

ಬೆಂಗಳೂರು:ಹುಂಡೈ ಮೋಟಾರ್ ಇಂಡಿಯಾ ಪ್ರೖೆವೇಟ್ ಲಿಮಿಟೆಡ್ ತನ್ನ ಮಾರಾಟ ಪಾಲುದಾರರಾದ ಅದ್ವೈತ್ ಮತ್ತು ಟ್ರೖೆಡೆಂಟ್ ಜತೆಗೂಡಿ ಇತ್ತೀಚೆಗೆ ಪಡುಕೋಣೆ ದ್ರಾವಿಡ್ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್ನಲ್ಲಿ ಹುಂಡೈ ಕೋನಾ ಎಲೆಕ್ಟ್ರಿಕ್ ವಾಹನಗಳ ಮಾಲೀಕರ, ಗ್ರಾಹಕ ಸಭೆಯನ್ನು ನಡೆಸಿತು. ಕೋನಾ ಎಲೆಕ್ಟ್ರಿಕ್ ವಾಹನಗಳು ಶೂನ್ಯ ಪ್ರಮಾಣದ ಹೊಗೆಯನ್ನು ಹೊರಸೂಸುವ ಕಾರಣಕ್ಕೆ ಈ ಕಾರ್ಯಕ್ರಮದಲ್ಲಿ ‘ದಿ ಕೋನಾ ಗ್ರೀನ್ ವೇವ್’ ಎನ್ನುವ ಹೆಸರನ್ನು ಇಡಲಾಗಿತ್ತು.
ದಿನಪೂರ್ತಿ ನಡೆದ ಸಮಾರಂಭದಲ್ಲಿ ಗ್ರಾಹಕರು ಹಾಗೂ ಅವರ ಕುಟುಂಬಗಳು ಹಲವು ರೀತಿಯ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಇದೇ ವೇಳೆ ಗ್ರಾಹಕರು ಮೊದಲ ದೀರ್ಘ ಶ್ರೇಣಿಯ ಮೇಡ್ ಇನ್ ಇಂಡಿಯಾ ಎಲೆಕ್ಟ್ರಿಕ್ ಎಸ್ಯುುವಿ ಹುಂಡೈ ಕೋನಾದ ಮಾಲೀಕತ್ವ ಹಾಗೂ ಚಾಲನೆಯ ಅನುಭವವನ್ನು ಆನಂದಿಸಿದರು. ಗ್ರಾಹಕರ ಕ್ಲೀನ್ ಮೊಬಿಲಿಟಿ ಚಾಯ್್ಸನ್ನು ಆಚರಿಸುವುದು ಕಾರ್ಯಕ್ರಮದ ಮೂಲ ಉದ್ದೇಶವಾಗಿತ್ತು.
ಕಾರ್ಯಕ್ರಮದ ಕೊನೆಯಲ್ಲಿ ಸಸಿಗಳನ್ನು ನೆಡುವ ಮೂಲಕ, ನಿಜವಾದ ಮೌಲ್ಯವನ್ನು ಆಚರಿಸಲಾಯಿತು. ಗ್ರಾಹಕರ ಸಂತೋಷಕರ ಅನುಭವವನ್ನು ಗಮನದಲ್ಲಿಟ್ಟುಕೊಂಡು ಹುಂಡೈ ಇಂಡಿಯಾ ಸಕಾರಾತ್ಮಕ ನಿರ್ಧಾರಗಳನ್ನು ಮಾಡುತ್ತದೆ. ಆ ಮೂಲಕ ಹೆಚ್ಚು ನಂಬಿಕೆಯ ಹಾಗೂ ವಿಶ್ವಾಸಾರ್ಹ ಬ್ರಾ್ಯಂಡ್ ಆಗಿ ಉಳಿದುಕೊಳ್ಳಲಿದೆ. ಪ್ರಸ್ತುತ ಆಟೋಮೊಬೈಲ್ ಉದ್ಯಮ, ಎಲೆಕ್ಟ್ರಿಕ್ ಕಾರುಗಳತ್ತ ಹೆಚ್ಚಾಗಿ ತನ್ನ ದೃಷ್ಟಿಯನ್ನು ಹರಿಸಿದ್ದು, ಹುಂಡೈ ಕೋನಾ ಖಂಡಿತವಾಗಿ ಇದರಲ್ಲಿ ದೊಡ್ಡ ಪಾತ್ರ ನಿಭಾಯಿಸಲಿದೆ.