

ನವದೆಹಲಿ: ಕೇಂದ್ರ ಸರ್ಕಾರ ಶೀಘ್ರದಲ್ಲೇ 1 ರೂಪಾಯಿ ಮುಖಬೆಲೆಯ ಹೊಸ ನೋಟನ್ನು ಮರಳಿ ಜಾರಿಗೆ ತರಲು ಚಿಂತನೆ ನಡೆಸಿದೆ. ಈ ಕುರಿತು ಫೆ.7ರಂದು ಅಧಿಸೂಚನೆ ಹೊರಡಿಸಿದೆ.
ಹೊಸ ನೋಟಿನ ವಿನ್ಯಾಸದಲ್ಲಿ ಹಲವು ಬದಲಾವಣೆಗಳನ್ನು ತರಲಾಗಿದ್ದು, ಬಣ್ಣ, ಅಳತೆ ಸೇರಿದಂತೆ ವಿವಿಧ ಅಂಶಗಳನ್ನು ಸರ್ಕಾರ ಈಗಾಗಲೇ ಅಂತಿಮಗೊಳಿಸಿದೆ. 9.7 X 6.3 ಸೆ.ಮೀ ಅಳತೆಯ ನೋಟು, 110 ಮೈಕ್ರಾನ್ನಷ್ಟು ದಪ್ಪವಿರಲಿದೆ. ಹಲವು ವಾಟರ್ವಾರ್ಕ್ಗಳಿರಲಿದ್ದು, ಒಂದು ರೂಪಾಯಿ ನಾಣ್ಯದ ಚಿತ್ರದ ಜತೆಗೆ ರೂಪಾಯಿ ಚಿನ್ಹೆಯನ್ನು ಹೊಂದಿರಲಿದೆ.
ನೋಟಿನ ಹಿಂಬದಿಯಲ್ಲಿ ಕೃಷಿ ಮತ್ತು ಸಮುದ್ರದಲ್ಲಿನ ತೈಲ ಪರಿಶೋಧನಾ ಘಟಕ ಚಿತ್ರಗಳಿರಲಿದ್ದು, 15 ಭಾಷೆಯಲ್ಲಿ 1 ರೂಪಾಯಿ ಎಂದು ನಮೂದಿಸಲಾಗಿರುತ್ತದೆ.