

ಬೆಂಗಳೂರು: ಕಾನ್ಪಿಡೆನ್ಸ್ ಪೆಟ್ರೋಲಿಯಂ ಇಂಡಿಯಾ ಲಿ. ಉತ್ಪಾದಿಸುವ ಗೋ ಗ್ಯಾಸ್ ಸಿಲಿಂಡರ್ಗೆ ಗ್ರಾಹಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಕಂಪನಿಯು ಗ್ರಾಹಕರಿಗೆ ನೀಡುತ್ತಿರುವ ಉತ್ತಮ ಸೇವೆಯೇ ಇದಕ್ಕೆ ಕಾರಣವಾಗಿದೆ.
ಗೋ ಗ್ಯಾಸ್ ಎಲೈಟ್ ಕ್ಯಾಂಪೋಸಿಟೀವ್ ಗ್ಯಾಸ್ ಸಿಲಿಂಡರ್ ಆಗಿದೆ. 2018-19ನೇ ಸಾಲಿನಲ್ಲಿ ಸಿಲಿಂಡರ್ನ ಬೇಡಿಕೆ ಹೊಸ ದಾಖಲೆ ನಿರ್ಮಾಣ ಮಾಡಿತ್ತು. ಇದು ಬಹಳ ಹಗುರವಾಗಿರುವುದರಿಂದ ಮನೆಯಲ್ಲಿ ಮಕ್ಕಳು ಮತ್ತು ಪಾಲಕರು ಸುಲಭವಾಗಿ ಕೊಂಡೊಯ್ಯಬಹುದು. ಮುಖ್ಯವಾಗಿ ಸಿಲಿಂಡರ್ ಹೊರ ಭಾಗದಲ್ಲಿ ಪಾರದರ್ಶಕ ಪದರ ಹೊಂದಿರುವುದರಿಂದ ಗ್ಯಾಸ್ನ ಪ್ರಮಾಣವನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಇದರಿಂದಾಗಿ ಕಡಿಮೆ ಪ್ರಮಾಣದ ಗ್ಯಾಸ್ ತುಂಬಿ ಸಿಲಿಂಡರ್ ನೀಡುವ ಕಳ್ಳದಾರಿಗೆ ಬ್ರೇಕ್ ಸಹ ಬಿದ್ದಿದೆ. ಪ್ರಮುಖವಾಗಿ ‘ಬ್ಲಾಸ್ಟ್ ಫ್ರೂಫ್’ ಆಗಿರುವುದರಿಂದ ಗ್ಯಾಸ್ ಸೋರಿಕೆಯಾದಾಗ ಬ್ಲಾಸ್ಟ್ ಆಗಲಿದೆ ಎಂಬ ಭಯ ಇರುವುದಿಲ್ಲ.
ಸದ್ಯ ದೇಶದಲ್ಲಿ 70 ಕೋಟಿ ಜನ ಗ್ಯಾಸ್ ಬಳಕೆ ಮಾಡುತ್ತಿದ್ದಾರೆ. ಗೋ ಗ್ಯಾಸ್ನ ಪ್ರಯೋಜನದ ಬಗ್ಗೆ ಅರಿವು ಹೊಂದಿರುವ ಗ್ರಾಹಕರು ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಈ ಗ್ಯಾಸ್ ಬಳಕೆ ಮಾಡಲು ಮುಂದಾಗುವ ಸಾಧ್ಯತೆ ಹೆಚ್ಚಿದೆ. ಮುಂದಿನ ದಿನಗಳಲ್ಲಿ ಕಂಪನಿಯ ವಿಸ್ತೀರ್ಣ ಕೂಡ ಹೆಚ್ಚಾಗಲಿದ್ದು, ಉದ್ಯೋಗಾವಕಾಶವೂ ಸೃಷ್ಟಿಯಾಗಲಿದೆ. ಸದ್ಯ ಈ ಸಿಲಿಂಡರ್ ಅಮೆರಿಕ, ಜಪಾನ್, ಆಸ್ಟ್ರೇಲಿಯಾ, ಯುರೋಪ್ಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ.
ಗ್ರಾಹಕರ ಅನುಕೂಲಕ್ಕಾಗಿ 2 ಮತ್ತು 5 ಕೆ.ಜಿ.ಯ ಸಿಲಿಂಡರ್ಗಳು ಲಭ್ಯವಿವೆ. ಹಾಸ್ಟೆಲ್, ಆಸ್ಪತ್ರೆ, ಪಾರ್ಟಿಗಳಲ್ಲಿ ಬಳಕೆ ಮಾಡಲು ಇವು ಅನುಕೂಲಕರವಾಗಿವೆ. 50 ವರ್ಷದಿಂದ ಸಿಲಿಂಡರ್ ರೂಪದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಇದನ್ನು ಮನಗಂಡು ಗೋ ಗ್ಯಾಸ್ ಸಿಲಿಂಡರ್ ಹೊರ ಭಾಗದಲ್ಲಿ ಬದಲಾವಣೆ ತಂದಿದೆ. ನೋಡಲು ಆಕರ್ಷಕವಾಗಿದೆ. ಅಲ್ಲದೆ, ಇದರ ವಿನ್ಯಾಸವನ್ನು ಪಿಇಎಸ್ಒ ಒಪ್ಪಿಕೊಂಡು ಪ್ರಮಾಣೀಕರಿಸಿದೆ. ಮನೆಯಲ್ಲಿ ಸುರಕ್ಷತೆ ಬಯಸುವವರು ಇದನ್ನು ಬಳಕೆ ಮಾಡಬಹುದು.
ಮಾತ್ರವಲ್ಲದೆ, ಗೋ ಗ್ಯಾಸ್ ಹೆಸರಿನಲ್ಲಿ ದೇಶದಲ್ಲಿ 200 ಆಟೋ ಎಲ್ಪಿಜಿ ಬಂಕ್ಗಳನ್ನು ಹೊಂದಿದೆ. ಈ ಎಲ್ಪಿಜಿ ಬಳಕೆ ಮಾಡುವುದರಿಂದ ಪರಿಸರ ಮಾಲಿನ್ಯ ತಡೆಗಟ್ಟಬಹುದಾಗಿದೆ. 1,500 ಡೀಲರ್ಗಳನ್ನು ಹೊಂದಿದ್ದು, ಮತ್ತಷ್ಟು ಡೀಲರ್ಗಳ ನಿರೀಕ್ಷೆಯಲ್ಲಿದೆ. ಮುಂದಿನ ದಿನಗಳಲ್ಲಿ ಗ್ರಾಮಾಂತರ ಭಾಗದ ಕಡೆಗೆ ಹೆಚ್ಚಿನ ಗಮನಹರಿಸುತ್ತಿದ್ದು, ಮತ್ತಷ್ಟು ಬೆಳವಣಿಗೆ ಸಾಧಿಸುವ ಗುರಿ ಹೊಂದಿದೆ. ಸದ್ಯ ಕಂಪನಿಯು 15 ಎಲ್ಪಿಜಿ ಸಿಲಿಂಡರ್ ಉತ್ಪಾದನ ಘಟಕ ಹಾಗೂ 58 ಬಾಟಲಿಂಗ್ ಕೇಂದ್ರ ಹೊಂದಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.