

ನವದೆಹಲಿ: ಹಾಲ್ವಾರ್ಕ್ ಹೊಂದಿರುವ ಚಿನ್ನಾಭರಣಗಳನ್ನೇ ಕಡ್ಡಾಯವಾಗಿ ಮಾರಾಟ ಮಾಡಬೇಕೆಂಬ ಆದೇಶ ಬುಧವಾರದಿಂದ ಜಾರಿಯಾಗಲಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ಮಂಗಳವಾರ ತಿಳಿಸಿದೆ.
ಚಿನ್ನಾಭರಣ ಕೊಳ್ಳುವಾಗ ಗ್ರಾಹಕರು ಮೋಸ ಹೋಗಬಾರದೆನ್ನುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಗ್ರಾಹಕರ ವ್ಯವಹಾರ, ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ರಾಂ ವಿಲಾಸ್ ಪಾಸ್ವಾನ್ ಸುದ್ದಿಗಾರರಿಗೆ ತಿಳಿಸಿದರು. ಬಂಗಾರದ ಶುದ್ಧತೆ ಬಗ್ಗೆ ಗ್ರಾಹಕರಿಗೆ ತಿಳಿಯಪಡಿಸುವುದು ಹಾಗೂ ವಂಚನೆ ತಡೆಯುವುದು ಕೂಡ ಇದರ ಉದ್ದೇಶ ಎಂದರು.
ಪ್ರಸ್ತುತ ಭಾರತೀಯ ಮಾನಕಗಳ ಬ್ಯೂರೊ (ಬಿಐಎಸ್) ಹಾಲ್ವಾರ್ಕಿಂಗ್ ಪ್ರಕ್ರಿಯೆ ನಡೆಸುತ್ತಿದೆ. ಇನ್ನು ಮುಂದೆ ಬೇಡಿಕೆಗನುಗುಣವಾಗಿ ಖಾಸಗಿಯವರೂ ದೇಶದ ವಿವಿಧ ಭಾಗಗಳಲ್ಲಿ ಹಾಲ್ವಾರ್ಕ್ ಕೇಂದ್ರಗಳನ್ನು ತೆರೆಯಬಹುದಾಗಿದೆ.