ಗಗನಕ್ಕೇರಿದ್ದ ಈರುಳ್ಳಿ ದರದಲ್ಲಿ ಭಾರಿ ಇಳಿಕೆ, ಮಾರುಕಟ್ಟೆ ಬೆಲೆ ಪ್ರತಿ ಕೆ.ಜಿ ಗೆ 20 ರೂ.

onion
Published on

ಬೆಂಗಳೂರು: ಎರಡು ತಿಂಗಳ ಹಿಂದಷ್ಟೇ ಗಗನಕ್ಕೇರಿದ್ದ ಈರುಳ್ಳಿ ಬೆಲೆಯಲ್ಲಿ ಈಗ ಭಾರೀ ಇಳಿಕೆಯಾಗಿದೆ. ಯಶವಂತಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಶುಕ್ರವಾರ 1 ಕೆ.ಜಿ ಈರುಳ್ಳಿ 8 ರಿಂದ 20 ರೂ.ಗೆ ಮಾರಾಟವಾಯಿತು.

ರೈತರ ಎರಡನೇ ಬೆಳೆ ಯಥೇಚ್ಚವಾಗಿ ಮಾರುಕಟ್ಟೆಗೆ ಅವಕವಾಗಿದ್ದರಿಂದ ಬೆಲೆ ಕಡಿಮೆಯಾಗಿದೆ. ವಿಜಯಪುರ, ಚಿತ್ರದುರ್ಗ, ಬಾಗಲಕೋಟೆ, ಗದಗ ಸೇರಿ ಹಲವು ಪ್ರದೇಶಗಳಿಂದ ಬೆಳೆ ಬರುತ್ತಿದೆ. ಯಶವಂತಪುರ ಎಪಿ ಎಂಸಿಗೆ ಶನಿವಾರ ಒಂದೇ ದಿನ 53 ಸಾವಿರ ಈರುಳ್ಳಿ ಮೂಟೆ ಗಳು ಆವಕವಾಗಿವೆ. ಈರುಳ್ಳಿ ರಫ್ತನ್ನು ಕೇಂದ್ರ ನಿಷೇಧಿಸಿರುವುದ ರಿಂದ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಮಾರುಕಟ್ಟೆಗೆ ಬರುತ್ತಿದೆ. ಇದು ಬೆಲೆ ಇಳಿಕೆಗೆ ಕಾರಣ ಎಂದು ಯಶವಂತಪುರ ಎಪಿಎಂಸಿ ಮಾರುಕಟ್ಟೆಯ ವರ್ತಕ ರವಿಶಂಕರ್ ತಿಳಿಸಿದ್ದಾರೆ.

ರಫ್ತು ನಿರ್ಬಂಧ ತೆರವಾಗಲಿ

ಶುಕ್ರವಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ ಕೆ.ಜಿ.ಗೆ 16ರಿಂದ 20 ರೂ.ಗೆ ಮಾರಾಟವಾಯಿತು. ಇದರಿಂದ ರೈತರಿಗೂ ನಷ್ಟ ವಾಗುತ್ತಿದೆ. ಸಾರಿಗೆ, ಕೂಲಿ, ಎಪಿಎಂಸಿ ಬಳಕೆದಾರರ ವೆಚ್ಚ ಭರಿಸಲು ರೈತರಿಗೆ ಸಾಧ್ಯವಾಗುತ್ತಿಲ್ಲ. ರಫ್ತು ಆರಂಭಿಸುವುದರಿಂದ 1 ಕೆ.ಜಿ. ಈರುಳ್ಳಿ 40-50 ರೂ. ಆಗಲಿದ್ದು, ರೈತರಿಗೂ ಅನುಕೂಲವಾಗುತ್ತದೆ ಎಂದು ವರ್ತಕರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net