ಗ್ರಾಹಕರ ಮನಗೆದ್ದ ಐಬಿ ಸುಲಭ ಠೇವಣಿ ಯೋಜನೆ

Bank
Published on

ಬೆಂಗಳೂರು: ಆರ್ಥಿಕ ಒಳಗೊಳ್ಳುವಿಕೆಗೆ ಪ್ರೋತ್ಸಾಹಿಸಲು ಇಂಡಿಯನ್ ಬ್ಯಾಂಕ್ ಆರಂಭಿಸಿರುವ ಸುಲಭ ಠೇವಣೆ ಮತ್ತು ಸಾಲ ಯೋಜನೆ ಭಾರಿ ಜನಪ್ರಿಯವಾಗಿದೆ. ಯೋಜನೆ ಆರಂಭವಾಗಿ 20 ದಿನಗಳು ಆಗುವಷ್ಟರಲ್ಲಿ 1.35 ಲಕ್ಷ ಗ್ರಾಹಕರು ಖಾತೆ ತೆರದಿದ್ದಾರೆ. ಇದು ಯೋಜನೆಯ ಯಶಸ್ಸಿಗೆ ಹಿಡಿದ ಕೈಗನ್ನಡಿಯಾಗಿದೆ.

ಸಣ್ಣ ಹೂಡಿಕೆದಾರರಿಗೆ ಅನು ಕೂಲ: ಪ್ರತಿದಿನ ಸಣ್ಣ ಮೊತ್ತದ ಉಳಿತಾಯದ ಮೂಲಕ ತಮ್ಮ ವ್ಯಾಪಾರ- ವಹಿವಾಟನ್ನು ಸುಧಾರಿಸಿ ಕೊಳ್ಳಬೇಕು ಎಂಬ ಕನಸು ಹೊಂದಿರುವವರಿಗೆ ಈ ಯೋಜನೆ ಪೂರಕವಾಗಿದೆ.

ಮುದ್ರಾ ಸಾಲ ಯೋಜನೆಯಡಿ ರೂಪಿಸಲಾಗಿರುವ ಈ ಯೋಜನೆಯಡಿ ಗ್ರಾಹಕರು ಉಳಿತಾಯ ಮಾಡುವ ಮೊತ್ತದ ಮೂರು ಪಟ್ಟು ಅಥವಾ ಗರಿಷ್ಠ 50 ಸಾವಿರ ರೂ.ವರೆಗೆ ಸಾಲ ಸೌಲಭ್ಯವನ್ನು ಒದಗಿಸಲಾಗುತ್ತದೆ. ಸಾಲದ ಮೊತ್ತವನ್ನು ಕೂಡ ಗ್ರಾಹಕರ ಮನೆಬಾಗಿಲಿಗೆ ಹೋಗಿ ಸಂಗ್ರಹಿಸ ಲಾಗುತ್ತದೆ. ಇದರಿಂದಾಗಿ ಸಾಲ ಪಡೆಯಲು ಹಾಗೂ ಸಾಲ ತೀರಿಸಲು ಗ್ರಾಹಕರು ಬ್ಯಾಂಕ್​ಗಳಿಗೆ ಸುತ್ತುವ ಸಮಯದ ಉಳಿತಾಯವಾಗುತ್ತದೆ.

ಕಾರ್ವಿುಕರಿಗೆ ಅನುಕೂಲ

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (ಎಂಎಸ್​ಎಂಇ), ಕೃಷಿ, ಸೇವಾ ವಲಯ, ಗೂಡಂಗಡಿ, ದಿನಗೂಲಿ ಕಾರ್ವಿುಕರು ಮತ್ತು ಸ್ವಸಹಾಯ ಗುಂಪಿನ ಸದಸ್ಯರನ್ನು ಗಮನದಲ್ಲಿಟ್ಟುಕೊಂಡು ಐಬಿ ಸುಲಭ ಠೇವಣಿ ಮತ್ತು ಸಾಲ ಯೋಜನೆಯನ್ನು ರೂಪಿಸಲಾಗಿದೆ ಎಂದು ಇಂಡಿಯನ್ ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net