ಸಾಲ ಮರುಪಾವತಿಸಿ ಸಂಘದ ಅಭಿವೃದ್ಧಿಗೆ ಸಹಕರಿಸಿ

HORTI 15-1
Published on

ಹೊರ್ತಿ: ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿಸಿದರೆ ಮಾತ್ರ ಸಹಕಾರಿ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮಕಣಾಪುರದ ಜಗದ್ಗುರು ಸೋಮೇಶ್ವರ ಸ್ವಾಮೀಜಿ ಹೇಳಿದರು. ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಅಮೋಘಸಿದ್ಧೇಶ್ವರ ಪತ್ತಿನ ಸಹಕಾರಿ ಸಂಘದ 17ನೇ ವಾರ್ಷಿಕ ಮಹಾಸಭೆ ಸಾನ್ನಿಧ್ಯ ವಹಿಸಿ ಅವರು ಮಾತನಾಡಿ ಅವರು, ಸಂಘಗಳು ಇರುವುದು ಮನುಷ್ಯರ ಅಭಿವೃದ್ಧಿಗಾಗಿ, ಸಾಲ ಪಡೆದು ವ್ಯಾಪಾರ ವಹಿವಾಟು ಮಾಡಿ, ದುಪ್ಪಟ್ಟು ಲಾಭ ಹೊಂದಿ ಸಾಲ ಪಡೆದಿರುವುದಕ್ಕೆ ಸಾರ್ಥಕವಾಗುವುದು ಎಂದರು.

ಸಂಘದ ಅಧ್ಯಕ್ಷ ಗುರಣ್ಣಗೌಡ ಪಾಟೀಲ ಅಧ್ಯಕ್ಷತೆ ವಹಿಸಿ, ನಮ್ಮ ಸಂಘವು 20-21ನೇ ಸಾಲಿನಲ್ಲಿ 15.90ಲಕ್ಷ ಷೇರು ಬಂಡವಾಳ, 3.73 ಕೋಟಿ ರೂ. ದುಡಿಯುವ ಬಂಡವಾಳ ಹಾಗೂ 30.69 ಲಕ್ಷ ರೂ. ಲಾಭ ಹೊಂದಿದೆ. ಇದಕ್ಕೆಲ್ಲ ಸದಸ್ಯರ ಸಹಕಾರವೇ ಕಾರಣ ಎಂದು ಹೇಳಿದರು.

ಏಗಪ್ಪಗೌಡ ಬಿರಾದಾರ, ಮಲ್ಲಪ್ಪ ಪೂಜಾರಿ, ನಾಮದೇವ ಏಡಗೆ, ಸಿದರಾಯಗೌಡ ಬಿರಾದಾರ, ಮುತ್ತಪ್ಪ ಗೋಡೆಕಾರ, ಮುರ್ತೆಪ್ಪಗೌಡ ಪಾಟೀಲ, ಸೋಮನಿಂಗ ಪೂಜಾರಿ, ಶ್ರೀಶೈಲ ಕವಾನೂರ ಸೇರಿದಂತೆ ಬ್ಯಾಂಕ್ ಸಿಬ್ಬಂದಿ ಹಾಗೂ ಸರ್ವ ಸದಸ್ಯರು ಇದ್ದರು.

ರೇವಪ್ಪ ಪೂಜಾರಿ ಸ್ವಾಗತಿಸಿದರು. ವೈ.ಎಸ್. ಪಾಟೀಲ ವರದಿ ವಾಚನ ಮಾಡಿದರು. ಬಾಳಪ್ಪ ಪೂಜಾರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net