

ಹೂವಿನ ಕೃಷಿ ಎಂದರೇನು?: ಹೂವಿನ ಕೃಷಿ ತೋಟಗಾರಿಕೆಯಲ್ಲಿನ ಒಂದು ವಿಭಾಗವಾಗಿದ್ದು, ಹೂವು ಮತ್ತು ಅಲಂಕಾರಿಕ ಸಸ್ಯಗಳನ್ನು ಒಳಗೊಂಡಿದೆ. ಹೂವಿನ ಬೆಳೆಗಳಲ್ಲಿ ಹಾಸಿಗೆ ಸಸ್ಯಗಳು (ಬೆಡೆಡ್ ಪ್ಲಾಂಟ್ಸ್), ಮನೆ ಗಿಡಗಳು, ಹೂಬಿಡುವ ಉದ್ಯಾನವನ ಮತ್ತು ಮಡಕೆ ಸಸ್ಯಗಳು, ಕತ್ತರಿಸಲ್ಪಟ್ಟ ಹೂವುಗಳು (ಕಟ್ ಫ್ಲವರ್ಸ್), ಹೂಗೊಂಚಲು ಹೀಗೆ ಹಲವು ವಿಧಗಳಿವೆ.
ಹೂವಿನ ಕೃಷಿಗೆ ಸರ್ಕಾರದ ಪ್ರೋತ್ಸಾಹ: ಹೂ ಕೃಷಿ ಬೆಳವಣಿಗೆಗಾಗಿ ಸರ್ಕಾರ ಬಹಳಷ್ಟು ಸವಲತ್ತು ನೀಡಿದೆ. ಹಸಿರುಮನೆ ನಿರ್ಮಾಣಕ್ಕೆ ಶೇ.50 ಸಬ್ಸಿಡಿ, ನೆರಳು ಪರದೆಗಳು, ಹನಿ ನೀರಾವರಿ ಪದ್ಧತಿಗಳಿಗೆ ಸಬ್ಸಿಡಿ, ಯಾವುದೇ ಬಡ್ಡಿ ಇಲ್ಲದೆ ಬೆಳೆ ಸಾಲ, ರಾಷ್ಟ್ರೀಯ ತೋಟಗಾರಿಕೆ ಮಂಡಳಿ ಯೋಜನೆಯಲ್ಲಿ ಹೂ ಕೃಷಿಗೆ ಬೇಕಾಗುವ ಸಸ್ಯಗಳ ಖರೀದಿಗೂ ಶೇ.50 ಸಬ್ಸಿಡಿ ಜತೆಗೆ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದಿಂದ ಕೂಡ ಕೋಲ್ಡ್ ಸ್ಟೋರೇಜ್, ಹೀಗೆ ನೆರವು, ಕೋಲ್ಡ್ ಸ್ಟೋರೇಜ್ ವಾಹನಗಳು ಹೀಗೆ ಹಲವಾರು ರೀತಿಯಲ್ಲಿ ಕೃಷಿಕರಿಗೆ ಸಹಾಯ ಹಸ್ತ ನೀಡುತ್ತಿದೆ. ಎರಡೂ ಕೈ ಸೇರಿದ್ರೇನೇ ಚಪ್ಪಾಳೆ ಅನ್ನೋ ಹಾಗೆ, ಸರ್ಕಾರದ ಸವಲತ್ತು ಏನೇ ಇದ್ದರೂ ನಾವು ಮನಸ್ಸು ಮಾಡದೇ ಕೃಷಿಯಲ್ಲಿ ಸಾಧನೆಯ ಪಥದತ್ತ ಮುಂದೆ ಸಾಗುವುದು ಅಸಾಧ್ಯ.
ಹೂವಿನ ಉತ್ಪನ್ನಗಳು: ಹೂಗಳು ಅಲಂಕಾರಿಕವಾಗಿ ಬಳಕೆಯಾಗುವುದಲ್ಲದೆ, ಇತರ ರೀತಿಯಲ್ಲೂ ಬಹಳ ಉಪಯುಕ್ತವಾಗಿವೆ. ಹೂವಿನಿಂದ ತಯಾರಿಸಲ್ಪಡುವ ಇತರ ಕೆಲ ಉತ್ಪನ್ನ ಈ ಕೆಳಗಿನಂತಿವೆ: ಸುಗಂಧ ದ್ರವ್ಯ, ರೋಸ್ ವಾಟರ್, ಗುಲ್ಕಂದ್, ಸಾಬೂನುಗಳು, ಮೇಣದಬತ್ತಿಗಳು, ತುಟಿ ಮುಲಾಮು, ಆಭರಣಗಳು.