ಉನ್ನತ ಶಿಕ್ಷಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಪ್ರಗತಿ ಪ್ರಮುಖ ಸಂಶೋಧನೆಗಳೊಂದಿಗೆ ಕ್ಯೂಎಸ್ ಐ-ಗೇಜ್ ವರದಿ ಬಿಡುಗಡೆ

Published on

ಬೆಂಗಳೂರು:

ಉನ್ನತ ಶಿಕ್ಷಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಪ್ರಗತಿ ಕುರಿತಂತೆ ಭಾರತೀಯ ಶಿಕ್ಷಣ ಸಂಸ್ಥೆಗಳಿಗೆ ಸ್ವತಂತ್ರ ರೇಟಿಂಗ್ ನೀಡುವ ಕ್ಯೂಎಸ್ ಐ-ಗೇಜ್ ಉನ್ನತ ಶಿಕ್ಷಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಪ್ರಗತಿ ಎಂಬ ಶೀರ್ಷಿಕೆಯಡಿ, ಅನುಷ್ಠಾನದ ಪ್ರಗತಿಯನ್ನು ಪತ್ತೆ ಹಚ್ಚುವ ಸಂಶೋಧನೆಗಳ ಸರಣಿಯನ್ನು ಒಳಗೊಂಡ ವರದಿಯನ್ನು ಬಿಡುಗಡೆ ಮಾಡಿದೆ.

ದೇಶವು ರಾಷ್ಟ್ರೀಯ ಶಿಕ್ಷಣ ನೀತಿಯ ನಿರ್ದೇಶನಗಳನ್ನು ಅನುಷ್ಠಾನಗೊಳಿಸುವತ್ತ ಹೆಜ್ಜೆ ಹಾಕುತ್ತಿರುವ ಈ ಸಂದರ್ಭದಲ್ಲಿ ಭಾರತೀಯ ಶಿಕ್ಷಣದ ಬದಲಾವಣೆಯ ಹಂತದಲ್ಲಿ ಈ ವರದಿಯನ್ನು ಬಿಡುಗಡೆ ಮಾಡಲಾಗಿದೆ.

ಈ ವರದಿಯು ಶಿಕ್ಷಣ ನೀತಿ ಅನುಷ್ಠಾನ ಪ್ರಗತಿಯನ್ನು ಪತ್ತೆಹಚ್ಚಲು, ಶಿಕ್ಷಣದಲ್ಲಿನ ಅಂತರವನ್ನು ಗುರುತಿಸಲು ಮತ್ತು ಶೈಕ್ಷಣಿಕ ಸುಧಾರಣೆಗಳ ಅನುಷ್ಠಾನವನ್ನು ವೇಗಗೊಳಿಸಲು ಸಮೀಕ್ಷೆ ಆಧಾರಿತ ವಿಶ್ಲೇಷಣೆಯನ್ನು ನೀಡಲಿದೆ. ಈ ವರದಿ ಶಿಕ್ಷಣ ವ್ಯವಸ್ಥೆಯ ದತ್ತಾಂಶ ಮತ್ತು ಒಳಗಿನ ಮಾಹಿತಿಯನ್ನು ತಿಳಿಸುವುದರ ಜೊತೆಗೆ, ಶಿಕ್ಷಣ ಅನುಷ್ಠಾನದ ಅರ್ಥಪೂರ್ಣ ಕ್ರಿಯೆಯನ್ನು ಉತ್ತೇಜಿಸಲಿದೆ.

ಭಾರತೀಯ ಉನ್ನತ ಶಿಕ್ಷಣ ವ್ಯವಸ್ಥೆಯು ರಾಷ್ಟ್ರೀಯ ಶಿಕ್ಷಣ ನೀತಿಗಳನ್ನು ಎಷ್ಟು ಪ್ರಮಾಣದಲ್ಲಿ ಅಳವಡಿಸಿಕೊಂಡಿದೆ ಮತ್ತು ಹೇಗೆ ಕಾರ್ಯರೂಪಕ್ಕೆ ಇಳಿದಿದೆ ಎನ್ನುವುದನ್ನು ನಿರ್ಧರಿಸುವುದೇ ಈ ವರದಿಯ ಪ್ರಮುಖ ಉದ್ದೇಶವಾಗಿದೆ.

ಐದು ಪ್ರಮುಖ ವಿಷಯಗಳು:

1.ಕಲಿಯುವವರಿಗೆ ಕೇಂದ್ರಿತ ಶಿಕ್ಷಣ.

2.ಡಿಜಿಟಲ್ ಕಲಿಕೆ

3.ಉದ್ಯಮ-ಸಂಸ್ಥೆಗಳ ಸಹಯೋಗ

4.ಶೈಕ್ಷಣಿಕ ಸಂಶೋಧನೆ ಮತ್ತು ಅಂತರರಾಷ್ಟ್ರೀಯೀಕರಣ

5.ಭಾರತೀಯ ಜ್ಞಾನ ವ್ಯವಸ್ಥೆಗಳು

165 ಉನ್ನತ ಶಿಕ್ಷಣ ಸಂಸ್ಥೆಗಳಿಂದ, 21 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಿಂದ ದತ್ತಾಂಶವನ್ನು ಈ ವರದಿಯ ಮೂಲಕ ಸಂಗ್ರಹಿಸಲಾಗಿದೆ. ಉಳಿದಂತೆ ಸಂಸ್ಥೆಗಳು ಇಲ್ಲಿಯವರೆಗೆ ಮಾಡಿದ ಪ್ರಗತಿಯನ್ನು ಕಂಡುಕೊಳ್ಳುವುದು, ಶಿಕ್ಷಣ ನೀತಿಯ ಪರಿವರ್ತನೆ ಹಾಗೂ ದೃಷ್ಟಿಕೋನ ಸಾಕಾರಗೊಳಿಸಲು ಅಗತ್ಯ ಅವಕಾಶಗಳನ್ನು ಗುರುತಿಸುವುದರಲ್ಲಿ ಸಹ ಸಹಾಯ ಮಾಡಲಿದೆ.

*ಭಾರತೀಯ ಶಿಕ್ಷಣದಲ್ಲಿ ಸುಧಾರಣೆಯೊಂದಿಗೆ ನಿಜವಾದ ಬದಲಾವಣೆ ಆರಂಭವಾಗಲಿದೆ. ಕ್ಯೂಎಸ್ ಐ-ಗೇಜ್ ವರದಿ ಮೂಲಕ ನಾವು ನಮ್ಮ ಶಿಕ್ಷಣ ಸಂಸ್ಥೆಗಳಿಗೆ, ಅನುಷ್ಠಾನದ ಪ್ರತಿಯೊಂದು ಹಂತದಲ್ಲೂ ಆತ್ಮಾವಲೋಕನ ಮಾಡಿಕೊಳ್ಳಲು ಪ್ರೋತ್ಸಾಹಿಸುತ್ತೇವೆ ಮತ್ತು ಈ ಪ್ರಗತಿ ವರದಿಯ ಮೂಲಕ ನಾವು ಶಿಕ್ಷಣ ಸಂಸ್ಥೆಗಳಿಗೆ ಸ್ಪೂರ್ತಿ ನೀಡುವ ಗುರಿಯನ್ನು ಹೊಂದಿದ್ದೇವೆ.

-ರವಿನ್ ನಾಯರ್, ಕ್ಯೂಎಸ್ ಐ ಗೇಜ್ ವ್ಯವಸ್ಥಾಪಕ ನಿರ್ದೇಶಕರು

*ವಿಕಸಿತ ಭಾರತ 2047 ಕಡೆಗೆ ಭಾರತದ ಪ್ರಯಾಣವು ಜಾಗತಿಕವಾಗಿ ಮಾನದಂಡಬದ್ದ ಮತ್ತು ಸ್ಥಳೀಯವಾಗಿ ಪ್ರಸ್ತುತವಾದ ಶಿಕ್ಷಣದಲ್ಲಿ ಭದ್ರವಾಗಿ ಕಾಲೂರಬೇಕು. ಶ್ರೇಯಾಂಕಗಳು ಮತ್ತು ರೇಟಿಂಗ್‌ಗಳಂತಹ ಪಾರದರ್ಶಕ ಚೌಕಟ್ಟುಗಳು ಭಾರತದ ಸಂಸ್ಥೆಗಳು ವಿಶ್ವ ವೇದಿಕೆಯಲ್ಲಿ ಸ್ಪರ್ಧಾತ್ಮಕವಾಗಿ ಉಳಿಯುವ ಹಾಗು ರಾಷ್ಟ್ರೀಯ ಆಕಾಂಕ್ಷೆಗಳೊಂದಿಗೆ ತಮ್ಮ ಗುರಿಗಳನ್ನು ಹೊಂದಿಸಲು ಉತ್ತೇಜನ ನೀಡುತ್ತವೆ. ಈ ವೇದಿಕೆ ಮತ್ತು ನಾವು ಅನಾವರಣಗೊಳಿಸುತ್ತಿರುವ 2020 ಪ್ರಗತಿ ವರದಿಯು ಆ ಪರಿವರ್ತನೆಯನ್ನು ವೇಗಗೊಳಿಸುವಲ್ಲಿ ನಿರ್ಣಾಯಕ ಹಂತಗಳಾಗಿವೆ.

-ಡಾ.ಅಶ್ವಿನ್ ರ್ನಾಂಡೀಸ್, ಕ್ಯೂಎಸ್ ಕ್ವಾಕ್ವಾರೆಲ್ಲಿ ಸೈಮಂಡ್ಸ್ ಕಾರ್ಯ ನಿರ್ವಾಹಕ ನಿರ್ದೇಶಕರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net