ಷೇರುಪೇಟೆ, ಚಿನ್ನದ ದರ ಇಳಿಕೆ

GOLD PURCHASE
Published on

ಮುಂಬೈ: ಕರೊನಾ ವೈರಸ್ ಸೋಂಕಿನ ಪರಿಣಾಮ ಜಾಗತಿಕ ಷೇರು ಮಾರುಕಟ್ಟೆಯಲ್ಲಿ ತಲ್ಲಣ ಮುಂದುವರಿದಿದ್ದು, ಮಂಗಳವಾರ ಮುಂಬೈ ಷೇರು ಮಾರುಕಟ್ಟೆಯಲ್ಲೂ ಕುಸಿತ ದಾಖಲಾಗಿದೆ.

ಸೆನ್ಸೆಕ್ಸ್ 82 ಅಂಕ ಕುಸಿತವಾಗಿ, 40,281.20ಗೆ ಇಳಿಕೆಯಾಗಿದೆ. ನಿಫ್ಟಿ 31.50 ಅಂಕ ಇಳಿಕೆಯಾಗಿ 11,797.90ರಲ್ಲಿ ನಿಂತಿತು. ಹಣಕಾಸು ಕ್ರಿಯಾ ಕಾರ್ಯ ಪಡೆ (ಎಫ್​ಎಟಿಎಫ್) ಮಾರಿಷಸ್​ನ್ನು ‘ಬೂದು ಪಟ್ಟಿ’ಗೆ ಸೇರಿಸುವ ಸಂಭಾವ್ಯತೆಯ ಹಿನ್ನೆಲೆಯಲ್ಲಿ ಷೇರುಮೌಲ್ಯಗಳಲ್ಲಿ ಸೋಮವಾರ ತೀವ್ರ ಕುಸಿತ ಕಂಡಿತ್ತು. ಆದರೆ ದ್ವೀಪ ದೇಶ ಮಾರಿಷಸ್​ನ ವಿದೇಶಿ ಹೂಡಿಕೆದಾರರು ಎಫ್​ಪಿಐ ನೋಂದಣಿಗೆ ಅರ್ಹರಾಗಿರುತ್ತಾರೆ ಎಂದು ಸೆಬಿ ಸ್ಪಷ್ಟಪಡಿಸಿದ ಹಿನ್ನೆಲೆಯಲ್ಲಿ ಭಾರತದ ಷೇರುಗಳ ಮೌಲ್ಯ ಸ್ಥಿರವಾಗಲು ಆರಂಭವಾಯಿತು.

ಕುಸಿದ ಚಿನ್ನ ಬೆಲೆ: ಚೇತರಿಕೆ ಕಂಡ ರೂಪಾಯಿ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಬಂಗಾರದ ಮಾರಾಟದ ಪರಿಣಾಮವಾಗಿ ಭಾರತದಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 954 ರೂಪಾಯಿ ಇಳಿಕೆ ಕಂಡಿತು. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 10 ಗ್ರಾಂ ಬಂಗಾರದ ಬೆಲೆ 43,549 ರೂಪಾಯಿ ಆಗಿತ್ತು. ಸೋಮವಾರ 953 ರೂಪಾಯಿ ಏರಿಕೆಯಾಗಿ 10 ಗ್ರಾಂ ಬಂಗಾರದ ಬೆಲೆ 44,503 ರೂಪಾಯಿ ಆಗಿತ್ತು. ಬೆಳ್ಳಿ ಬೆಲೆ ಕೂಡ 80 ರೂಪಾಯಿ ಕುಸಿತವಾಗಿ ಕೆಜಿ ಬೆಳ್ಳಿ ಬೆಲೆ 49,990 ಆಗಿತ್ತು. ಸೋಮವಾರ ಕೆ.ಜಿ. ಬೆಳ್ಳಿ ದರ 50,070 ರೂಪಾಯಿಗೆ ತಲುಪಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net