

ನವದೆಹಲಿ: ಆನ್ಲೈನ್ನಲ್ಲಿ ಟಿಕೆಟ್ ಬುಕ್ ಮಾಡುವವರಿಗಾಗಿ ಭಾರತೀಯ ರೈಲ್ವೇಯು ಹೊಸ ಅನುಕೂಲತೆಯನ್ನು ಕಲ್ಪಿಸಿದೆ.
ರೈಲು ಹೊರಡುವ ಮುನ್ನ ತಯಾರಾಗುತ್ತಿದ್ದ ಕಾಯ್ದಿರಿಸಿದ ಪಟ್ಟಿ ಈಗ ಪ್ರಯಾಣಿಕರಿಗೆ ಲಭ್ಯವಾಗಲಿದೆ. ಇದು ಐಆರ್ಸಿಟಿಸಿ ಮೂಲಕ ಮಾಡಿಸುವ ವೆಬ್ ಮತ್ತು ಮೊಬೈಲ್ಗಳಲ್ಲೂ ದೊರೆಯಲಿದೆ. ಇದರಿಂದ ಟಿಕೆಟ್ ಬುಕ್ ಮಾಡಿದ ಪ್ರಯಾಣಿಕರಿಗೆ ಖಾಲಿ ಇರುವ ಬರ್ತ್ಗಳ ಮಾಹಿತಿ ದೊರೆಯಲಿದೆ.
ಈ ಬಗ್ಗೆ ರೈಲ್ವೇ ಸಚಿವ ಪಿಯೂಷ್ ಗೋಯಲ್ ಟ್ವೀಟ್ ಮಾಡಿ, ಇನ್ನು ಜಗಳ ಮುಕ್ತ ಪ್ರಯಾಣ. ಪ್ರಯಾಣಿಕರು ಖಾಲಿ ಇರುವ, ಬುಕ್ ಆಗಿರುವ ಸೀಟುಗಳ ಮಾಹಿತಿ ಇರುವ ಚಾರ್ಟ್ನ್ನು ನೋಡಬಹುದು ಎಂದಿದ್ದಾರೆ.
ರೈಲು ಹೊರಡುವ ನಾಲ್ಕು ತಾಸುಗಳ ಮೊದಲು ಚಾರ್ಟ್ ತಯಾರು ಮಾಡಲಾಗುತ್ತದೆ. ಕೊನೆಯ ಚಾರ್ಟ್ನ್ನು ರೈಲು ಹೊರಡುವ ಮೂವತ್ತು ನಿಮಿಷಗಳ ಮೊದಲು ಅಂತಿಮಗೊಳಿಸಲಾಗುತ್ತದೆ. ಹೀಗೆ ಅಂತಿಮಗೊಂಡ ಎರಡನೇ ಪಟ್ಟಿಯನ್ನು ಪ್ರಯಾಣಿಕರು ನೋಡಬಹುದು.
ಹೀಗೆ ಮಾಡುವ ಮೂಲಕ ನೀವು ಚಾರ್ಟ್ ನೋಡಬಹುದು
1. ಐಆರ್ಸಿಟಿಸಿಗೆ ಲಾಗಿನ್ ಆಗಿ. ಚಾರ್ಟ್/ವೆಕೆನ್ಸಿ ಎಂಬ ಬಟನ್ ಒತ್ತಿದರೆ ಇನ್ನೊಂದು ಪುಟ ತೆರೆಯುತ್ತದೆ.
2. ಅಲ್ಲಿ ನೀವು ನಿಮ್ಮ ಪ್ರಯಾಣದ ವಿವರ ನೀಡಬೇಕು. ಗಾಡಿ ಸಂಖ್ಯೆ, ಪ್ರಯಾಣದ ದಿನಾಂಕ, ಇಳಿಯುವ ಸ್ಥಳಗಳನ್ನು ನೀಡಿದರೆ ನಿಮಗೆ ಗೆಟ್ ಟ್ರೈನ್ ಚಾರ್ಟ್ ವಿವರ ದೊರೆಯುತ್ತದೆ.
3. ಈಗ ನಿಮ್ಮ ಪ್ರಯಾಣದ ಪಟ್ಟಿ ತೆರೆಯುತ್ತದೆ.
4. ಯಾವ ಕ್ಲಾಸ್, ಕೋಚ್ ನಂಬರ್ಗಳ ವಿವರಗಳನ್ನು ನೀವು ವೀಕ್ಷಿಸಬಹುದು.
5. ನಿಮಗೆ ನಿಗದಿಗೊಳಿಸಿದ ಕೋಚ್ ನಂಬರ್ ಮೇಲೆ ಕ್ಲಿಕ್ ಮಾಡಿದರೆ ಅಲ್ಲಿನ ಎಲ್ಲ ವಿವರಗಳನ್ನು ಕಾಣಬಹುದು.