12 ಕೇಂದ್ರಗಳಲ್ಲಿ ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿ

groundnut
Published on

ಚಿತ್ರದುರ್ಗ : ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ 12 ಕೇಂದ್ರಗಳಲ್ಲಿ ಶೇಂಗಾ ಖರೀದಿಸಲಾಗುವುದೆಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದ್ದಾರೆ. ಕರ್ನಾಟಕ ಆಯಿಲ್ ಫೆಡರೇಷನ್(ಕೆಓಎಫ್)ಪ್ರತಿ ಕ್ವಿಂಟಾಲ್‌ಗೆ 5275 ರೂ.ದರದಲ್ಲಿ 2021ರ ಜನವರಿ 1ರವರೆಗೆ ಖರೀದಿಸಲಿದೆ. ಪ್ರತಿ ಎಕರೆಗೆ ಗರಿಷ್ಠ 3 ಕ್ವಿಂಟಾಲ್‌ನಂತೆ,ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಾಲ್ ಖರೀದಿ ನಡೆಯಲಿದೆ.

ಚಳ್ಳಕೆರೆ ತಾಲೂಕು ತಿಮ್ಮಣ್ಣನಾಯಕನಕೋಟೆ,ರಾಮಜೋಗಿಹಳ್ಳಿ,ದೇವರೆಡ್ಡಿಹಳ್ಳಿ,ತಿಮ್ಮಪ್ಪಯ್ಯನಹಳ್ಳಿ,ಸಾಣೆಕೆರೆ ಹಾಗೂ ಚಳ್ಳಕೆರೆ ಎಪಿಎಂಸಿ. ಹಿರಿಯೂರು ತಾಲೂಕು ಯರಬಳ್ಳಿ ಆರನಕಟ್ಟೆ,ಧರ್ಮಪುರ ಹಾಗೂ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ,ಚಿತ್ರದುರ್ಗ ತಾಲೂಕು ತುರುವನೂರು ಹಾಗೂ ಮೊಳಕಾಲ್ಮೂರು ತಾಲೂಕು ಚಿಕ್ಕೋಬನಹಳ್ಳಿ ಹಾಗೂ ರಾಂಪುರ ಎಪಿಎಂಸಿಯಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗುತ್ತದೆ.

ರೈತರು ನ.21ರೊಳಗೆ ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಬೇಕು. ನೋಂದಣಿಯ ಅವಧಿ ಪೂರ್ಣಾನಂತರ ದಲ್ಲಿಯೇ ಖರೀದಿ ಆರಂಭವಾಗುತ್ತದೆ ಹಾಗೂ ಆಯಾ ರೈತರ ಹೆಸರಿನ ಬ್ಯಾಂಕ್ ಖಾತೆಗೆ ಖರೀದಿ ಹಣ ವರ್ಗಾವಣೆ ಯಾಗಲಿದೆ ಎಂದು ಡಿಸಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net