ವರ್ಷಾಂತ್ಯದ ದಿನ ಚಿನ್ನದ ಬೆಲೆ 10 ಗ್ರಾಂಗೆ 256 ರೂಪಾಯಿ ಹೆಚ್ಚಳ

Gold Rate 5 dec 19
Published on

ನವದೆಹಲಿ: ವರ್ಷದ ಕೊನೆಯ ದಿನವಾದ ಮಂಗಳವಾರದ ವಹಿವಾಟಿನಲ್ಲಿ ಚಿನ್ನದ ದರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 10 ಗ್ರಾಮ್​ಗೆ 256 ರೂಪಾಯಿ ಹೆಚ್ಚಳವಾಗಿದ್ದು, 39,985 ರೂಪಾಯಿಯಲ್ಲಿ ವಹಿವಾಟು ಮುಗಿಸಿದೆ ಎಂದು ಎಚ್​ಡಿಎಫ್​ಸಿ ಸೆಕ್ಯುರಿಟೀಸ್ ಹೇಳಿದೆ.

ಸೋಮವಾರದ ವಹಿವಾಟಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ ದರ 39,729 ರೂಪಾಯಿ ಆಗಿತ್ತು. ಇದೇ ವೇಳೆ ಬೆಳ್ಳಿ ದರ ಕೂಡ ಕಿಲೋಗೆ 494 ರೂಪಾಯಿ ಹೆಚ್ಚಳವಾಗಿದ್ದು, 48,313 ರೂಪಾಯಿ ಆಗಿದೆ. ಸೋಮವಾರ ಮುಕ್ತಯವಾದ ವಹಿವಾಟಿನಲ್ಲಿ ಇದು 47,819 ರೂಪಾಯಿ ಆಗಿತ್ತು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ದರ ಔನ್ಸ್​ಗೆ 1,524.30 ಡಾಲರ್ ಆಗಿದ್ದು, ಬೆಳ್ಳಿಗೆ ಔನ್ಸ್​ಗೆ 18.10 ಡಾಲರ್ ಆಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net