ಇನ್​ಫೋಸಿಸ್​ Q3 ರಿಸಲ್ಟ್​ ಪ್ರಕಟವಾಗಿದ್ದು, ನಿವ್ವಳ ಲಾಭ ಶೇಕಡ 23.7 ಏರಿಕೆ: 2020ರ ಹಣಕಾಸು ವರ್ಷದಲ್ಲಿ ಶೇಕಡ 10-10.5 ಆದಾಯ ಹೆಚ್ಚಳ ನಿರೀಕ್ಷೆ

infosys
Published on

ಬೆಂಗಳೂರು: ದೇಶದ ಎರಡನೆ ಅತಿದೊಡ್ಡ ಐಟಿ ಸೇವಾ ಸಂಸ್ಥೆ ಇನ್ಫೋಸಿಸ್ ಶುಕ್ರವಾರ ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದೆ. ಇದರಂತೆ, ಡಿಸೆಂಬರ್​ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಶೇಕಡ 23.7ರ ಹೆಚ್ಚಳ ಆದಾಯದಲ್ಲಿ ಕಂಡಿದ್ದು, ಕನ್ಸೋಲಿಡೇಟೆಡ್​ ನೆಟ್ ಪ್ರಾಫಿಟ್​ 4,466 ಕೋಟಿ ಆಗಿದೆ.

ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ಗೆ ಸಲ್ಲಿಸಿದ್ದ ದಾಖಲೆಗಳ ಪ್ರಕಾರ ಕಳೆದ ವರ್ಷದ ಇದೇ ಅವಧಿಯ ನೆಟ್ ಪ್ರಾಫಿಟ್​ 3,610 ಕೋಟಿ ರೂಪಾಯಿ ಆಗಿತ್ತು. ಕಳೆದ ಹಣಕಾಸು ವರ್ಷದ ಇದೇ ಅವಧಿಯ ಆದಾಯ 21,400 ಕೋಟಿ ಇದ್ದುದ್ದು, ಈ ವರ್ಷ ಶೇಕಡ 7.9 ಹೆಚ್ಚಳವಾಗಿದ್ದು 23,092 ಕೋಟಿ ಆಗಿದೆ.

ಈ ಬೆಳವಣಿಗೆ ಪ್ರಕಾರ 2019-20ರ ಹಣಕಾಸು ವರ್ಷದ ಆದಾಯದ ಔಟ್​​ಲುಕ್​ ಶೇಕಡ 10-10.5ರ ನಡುವೆ ಇರಬಹುದು. ಈ ಹಿಂದೆ ಅಕ್ಟೋಬರ್​ನಲ್ಲಿನ ಅಂಕಿ ಅಂಶದ ಪ್ರಕಾರ ಶೇಕಡ 9-10 ಎಂದು ಅಂದಾಜಿಸಲಾಗಿತ್ತು. ಇನ್ಫೋಸಿಸ್​ ಸಿಇಒ, ಎಂಡಿ ಸಲಿಲ್ ಪಾರೇಖ್​, ಗ್ರಾಹಕ ಸೇವೆಯಲ್ಲಿ ಸುಸ್ಥಿರತೆಯನ್ನು ನಾವು ಕಾಪಾಡಿಕೊಂಡಿದ್ದೇವೆ. ಡಿಜಿಟಲ್ ಟ್ರಾನ್ಸ್​ಫಾರ್ಮೇಷನ್ ಯುಗದಲ್ಲಿ ಗ್ರಾಹಕರು ನಮ್ಮ ಜತೆಗೆ ಪಾಲುದಾರಿಕೆ ಮುಂದುರಿಸುತ್ತಿರುವುದರ ದ್ಯೋತಕ ಇದು ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net