾರೆ. ಇವರ ಉತ್ಪನ್ನಗಳ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡುತ್ತಾರೆ. ಅಂದು ಬೆಕ್ಟರ್ ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂದು ನಿರ್ಧರಿಸುತ್ತಾರೆ. ಅದರಂತೆ ಸಣ್ಣದಾಗಿ ತಮ್ಮ ಅಡುಗೆ ಮನೆಯಿಂದಲೇ ಬೇಕರಿ ಉದ್ಯಮ ಆರಂಭಿಸುತ್ತಾರೆ. 1980ರಲ್ಲಿ ಮಿಸಸ್ ಬೆಕ್ಟರ್ ಅವರ ಪತಿ ಬೇಕರಿ ಪ್ರಾಡಕ್ಟ್ ಗಳಿಗೆ ಒಂದು ಒಳ್ಳೆಯ ಹೆಸರಿಟ್ಟು ಬ್ರಾ್ಯಂಡ್ ಮಾಡಬೇಕು ಎಂದು ಸಲಹೆ ನೀಡುತ್ತಾರೆ. ಅದರಂತೆ ಕ್ರಿಮಿಕಾ ಎಂದು ನಾಮಕರಣ ಮಾಡುತ್ತಾರೆ. ದಿನೇದಿನೆ ಬೆಕ್ಟರ್​ನ ಕ್ರಿಮಿಕಾ ಪ್ರಾಡಕ್ಟ್​ಗಳಿಗೆ ಜನಪ್ರಿಯತೆ ಹೆಚ್ಚಾಗುತ್ತಾ ಹೋಗುತ್ತದೆ. ನಂತರ 1995ರಲ್ಲಿ ಮ್ಯಾಕ್ ಡೊನಾಲ್ಡ್ ಕಂಪನಿ ತನ್ನ ಭಾರತದ ಸ್ಟಾಲ್​ಗಳಿಗೆ ಬನ್ ಗಳನ್ನು ಪೂರೈಸುವ ಆರ್ಡರ್ ಅನ್ನು ಕ್ರಿಮಿಕಾಗೆ ಕೊಡುತ್ತದೆ. ಅಂದಿನಿಂದ ಕ್ರಿಮಿಕಾ ಹಿಂತಿರುಗಿ ನೋಡಿದ್ದೇ ಇಲ್ಲ. ಇವತ್ತಿಗೂ ಮಿಸಸ್ ರಜನಿ ಬೆಕ್ಟರ್ ಅವರ ಕ್ರಿಮಿಕಾ ಕಂಪನಿ ದೇಶದ ಪ್ರಮುಖ ಫಾಸ್ಟ್ ಫುಡ್ ಚೈನ್​ಗಳಿಗೆ ಬನ್ ಪೂರೈಕೆ ಮಾಡುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ಮಿಸಸ್ ಬೆಕ್ಟರ್ ಕ್ರಿಮಿಕಾ ಕಂಪನಿ ನಡೆಸಿದ ಐಪಿಒ (ಆರಂಭಿಕ ಸಾರ್ವಜನಿಕ ಹೂಡಿಕೆ) ಬಗ್ಗೆ ನೀವೆಲ್ಲ ಕೇಳಿರಲೇಬೇಕು. ಆ ಸಾರ್ವಜನಿಕ ಹೂಡಿಕೆ ಮೂಲಕ ಕಂಪನಿ 540 ಕೋಟಿ ರೂ. ಸಂಗ್ರಹ ಮಾಡಿದೆ. ಯಾಕೆ ಬೆಕ್ಟರ್ ಅವರ ಯಶೋಗಾಥೆಯನ್ನು ಇಲ್ಲಿ ಹೇಳಿದೆ ಅಂತ ನಿಮಗೆ ಅನಿಸಬಹುದು. ಮನಸ್ಸು ಮಾಡಿದರೆ ನೀವು ಕೂಡ ಹೀಗೆ ಬೇಕರಿ ಮತ್ತು ಸ್ವೀಟ್ಸ್ ಉದ್ಯಮವನ್ನು ಕಟ್ಟಿ ದೊಡ್ಡ ಯಶಸ್ಸು ಕಾಣಬಹುದು. ಬೇಕರಿ ಮತ್ತು ಸ್ವೀಟ್ಸ್ ಉದ್ಯಮದಲ್ಲಿ ಯಶಸ್ಸು ಕಾಣುವುದು ಹೇಗೆ ಎನ್ನುವುದರ ಬಗ್ಗೆ ಮಾಹಿತಿ ಈ ಅಂಕಣದಲ್ಲಿದೆ.

ಬೇಕರಿ ಮತ್ತು ಸ್ವೀಟ್ಸ್ ಬಿಸಿನೆಸ್​ನ ಮಾರುಕಟ್ಟೆ ಮೌಲ್ಯ: ಭಾರತದಲ್ಲಿ ಬೇಕರಿ ಮತ್ತು ಬಿಸ್ಕೆಟ್​ನ ರಿಟೇಲ್ ಮಾರುಕಟ್ಟೆ ಮೌಲ್ಯ 45,000 ಕೋಟಿ ರೂ. ಮುಂದಿನ 5 ವರ್ಷಗಳ ಕಾಲ ಪ್ರತಿ ವರ್ಷ ಇದು ಶೇ.9 ಪ್ರಗತಿ ಕಾಣಲಿದೆ. ಭಾರತದಲ್ಲಿ ಪ್ರತಿ ವ್ಯಕ್ತಿಯೂ ವರ್ಷಕ್ಕೆ ಸರಾಸರಿ ಎರಡೂವರೆ ಕೆ.ಜಿ. ಬಿಸ್ಕೆಟ್ ಖರೀದಿಸುತ್ತಾನೆ. ವಿದೇಶದಲ್ಲಿ ಪ್ರತಿ ವ್ಯಕ್ತಿ ವರ್ಷಕ್ಕೆ ಸುಮಾರು 13 ಕೆ.ಜಿ ಬಿಸ್ಕೆಟ್ ಬಳಕೆ ಮಾಡುತ್ತಾನೆ. ಭಾರತದಲ್ಲಿ ದಿನೇದಿನೆ ಕುರುಕಲು ತಿಂಡಿಗಳ ಮಾರುಕಟ್ಟೆ ವಿಸ್ತಾರಗೊಳ್ಳುತ್ತಿದೆ. ಅಂದರೆ ಭವಿಷ್ಯದಲ್ಲಿ ಸ್ಥಳೀಯ ಮಾರುಕಟ್ಟೆಗೆ ಪೂರೈಕೆ ಮಾಡುವ ಜತೆಗೆ ಒಳ್ಳೆಯ ಬ್ರಾ್ಯಂಡಿಂಗ್ ಮಾಡಿದರೆ ರಫ್ತಿಗೂ ಅವಕಾಶಗಳಿವೆ.

ಬೇಕರಿ ಮತ್ತು ಸ್ವೀಟ್ ಶಾಪ್ ಎಂದರೇನು?: ಬೇಕಿಂಗ್, ರೋಮನ್ ಸಾಮ್ರಾಜ್ಯದ ಆರಂಭದಲ್ಲಿ ಅಭಿವೃದ್ಧಿಪಡಿಸಲಾದ ಒಂದು ಕಲೆ. ರೋಮನ್ ದೇಶದಲ್ಲಿ ಇದು ಅತ್ಯಂತ ಪ್ರಸಿದ್ಧವಾದ ಕಲೆಯಾಗಿತ್ತು. ಕ್ರಿ.ಪೂ. 300ರಲ್ಲಿ ಬೇಕಿಂಗ್ ಕಲೆ ಅನ್ನು ವೃತ್ತಿಯಾಗಿ ಪರಿಚಯಿಸಲಾಯಿತು. ಮೊದಮೊದಲು ಮನೆಯಲ್ಲೇ ಆರಂಭಗೊಂಡ ಈ ಉದ್ಯಮ ಈಗ ಸಾಕಷ್ಟು ಬೇಡಿಕೆಯುಳ್ಳ ಮತ್ತು ಹಣ ಗಳಿಸುವ ಉದ್ಯಮಗಳಲ್ಲಿ ಮುಂಚೂಣಿಯಲ್ಲಿದೆ. ಬೇಕರಿ ಮತ್ತು ಸ್ವೀಟ್ಸ್ ಬಿಸಿನೆಸ್ ವಿವಿಧ ಬಗೆಯ ಸಿಹಿ ಮತ್ತು ಖಾರದ ತಿಂಡಿಗಳನ್ನು ಪೂರೈಸುವ ಒಂದು ಉದ್ಯಮವಾಗಿದೆ.

ಬೇಕರಿ ಮತ್ತು ಸ್ವೀಟ್ಸ್ ಬಿಸಿನೆಸ್​ಗೆ ಬೇಕಿರುವ ಬಂಡವಾಳ: ನೀವು ಯಾವ ಪ್ರಮಾಣದಲ್ಲಿ ಬೇಕರಿ ಮತ್ತು ಸ್ವೀಟ್ಸ್ ಬಿಸಿನೆಸ್ ಆರಂಭಿಸಬೇಕು ಎನ್ನುತ್ತಿದ್ದೀರಿ ಎನ್ನುವುದನ್ನು ಆಧರಿಸಿ ಬಂಡವಾಳದ ಅಗತ್ಯ ಅರಿಯಬೇಕಾಗುತ್ತದೆ. ಐದಾರು ಲಕ್ಷದಿಂದ ಹಿಡಿದು 50 ಲಕ್ಷ ರೂ. ವರೆಗೆ ಹೂಡಿಕೆ ಮಾಡಿ ಬಿಸಿನೆಸ್ ಆರಂಭಿಸಬಹುದು. ಇಲ್ಲವೆ, ಬಂಡವಾಳ ಕಡಿಮೆ ಇದೆ ಎಂದರೆ ಮನೆಯಿಂದಲೇ ಸಣ್ಣದಾಗಿ ಉದ್ಯಮ ಆರಂಭಿಸಿ ಕ್ರಮೇಣ ಬಂಡವಾಳ ಗಳಿಸಿ ಉದ್ಯಮ ವಿಸ್ತರಿಸಬಹುದು. ಸರಿಯಾದ ಯೋಜನೆ ಇದ್ದರೆ ಈ ಬಿಸಿನೆಸ್​ಗೆ ಸಾಲ ಸೌಲಭ್ಯವೂ ಸಿಗುತ್ತದೆ.

ನೀವೂ ಆರಂಭಿಸಬಹುದು ಬಿಸಿನೆಸ್: ಇಷ್ಟೆಲ್ಲ ಮಾಹಿತಿ ನೋಡಿದ ಮೇಲೆ ನಿಮಗೂ ಬೇಕರಿ ಮತ್ತು ಸ್ವೀಟ್ಸ್ ಬಿಸಿನೆಸ್ ಆರಂಭಿಸಬೇಕು ಅಂತ ಅನಿಸುತ್ತಿದೆಯೇ? ಅಯ್ಯೋ ಈ ಬಿಸಿನೆಸ್ ಬಗ್ಗೆ ನನಗೆ ಸರಿಯಾದ ಮಾಹಿತಿಯೇ ಇಲ್ಲವಲ್ಲ ಅಂತ ಚಿಂತೆ ಮಾಡ್ತಿದ್ದೀರಾ? ಎಲ್ಲಿ ಮಾಹಿತಿ ಪಡೆಯೋದು ಅನ್ನೋ ಪ್ರಶ್ನೆ ಕಾಡುತ್ತಿದೆಯಾ? ಚಿಂತೆ ಮಾಡಬೇಡಿ ಈಗ ಇಂಡಿಯನ್ ಮನಿ ಡಾಟ್ ಕಾಂನ ಫೈನಾನ್ಸಿಯಲ್ ಫ್ರೀಡಂ ಆಪ್ ಡೌನ್ ಲೋಡ್ ಮಾಡಿ. ಬೇಕರಿ ಮತ್ತು ಸ್ವೀಟ್ಸ್ ಬಿಸಿನೆಸ್ ಕಟ್ಟಿ ಯಶಸ್ವಿಯಾಗಿರುವ ಸಾಧಕರಿಂದಲೇ ನಿಮ್ಮ ಕನಸಿನ ಬೇಕರಿ ಮತ್ತು ಸ್ವೀಟ್ಸ್ ಬಿಸಿನೆಸ್ ಆರಂಭಿಸೋದು ಹೇಗೆ ಎನ್ನುವುದನ್ನು ಕಲಿಯಿರಿ. ಮತ್ತೇಕೆ ತಡ ಈಗಲೇ ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್​ನಿಂದ ಫೈನಾನ್ಸಿಯಲ್ ಫ್ರೀಡಂ ಆಪ್ ಡೌನ್ ಲೋಡ್ ಮಾಡಿ ಶ್ರೀಮಂತಿಕೆಯ ಪ್ರಯಾಣ ಶುರು ಮಾಡಿ.

ಬೇಕರಿ ಮತ್ತು ಸ್ವೀಟ್ಸ್ ಕೋರ್ಸ್​ನಲ್ಲಿ ಏನಿದೆ?

1. ಬೇಕರಿ ಮತ್ತು ಸ್ವೀಟ್ಸ್ ಬಿಸಿನೆಸ್ ಯಾಕೆ?

2. ಕೋರ್ಸ್ ಮಾರ್ಗದರ್ಶಕರ ಪರಿಚಯ

3. ಪ್ಲ್ಯಾನ್​ ಹೇಗಿರಬೇಕು?

4. ಬಂಡವಾಳ ಎಷ್ಟಿರಬೇಕು?

5. ಸ್ಥಳದ ಆಯ್ಕೆ

6. ಶೆಫ್​ವುತ್ತು ಇತರ ಕೆಲಸಗಾರರ ಆಯ್ಕೆ

7. ಬೆಲೆ ನಿಗದಿಪಡಿಸೋದು ಹೇಗೆ?

8. ಗ್ರಾಹಕ ಸೇವೆ

9. ಆನ್​ಲೈನ್ ಮತ್ತು ಹೋಂ ಡೆಲಿವರಿ

10. ಖರೀದಿ, ದಾಸ್ತಾನು, ತ್ಯಾಜ್ಯ ನಿರ್ವಹಣೆ

11. ಸಲಕರಣೆ ಮತ್ತು ತಂತ್ರಜ್ಞಾನ

12. ಕಾರ್ಯಾಚರಣೆ ವೆಚ್ಚ

13. ಹಣಕಾಸು ನಿರ್ವಹಣೆ ಹೇಗೆ?

14. ಸವಾಲುಗಳ ನಿರ್ವಹಣೆ

ಮಾರ್ಗದರ್ಶಕರ ಪರಿಚಯ

  • ಶಿವಕುಮಾರ್, ಶ್ರೀ ಮಹಾಲಕ್ಷ್ಮೀ ಸ್ವೀಟ್ಸ್, ಮೈಸೂರು
  • ನಾಗರಾಜ್, ವೆಂಕಟೇಶ್ವರ ಸ್ವೀಟ್ ಮೀಟ್, ಬೆಂಗಳೂರು
  • ರಚನಾ ಮತ್ತು ಮನೋಜ್, ಬಾಂಬೆ ಟಿಫಾನೀಸ್, ಮೈಸೂರು
  • ಅರವಿಂದ್, ಬೇಕಿಂಗ್ ಪಾಯಿಂಟ್, ಮಂಡ್ಯ
  • ಮನು, ಅಮ್ಮ ಪೇಸ್ಟ್ರೀಸ್, ಬೆಂಗಳೂರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net