

ಹಿರಿಯೂರು: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾದ ಕೃಷಿಕರ ಉಳಿವು, ಬೆಳವಣಿಗೆಗೆ ಪ್ರಸಕ್ತ ವರ್ಷ ವಿಶೇಷ ಯೋಜನೆ ಸರ್ಕಾರ ರೂಪಿಸಬೇಕು ಎಂದು ಕೆಪಿಸಿಸಿ ಸದಸ್ಯ, ಒಬಿಸಿ ಘಟಕದ ರಾಜ್ಯ ಉಪಾಧ್ಯಕ್ಷ ಈ.ದೊಡ್ಡನಾಗಯ್ಯ ಒತ್ತಾಯಿಸಿದ್ದಾರೆ.
ಲಾಕ್‌ಡೌನ್ ಸಂಕಷ್ಟದಲ್ಲೂ ಕೃಷಿಕರು ದೇಶಕ್ಕೆ ಅನ್ನ ನೀಡಲು ಸಾಲ ಮಾಡಿ ಬಿತ್ತನೆ ಕಾರ್ಯ ಕೈಗೊಳ್ಳುತ್ತಿದ್ದಾರೆ. ಇವರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಸರ್ಕಾರ ಮಾಡಬೇಕು.
ಎಲ್ಲ ರೀತಿ ಕೃಷಿ ಉತ್ಪನ್ನಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸುವ ವಿಶೇಷ ಯೋಜನೆ ರೂಪಿಸಬೇಕು. ಇದರಿಂದ ಆರ್ಥಿಕ ಚಟುವಟಿಕೆ ಏರುಮುಖವಾಗಲಿದೆ. ಜತೆಗೆ ಪಟ್ಟಣದಿಂದ ಹಳ್ಳಿಗಳಿಗೆ ಹಿಂತಿರುಗಿರುವ ವಸಲೆ ಕಾರ್ಮಿಕರಿಗೆ ಕೆಲಸ ದೊರೆಯಲಿದೆ.
ಜತೆಗೆ ಕುರಿಗಾಹಿಗಳು, ಗುಡಿಕೈಗಾರಿಕೆಗಳ ಪ್ರಗತಿಗೆ ಹೆಚ್ಚು ಆದ್ಯತೆ ನೀಡಬೇಕು. ಸರ್ಕಾರದ ಸೌಲಭ್ಯಗಳು ದುರುಪಯೋಗ ಆಗದಮತೆ ಅರ್ಹರಿಗೆ ತಲುಪುವಂತೆ ಜಾಗ್ರತೆ ವಹಿಸಲು ಕ್ರಮಕೈಗೊಳ್ಳಬೇಕು ಎಂದು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.