ಭಾರತದ ಜಿಡಿಪಿ ಶೇ.5.4ಕ್ಕೆ ಇಳಿಕೆ ಸಾಧ್ಯತೆ: ಮೂಡಿಸ್​

gdp
Published on

ನವದೆಹಲಿ: 2020ರಲ್ಲಿ ಭಾರತದ ಒಟ್ಟು ದೇಶಿಯ ಉತ್ಪನ್ನ (ಜಿಡಿಪಿ) ಶೇ. 5.4ಕ್ಕೆ ಇಳಿಯಲಿದೆ ಎಂದು ಜಾಗತಿಕ ರೇಟಿಂಗ್ ಸಂಸ್ಥೆ ಮೂಡಿಸ್ ಹೇಳಿದೆ.

ಕಳೆದ ನವೆಂಬರ್ ಮುನ್ನೋಟದಲ್ಲಿ ಜಿಡಿಪಿ ಶೇ. 6.6 ಇರಲಿದೆ ಎಂದು ಅಂದಾಜು ಮಾಡಿತ್ತು. ಭಾರತದ ಆರ್ಥಿಕತೆ ನಿರೀಕ್ಷಿತ ಮಟ್ಟದಲ್ಲಿ ಚೇತರಿಸಿಕೊಳ್ಳದ ಕಾರಣ ಜಿಡಿಪಿ ಪ್ರಮಾಣವನ್ನು ತಗ್ಗಿಸಬೇಕಾಯಿತು. 2021ರಲ್ಲೂ ಭಾರತ ಜಿಡಿಪಿ ದೊಡ್ಡ ಮಟ್ಟದ ಜಿಗಿತ ಕಾಣುವ ಸಂಭವ ಕಡಿಮೆ. ಶೇ. 5.8ರ ಅಸುಪಾಸಿನಲ್ಲಿ ಇರಬಹುದು ಎಂದು ಮೂಡಿಸ್ ಹೇಳಿದೆ.

ಈ ಹಿಂದೆ ಶೇ. 6.7 ವೃದ್ಧಿ ಕಾಣಲಿದೆ ಎಂದು ಮೂಡಿಸ್ ಅಭಿಪ್ರಾಯಪಟ್ಟಿತ್ತು. ಭಾರತ ಆರ್ಥಿಕತೆಯು ಎರಡು ವರ್ಷದಿಂದ ಇಳಿಕೆಯ ಹಾದಿಯಲ್ಲಿ ಸಾಗುತ್ತಿದೆ. ಇತ್ತೀಚೆಗೆ ಮಂಡಿಸಿದ ಕೇಂದ್ರ ಬಜೆಟ್​ನಲ್ಲೂ ಆರ್ಥಿಕತೆಗೆ ದೊಡ್ಡ ಉತ್ತೇಜನ ನೀಡುವಂತಹ ಅಂಶಗಳು ಕಾಣುತ್ತಿಲ್ಲ. ಹೀಗಾಗಿ ಭಾರತದ ಆರ್ಥಿಕತೆ ಮಂದ ಚಲನೆಯ ಹಾದಿಯಿಂದ ಸದ್ಯಕ್ಕೆ ಹೊರಬರುವ ಸಾಧ್ಯತೆ ಇಲ್ಲ ಎಂದು ಮೂಡಿಸ್ ತಿಳಿಸಿದೆ. ಹೀಗಾಗಿ ಪ್ರಸಕ್ತ ಆರ್ಥಿಕ ವರ್ಷದ ಅಂತ್ಯಕ್ಕೆ ಜಿಡಿಪಿ ಶೇ. 5 ತಲುಪುವ ಸಾಧ್ಯತೆ ಇದೆ ಎಂದೂ ಹೇಳಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net