ಭಾರತದಲ್ಲಿ ಮಣಿಪಾಲ್ ಹಾಸ್ಪಿಟಲ್ಸ್​ ತೆಕ್ಕೆಗೆ ಕೊಲಂಬಿಯಾ ಏಷ್ಯಾ ಹಾಸ್ಪಿಟಲ್ಸ್

Manipal Hospitals to acquire Columbia Asia Hospitals in India
Published on

ನವದೆಹಲಿ: ಭಾರತದಲ್ಲಿ ಕೊಲಂಬಿಯಾ ಏಷ್ಯಾ ಹಾಸ್ಪಿಟಲ್ಸ್ ಅನ್ನು ಮಣಿಪಾಲ್ ಹಾಸ್ಪಿಟಲ್ಸ್ ಸ್ವಾಧೀನ ಪಡಿಸಿಕೊಳ್ಳಲಿದ್ದು, ಈ ಸಂಬಂಧ ಖಚಿತ ಒಪ್ಪಂದ ಏರ್ಪಟ್ಟಿದೆ. ಇದು 2,000 ಕೋಟಿ ರೂಪಾಯಿಗೂ ಅಧಿಕ ಮೊತ್ತದ ವಹಿವಾಟು ಎಂದು ಮೂಲಗಳು ತಿಳಿಸಿವೆ.

ಮಣಿಪಾಲ್ ಹಾಸ್ಪಿಟಲ್ಸ್ ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿದ್ದು, ಕೊಲಂಬಿಯಾ ಏಷ್ಯಾ ಹಾಸ್ಪಿಟಲ್ಸ್ ಪ್ರೈವೇಟ್ ಲಿಮಿಟೆಡ್ (ಕೊಲಂಬಿಯಾ ಏಷ್ಯಾ)ನ ಶೇಕಡ 100 ಪಾಲನ್ನು ಖರೀದಿಸಲು ಕಂಪನಿ ಮುಂದಾಗಿದೆ. ಈಗಾಗಲೇ ರೆಗುಲೇಟರಿ ಅಪ್ರೂವಲ್​ಗಳನ್ನು ಪಡೆದುಕೊಂಡಿದೆ. ಉಳಿದ ಪ್ರಕ್ರಿಯೆಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದೆ.

ಮಣಿಪಾಲ್ ಫ್ಯಾಮಿಲಿಗೆ ಕೊಲಂಬಿಯಾ ಏಷ್ಯಾ ಸೇರ್ಪಡೆಯಾಗುತ್ತಿದ್ದು, ಅದನ್ನು ಸ್ವಾಗತಿಸುತ್ತೇವೆ. ವರ್ಷಗಳಿಂದ ಉತ್ತಮ ಆರೋಗ್ಯ ಸೇವೆಗೆ ಹೆಸರುವಾಸಿಯಾಗಿರುವ ಆಸ್ಪತ್ರೆಯ ಸಾಧನೆಯನ್ನೂ ನಾವು ಪರಿಗಣಿಸುತ್ತೇವೆ, ಪ್ರಶಂಸಿಸುತ್ತೇವೆ ಎಂದು ಮಣಿಪಾಲ್ ಎಜುಕೇಶನ್​ ಆ್ಯಂಡ್ ಮೆಡಿಕಲ್ ಗ್ರೂಪ್​ ಚೇರ್​ಮನ್​ ರಂಜನ್ ಪೈ ಹೇಳಿದ್ದಾರೆ.

ಕೊಲಂಬಿಯಾ ಏಷ್ಯಾ ಹಾಸ್ಪಿಟಲ್ಸ್ 2005ರಲ್ಲಿ ಭಾರತದಲ್ಲಿ ಬೆಂಗಳೂರಿನ ಹೆಬ್ಬಾಳದಲ್ಲಿ ಕಾರ್ಯಾಚರಣೆ ಆರಂಭಿಸಿದ್ದು, ಪ್ರಸ್ತುತ ದೇಶಾದ್ಯಂತ 11 ಆಸ್ಪತ್ರೆಗಳ ಸರಣಿಯನ್ನು ಹೊಂದಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net