

ಬೆಂಗಳೂರು: ಐಷಾರಾಮಿ ಕಾರುಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮರ್ಸಿಡಿಸ್ ಬೆಂಜ್ ಮೇಡ್ ಇನ್ ಇಂಡಿಯಾ ಪರಿಕಲ್ಪನೆಯಲ್ಲಿ 10ನೇ ಉತ್ಪನ್ನವಾಗಿ ಅತ್ಯಾಧುನಿಕ ವಿನ್ಯಾಸದ ಮರ್ಸಿಡಿಸ್ ಬೆಂಜ್ ಜಿಎಲ್ಸಿ ಕೂಪ್ ಕಾರನ್ನು ಮಂಗಳವಾರ ಬಿಡುಗಡೆ ಮಾಡಿದೆ. ಕಸ್ತೂರಬಾ ರಸ್ತೆಯಲ್ಲಿರುವ ಸುಂದರಂ ಮೋಟಾರ್ಸ್ನಲ್ಲಿ ಕಾರನ್ನು ಅನಾವರಣಗೊಳಿಸಲಾಯಿತು.
ಭಾರತೀಯರಿಗಾಗಿ ಭಾರತದಲ್ಲೇ ತಯಾರಾದ ಉತ್ಪನ್ನಗಳ ಸರಣಿಯಲ್ಲಿ ಜಿಎಲ್ಸಿ ಕೂಪ್ ವಾಹನ ಮೊದಲ ಬಾರಿಗೆ ಲಭ್ಯವಾಗುತ್ತಿದೆ. ಎಸ್ಯುುವಿ ಕೂಪ್ಗೆ ಬೇಡಿಕೆ ಹೆಚ್ಚಾಗುತ್ತಿದೆ. ಅದಕ್ಕೆ ತಕ್ಕಂತೆ ಪೂರೈಕೆ ಮಾಡಲು ಮರ್ಸಿಡಿಸ್ ಬೆಂಜ್ 300ಡಿ 4 ಮ್ಯಾಟಿಕ್ ಡೀಸೆಲ್ ಮತ್ತು 300 4 ಮ್ಯಾಟಿಕ್ ಪೆಟ್ರೋಲ್ ಕಾರುಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಸಂಸ್ಥೆಯ ಭಾರತ ವಿಭಾಗದ ಎಂಡಿ ಮತ್ತು ಸಿಇಒ ಮಾರ್ಟಿನ್ ಶ್ವೆಂಕ್ ಹೇಳಿದರು.
ವಿಶೇಷತೆಗಳು: ಹೊಸ ಜಿಎಲ್ಸಿ ಕೂಪ್ ವಾಹನವು ಮರ್ಸಿಡಿಸ್ ಮಿ ಕನೆಕ್ಟ್ ಸೌಲಭ್ಯವನ್ನು ಹೊಂದಿದೆ. ರಿಮೋಟ್ ಲಾಕ್, ಅನ್ಲಾಕ್, ಕಾರ್ ಲೊಕೇಟರ್, ಸ್ಪೀಡ್ ಮಾನಿಟರ್, ತುರ್ತು ಇ-ಕಾಲ್ ಮತ್ತಿತರ ಸೌಲಭ್ಯಗಳನ್ನು ಅಳವಡಿಸಲಾಗಿದೆ. ಇವೆಲ್ಲವನ್ನೂ ಗ್ರಾಹಕರ ಸ್ಮಾರ್ಟ್ಫೋನ್ ಮೂಲಕವೇ ನಿಯಂತ್ರಿಸಬಹುದಾಗಿದೆ. ಹೊಸ ಪೀಳಿಗೆಯ ಟೆಲಿಮ್ಯಾಟಿಕ್ಸ್ ಹೊಂದಿದ್ದು, ಮರ್ಸಿಡೀಸ್ ಬೆಂಜ್ ಗ್ರಾಹಕ ಅನುಭವ (ಎನ್ಟಿಜಿ 6.0) ಸೌಲಭ್ಯ, ವರ್ಚುವಲ್ ಅಸಿಸ್ಟೆಂಟ್ ಮತ್ತು ಇನ್ಪೋಟೇನ್ಮೆಂಟ್ ಸಿಸ್ಟಂಗಳನ್ನು ಹೊಂದಿದೆ.
# 300 4 ಮ್ಯಾಟಿಕ್ ಡೀಸೆಲ್ ಪೆಟ್ರೋಲ್ ಮಾದರಿ ಕಾರು # ಕಡಿಮೆ ಬೆಲೆಯಲ್ಲಿ 2 ವರ್ಷಗಳ ಸರ್ವೀಸ್ ಪ್ಯಾಕೇಜ್ ಎಕ್ಸ್ ಶೋರೂಂ ಬೆಲೆ
ತಾಂತ್ರಿಕ ವಿವರ
77 ಸಾವಿರ ರೂ.ಗಳಿಗೆ ಸರ್ವೀಸ್ ಪ್ಯಾಕೇಜ್
300ಡಿ 4 ಮ್ಯಾಟಿಕ್ ಕಾರಿಗೆ 77 ಸಾವಿರ ರೂ. ಪಾವತಿಸಿ ಅನಿಯಮಿತ ಕಿಲೋಮೀಟರ್ವರೆಗೆ 2 ವರ್ಷಗಳ ಅವಧಿಗೆ ಸರ್ವೀಸ್ ಸೌಲಭ್ಯ ಪಡೆದುಕೊಳ್ಳಬಹುದು. ಜಿಎಲ್ಸಿ 300 4 ಮ್ಯಾಟಿಕ್ ಕಾರಿಗೆ 67,300 ರೂ. ಪಾವತಿಸಿ ಎರಡು ವರ್ಷಗಳ ಅವಧಿಗೆ ಅನಿಯಮಿತ ಕಿಲೋಮೀಟರ್ ಸರ್ವೀಸ್ ಪ್ಯಾಕೇಜ್ ಪಡೆದುಕೊಳ್ಳಬಹುದು.