ಕರ್ನಾಟಕ ಹಾಲು ಮಹಾಮಂಡಳದ 10 ಯೋಜನೆಗಳಿಗೆ ಇಂದು ಚಾಲನೆ

kmf
Published on

ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳ(ಕೆಎಂಎಫ್​)ದ ನೂತನ ಯೋಜನೆಗಳ ಸಾಮೂಹಿಕ ಉದ್ಘಾಟನೆ ಸಮಾರಂಭವು ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿದೆ. ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಲ ನಿಯಮಿತ ವತಿಯ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಈ ಕೆಳಗಿನ 10 ಯೋಜನೆಗಳಿಗೆ ಚಾಲನೆ ನೀಡುತ್ತಿದ್ದಾರೆ.

1) ನಂದಿನಿ ಹೈಟೆಕ್ ಮೆಗಾ ಹಾಲಿನ ಪುಡಿ ಉತ್ಪದನಾ ಘಟಕ, ರಾಮನಗರ

2) ಪಶು ಆಹಾರ ಉತ್ಪಾದನಾ ಘಟಕ-2 ಧಾರವಾಡ

3) ಪಶು ಆಹಾರ ಉತ್ಪಾದನಾ ಘಟಕ-2- ತುಮಕೂರು

4) ಹೈಟೆಕ್ ಬುಲ್ ಮದರ್ ಫಾರಂ ಮತ್ತು ಮೇವು ಅಭಿವೃದ್ಧಿ ಕೇಂದ್ರ - ಹೆಸರಘಟ್ಟ, ಬೆಂಗಳೂರು

5) ರಾಜ್ಯ ಕೇಂದ್ರಿಯ ಪ್ರಯೋಗಾಲಯ ಕೆಎಂಎಫ್ ಸಂಕೀರ್ಣ- ಬೆಂಗಳೂರು

6) ಕೆಎಂಎಫ್ ತರಬೇತಿ ಕೇಂದ್ರ- ಕಲ್ಬುರ್ಗಿ

7) ಹಾಸನ ಪಶು ಆಹಾರ ಘಟಕದಲ್ಲಿ ಗೋದಾಮು, ಆಡಳಿತ ಕಚೇರಿ ಮತ್ತು ಇತರೆ ಅಭಿವೃದ್ಧಿ ಕಾಮಗಾರಿಗಳು

8) ರಾಜಾನುಕುಂಟೆ ಪಶು ಆಹಾರ ಘಟಕದಲ್ಲಿ ಗೋದಾಮು, ಆಡಳಿತ ಕಚೇರಿ ಮತ್ತು ಇತರೆ ಅಭಿವೃದ್ಧಿ ಕಾಮಗಾರಿಗಳು

9) ಶಿಕಾರಿಪುರ ಪಶು ಆಹಾರ ಘಟಕದಲ್ಲಿ ಕಾಕಂಬಿ ಶೇಖರಣಾ ಟ್ಯಾಂಕ್ - ಶಿವಮೊಗ್ಗ

10) ಬೆಣ್ಣೆ ದಾಸ್ತಾನಿನ ಡೀಪ್ ಫ್ರೀಜರ್ ಘಟಕ - ಚಳ್ಳಘಟ್ಟ, ಬೆಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net