ಮನಿಮಾತು: ಯೂಟ್ಯೂಬ್​ ಚಾನಲ್​ನಿಂದ ಹಣ ಗಳಿಸೋದು ಹೇಗೆ?

youtube
Published on
ಯೂಟ್ಯೂಬ್​ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಪ್ರತಿ ದಿನ ಒಂದಲ್ಲ ಒಂದು ಕಾರಣಕ್ಕೆ ನಾವು ಯೂಟ್ಯೂಬ್​ ವೀಸುತ್ತೇವೆ. ಅಡುಗೆ ಮಾಡಲು, ಹೊಸ ವಿಚಾರಗಳನ್ನು ಕಲಿಯಲು, ನ್ಯೂಸ್​ ನೋಡಲು, ಸಿನಿಮಾ ವೀಸಲು, ಹಣಕಾಸು ನಿರ್ವಹಣೆ ಕಲಿಯಲು, ಇತಿಹಾಸ ತಿಳಿಯಲು ಹೀಗೆ ಹಲವು ಮಾಹಿತಿಗಾಗಿ ನಾವು ಯೂಟ್ಯೂಬ್​ ಮೇಲೆ ಅವಲಂಬಿತರಾಗಿದ್ದೇವೆ. ಆದರೆ ಇದೇ ಯೂಟ್ಯೂಬ್​ ನಿಮ್ಮ ಜೀವನ ನಿರ್ವಹಣೆಗೆ ದಾರಿ ಮಾಡಿಕೊಡಬಲ್ಲದು. ಹೌದು, ಯೂಟ್ಯೂಬ್​ ಚಾನಲ್​ ಆರಂಭಿಸಿ ತಿಂಗಳಿಗೆ ಕೆಲ ಸಾವಿರಗಳಿಂದ ಹಿಡಿದು ಲಕ್ಷ ಕೋಟಿಗಳವರೆಗೆ ಸಂಪಾದಿಸುವವರಿದ್ದಾರೆ.

ಯೂಟ್ಯೂಬ್​ನಲ್ಲಿ ಕೋಟಿ ಕೋಟಿ ದುಡಿಯೋ ಮಂದಿ ಇವ್ರೇ ನೋಡಿ: ಡ್ಯಾನ್​ ಟಿಡಿಎಂ ಎನ್ನುವ ಹೆಸರಿನಲ್ಲಿ ಗೇಮಿಂಗ್​ ಚಾನಲ್​ ಇದೆ. ಇದರ ವಾರ್ಷಿಕ ಆದಾಯ 122 ಕೋಟಿ. ವೆನೋಸ್​ ಗೇಮಿಂಗ್​ ಯೂಟ್ಯೂಬ್​ ಚಾನಲ್​ ಇದೆ. ಇದರ ವಾರ್ಷಿಕಗಳಿಕೆ 114 ಕೋಟಿ. ಇನ್ನು ಭಾರತದ ವಿಚಾರಕ್ಕೆ ಬಂದ್ರೆ ಬಿಬಿಕೆ ವೈನ್ಸ್​ ಅನ್ನೋ ಕಾಮಿಡಿ ಯುಟ್ಯೂಬ್​ ಚಾನಲ್​ ತಿಂಗಳಿಗೆ 88 ಲಕ್ಷ ಗಳಿಸುತ್ತಿದೆ. ವಿದ್ಯಾ ವೋಕ್ಸ್​ ಎನ್ನುವ ಮ್ಯೂಸಿಕ್​ ಆಲ್ಬಂ ಚಾನಲ್​ ತಿಂಗಳಿಗೆ 74 ಲಕ್ಷ ಗಳಿಸುತ್ತಿದೆ. ಇನ್ನು ನಿಶಾ ಮಧುಬಾಲಿಕಾ ಅನ್ನೋ ಅಡುಗೆ ಚಾನಲ್​ ತಿಂಗಳಿಗೆ 72 ಲಕ್ಷ ಗಳಿಸುತ್ತಿದೆ. ಟೆಕ್ನಿಕಲ್​ ಗುರೂಜಿ ಅನ್ನೋ ಟೆಕ್​ ಸಂಬಂಧಪಟ್ಟ ಚಾನಲ್​ ತಿಂಗಳಿಗೆ 90 ಲಕ್ಷ ಸಂಪಾದಿಸುತ್ತಿದೆ. ಒಂದೆರಡು ಲಕ್ಷ ಸಂಪಾದಿಸುವ ಚಾನಲ್​ಗಳಿಗಂತೂ ಲೆಕ್ಕವಿಲ್ಲ.

ಯೂಟ್ಯೂಬ್​ನಲ್ಲಿ ಹಣ ಗಳಿಸಲು 6 ಮಾರ್ಗಗಳು: ಯೂಟ್ಯೂಬ್​ನಲ್ಲಿ ನೀವು ಅಪ್​ಲೋಡ್​ ಮಾಡುವ ವಿಡಿಯೋಗಳನ್ನು ಎಷ್ಟು ಮಂದಿ ನೋಡುತ್ತಾರೆ ಎನ್ನುವುದರ ಆಧಾರದ ಮೇಲೆ ನಿಮಗೆ ಹಣ ಸಿಗುತ್ತದೆ. ಜಾಹಿರಾತು, ಅಫಿಲಿಯೇಟ್​ ಮಾರ್ಕೆಟಿಂಗ್​, ಮರ್ಚೆಂಡೈಸಿಂಗ್​, ಸೂಪರ್​ಚಾಟ್​, ಜಾಯಿನ್​, ಮೆಂಬರ್​ ಶಿಪ್​ ಹೀಗೆ ಆರು ವಿಧಗಳಲ್ಲಿ ಆದಾಯ ಗಳಿಸುವ ಅವಕಾಶ ಇಲ್ಲಿದೆ.

ಯೂಟ್ಯೂಬ್​ ಚಾನಲ್​ ಸಕ್ಸಸ್​ ಆಗ್ಬೇಕು ಅಂದ್ರೆ?: ಜಗತ್ತಿನಾದ್ಯಂತ ಇರುವ ಯೂಟ್ಯೂಬ್​ ಚಾನಲ್​ಗಳಿಗೆ ಲೆಕ್ಕವಿಲ್ಲ. ಪ್ರತಿಯೊಂದು ವಿಚಾರ& ವಿಷಯಕ್ಕೂ ಹತ್ತಾರು ನೂರಾರು ಯೂಟ್ಯೂಬ್​ ತಾಣಗಳಿವೆ. ಆದರೆ ಕೆಲ ಯೂಟ್ಯೂಬ್​ ಚಾನಲ್​ಗಳು ಮಾತ್ರ ಸಕ್ಸಸ್​ ಆಗಿವೆ. ಇದಕ್ಕೆ ಕಾರಣ ಆ ಚಾನಲ್​ ಮುನ್ನಡೆಸುವವರಲ್ಲಿರುವ ವಿಷಯ ಾನ. ಯೂಟ್ಯೂಬ್​ ಅನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಚಾನಲ್​ ಆರಂಭಿಸಿದರೆ ಅದು ಆರಕ್ಕೇರದ ಮೂರಕ್ಕಿಳಿಯದ ಸ್ಥಿತಿಯಲ್ಲೆ ಇರುತ್ತೆ. ಆದರೆ ಯೂಟ್ಯೂಬ್​ ಬಗ್ಗೆ ಸರಿಯಾಗಿ ತಿಳಿದುಕೊಂಡು ಮುನ್ನಡೆದರೆ ಅದು ನಿಮ್ಮನ್ನು ಫೇಮಸ್​ ಮಾಡುವ ಜತೆಗೆ ದುಡ್ಡನ್ನು ತಂದುಕೊಡುತ್ತೆ.

ಯೂಟ್ಯೂಬ್​ನಲ್ಲಿ ಗೆಲ್ಲಲು ಇಲ್ಲಿವೆ ಸೂತ್ರ: ಯೂಟ್ಯೂಬ್​ ಚಾನಲ್​ ಆರಂಭಿಸಿ ಯಶಸ್ಸು ಸಾಧಿಸಬೇಕಾದರೆ ಮೊದಲನೆಯದ್ದಾಗಿ ಮುಖ್ಯವಾಗೋದು ನೀವು ಯಾವ ವಿಷಯದ ಬಗ್ಗೆ ವಿಡಿಯೋ ಮಾಡುತ್ತೀರಿ ಎನ್ನುವುದು. ವಿಡಿಯೋ ಮಾಡುವ ವಿಷಯದ ಬಗ್ಗೆ ನಿಮಗೆ ಸ್ಪಷ್ಟತೆ ಎಷ್ಟಿದೆ, ಎಲ್ಲರಿಗಿಂತಲೂ ಉತ್ತಮವಾಗಿ ಆ ವಿಷಯದ ಬಗ್ಗೆ ನೀವು ಹೇಗೆ ಾನ ಪಸರಿಸುವಿರಿ, ಎಷ್ಟು ಉತ್ತಮವಾಗಿ ಎಡಿಟಿಂಗ್​ ಮಾಡುವಿರಿ, ಎಷ್ಟು ಉತ್ತಮವಾಗಿ ಟೈಟಲ್​ ಕೊಡುವಿರಿ, ಯಾವ ಸಮಯದಲ್ಲಿ ವಿಡಿಯೋ ಮಾಡುವಿರಿ ಹೀಗೆ ಹತ್ತಾರು ಅಂಶಗಳು ಗಣನೆಗೆ ಬರುತ್ತವೆ.

ಕೀವರ್ಡ್​ ಮತ್ತು ಎಸ್​ಇಒ: ಜನರು ಯಾವ ರೀತಿ ಯೂಟ್ಯೂಬ್​ನಲ್ಲಿ ಹುಡುಕುತ್ತಾರೆ ಎನ್ನುವುದನ್ನು ಮನ ದಟ್ಟು ಮಾಡಿಕೊಂಡು ಅದರಂತೆ ವಿಡಿಯೋ ಟೈಟಲ್​ಗಳನ್ನು ಕೊಡುವ ಪ್ರಕ್ರಿಯೆಯೇ ಕೀವರ್ಡ್​ ಮತ್ತು ಎಸ್​ಇಒ. ಸರ್ಚ್​ ಎಂಜಿನ್​ ಆಪ್ಟಿಮೈಸೇಷನ್​ ಎನ್ನುವುದು ಎಸ್​ಇಒದ ವಿಸತರೂಪ. ಯೂಟ್ಯೂಬ್​ ಸಕ್ಸಸ್​ಗೆ ಎಸ್​ಇಒ ಬಗ್ಗೆ ಅರಿತುಕೊಳ್ಳೋದು ಬಹಳ ಮುಖ್ಯ.

ಫೈನಾನ್ಸಿಯಲ್​ ಫ್ರೀಡಂ ಆ್ಯಪ್​ನಲ್ಲಿ ಯೂಟ್ಯೂಬ್​ ಕೋರ್ಸ್​
ಇಂಡಿಯನ್​ ಮನಿ ಡಾಟ್​ ಕಾಂನ ಯೂಟ್ಯೂಬ್​ ಚಾನಲ್​ ಬಗ್ಗೆ ನಿಮಗೆ ಗೊತ್ತೇ ಇದೆ. ಹಣಕಾಸು ಶಿಣ ನೀಡುವ ದೇಶದ ಪ್ರಮುಖ ಯುಟ್ಯೂಬ್​ ಚಾನಲ್​ಗಳ ಪೈಕಿ ಇಂಡಿಯನ್​ ಮನಿ ಡಾಟ್​ ಕಾಂನ ಯೂಟ್ಯೂಬ್​ ಚಾನಲ್​ ಮುಂಚೂಣಿ ಸಾಲಿನಲ್ಲಿದೆ. ನಮ್ಮ ಬಹಳಷ್ಟು ವೀಕರು ಯೂಟ್ಯೂಬ್​ ಚಾನಲ್​ ಆರಂಭಿಸಿ ಸಂಪಾದಿಸೋದು ಹೇಗೆ ಎನ್ನುವ ಬಗ್ಗೆ ತಿಳಿಸಿಕೊಡುವಂತೆ ಕೇಳುತ್ತಿದ್ದರು. ಇದನ್ನು ಪರಿಗಣಿಸಿ ಫೈನಾನ್ಸಿಯಲ್​ ಫ್ರೀಡಂ ಆ್ಯಪ್​ನಲ್ಲಿ ಯೂಟ್ಯೂಬ್​ ಚಾನಲ್​ ಆರಂಭಿಸಿ ಲ ಲ ಸಂಪಾದಿಸೋದು ಹೇಗೆ ಎನ್ನುವ ಬಗ್ಗೆ ಕೋರ್ಸ್​ ವಿನ್ಯಾಸಗೊಳಿಸಲಾಗಿದೆ. ಸಾಕಷ್ಟು ಸಂಶೋಧನೆ ಮಾಡಿದ ಬಳಿಕ ಈ ಕೋರ್ಸ್​ ಅನ್ನು ಪ್ರಾಯೋಗಿಕ ಉದಾಹರಣೆಗಳ ಸಮೇತ ರೂಪಿಸಲಾಗಿದೆ. ಯೂಟ್ಯೂಬ್​ ಬಗ್ಗೆ ಏನೂ ತಿಳಿದಿಲ್ಲ ಎನ್ನುವವರು ಕೂಡ ಈ ಕೋರ್ಸ್​ ನೋಡಿದ ಬಳಿಕ ಸುಲಭದಲ್ಲಿ ಯೂಟ್ಯೂಬ್​ ಚಾನಲ್​ ಆರಂಭಿಸಿ ಸಂಪಾದಿಸಲು ಸಾಧ್ಯವಾಗುವಂತೆ ಮಾರ್ಗದರ್ಶನ ಮಾಡಲಾಗಿದೆ. ಹಾಗಾದ್ರೆ ಇನ್ನೇಕೆ ತಡ, ಫೈನಾನ್ಸಿಯಲ್​ ಫ್ರೀಡಂ ಆ್ಯಪ್​ ಡೌನ್​ಲೋಡ್​ ಮಾಡಿ ಯೂಟ್ಯೂಬ್​ ಆರಂಭಿಸಿ ಲಕ್ಷ ಲಕ್ಷ ಗಳಿಸೋದು ಹೇಗೆ ಎನ್ನುವ ಕೋರ್ಸ್​ ನೋಡಿ ನೀವು ಗಳಿಕೆ ಮಾಡಲು ಶುರು ಮಾಡಿ.

ಕೋರ್ಸ್​ನಲ್ಲಿ ಏನಿದೆ ಮಾಹಿತಿ?
ಕೋರ್ಸ್​ನ ಪರಿಚಯ : ವಿವಿಧ ರೀತಿಯ ಯೂಟ್ಯೂಬ್​ ಚಾನಲ್​ಗಳು ? ಯೂಟ್ಯೂಬ್​ ಆರಂಭಿಸೋದು ಹೇಗೆ? ಯೂಟ್ಯೂಬ್​ ವಿಡಿಯೋ ಮಾಡೋದು ಹೇಗೆ? ?ಯೂಟ್ಯೂಬ್​ ಚಾನಲ್​ ಸ್ಪೆಷಾಲಿಟಿ ?ಯೂಟ್ಯೂಬ್​ ವಿಡಿಯೋ ಅಪ್​ ಲೋಡ್​ ಮಾಡೋದು ಹೇಗೆ? ಯೂಟ್ಯೂಬ್​ ಕಸ್ಟಮೈಝೇಷನ್​ ?ಯೂಟ್ಯೂಬ್​ ಚಾನಲ್​ ನೀತಿ ನಿಯಮ ?ಯೂಟ್ಯೂಬ್​ ಅನಾಲಿಟಿಕ್ಸ್​ ಬಳಕೆ ಹೇಗೆ? ಹೆಚ್ಚು ಸಬ್​ಸ್ಕ್ರೆರ್ಬಸ್​ ಪಡೆಯೋದು ಹೇಗೆ? ಯೂಟ್ಯೂಬ್​ ಚಾನಲ್​ ಹಣ ಗಳಿಕೆ ಹೇಗೆ? ಯೂಟ್ಯೂಬ್​ನಿಂದ ಹಣ ಸಂಪಾದಿಸಲು ವಿವಿಧ ಮಾರ್ಗಗಳು? ಯೂಟ್ಯೂಬ್​ ಅನ್ನು ಬಿಸಿನೆಸ್​ ಆಗಿಸೋದು ಹೇಗೆ?
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net