ಮಂಗಳವಾರದ ವಹಿವಾಟಿನಲ್ಲಿ 2,476 ಅಂಶ ಏರಿಕೆ ಕಂಡ ಸೆನ್ಸೆಕ್ಸ್​, 2009ರ ನಂತರದಲ್ಲಿ ಒಂದೇ ಇಷ್ಟೊಂದು ಏರಿಕೆಯಾಗಿದ್ದು ಇದೇ ಮೊದಲು

share
Published on

ಮುಂಬೈ: ಮುಂಬೈ ಷೇರುಪೇಟೆಯಲ್ಲಿ ಮಂಗಳವಾರದ ವಹಿವಾಟಿನಲ್ಲಿ ಭರ್ಜರಿ ಏರಿಕೆ ಕಂಡುಬಂದಿದೆ. ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್​ 2,476 ಅಂಶಗಳ ಏರಿಕೆ ದಾಖಲಿಸಿದರೆ, ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 702.10 ಅಂಶ ದಾಖಲಿಸಿತು.
2009ರ ನಂತರದಲ್ಲಿ ಷೇರುಪೇಟೆಯಲ್ಲಿ ಒಂದೇ ದಿನ ಇಷ್ಟೊಂದು ಏರಿಕೆ ಕಂಡುಬಂದಿದ್ದು ಇದೇ ಮೊದಲಾಗಿದೆ.

ಮಂಗಳವಾರದ ಮಧ್ಯಾವಧಿ ವಹಿವಾಟಿನಲ್ಲಿ ಸೆನ್ಸೆಕ್ಸ್​ ದಿನದ ಅತ್ಯಧಿಕ 2,566.70 ಅಂಶಗಳ ಏರಿಕೆ ದಾಖಲಿಸಿತ್ತು. ನಂತರ ಸ್ವಲ್ಪ ಇಳಿಕೆಯೊಂದಿಗೆ 2,476.26 ಅಂಶಗಳಿಗೆ ಇಳಿದು, 30,157.65 ಅಂಶಗಳಿಗೆ ವಹಿವಾಟು ಮುಗಿಸಿತು. ನಿಫ್ಟಿ ಒಟ್ಟಾರೆ 702.10 ಅಂಶಗಳ ಏರಿಕೆಯೊಂದಿಗೆ 8,785.90 ಅಂಶಗಳಿಗೆ ವಹಿವಾಟು ನಿಲ್ಲಿಸಿತು.

ಸೆನ್ಸೆಕ್ಸ್​ ಶುಕ್ರವಾರ 674.36 ಅಂಶಗಳ ಕುಸಿತದೊಂದಿಗೆ 27,590.95 ಅಂಶಗಳಿಗೆ ಇಳಿದಿತ್ತು. ನಿಫ್ಟಿ 170 ಅಂಶಗಳ ಇಳಿಕೆಯೊಂದಿಗೆ 8,083.80 ಅಂಶಗಳಿಗೆ ಇಳಿದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net