

ಬೆಂಗಳೂರು: ಭಾರತದಲ್ಲಿ ಡಿಜಿಟಲ್ ಇಮೇಜಿಂಗ್ ಹಾಗೂ ಪ್ರಿಂಟಿಂಗ್ ಉಪಕರಣ ಉತ್ಪಾದನೆಯಲ್ಲಿ ನಂ.1 ಸ್ಥಾನವನ್ನು ಎಪ್ಸಾನ್ ಸಂಸ್ಥೆ ಕಾಪಾಡಿಕೊಂಡಿದೆ. ಐಡಿಸಿ ವರ್ಲ್ಡ್ವೈಡ್ನ ತ್ರೖೆಮಾಸಿಕ ಹಾರ್ಡ್ಕಾಪಿ ಪೆರಿಫೆರಲ್ ಟ್ರಾ್ಯಕರ್ (1ಕ್ಯು2020) ಪ್ರಕಾರ ಭಾರತೀಯ ಇಂಕ್ಜೆಟ್ ಪ್ರಿಂಟರ್ ಮಾರುಕಟ್ಟೆಯಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದೆ ಎಂದು ಸಂಸ್ಥೆ ತಿಳಿಸಿದೆ.
2019ರ ಏಪ್ರಿಲ್ನಿಂದ 2020ರ ಮಾರ್ಚ್ವರೆಗಿನ ಆರ್ಥಿಕ ವರ್ಷದಲ್ಲಿ ಎಪ್ಸಾನ್ 8,10,269 ಇಂಕ್ಜೆಟ್ ಪ್ರಿಂಟರ್ಗಳನ್ನು ಮಾರಾಟ ಮಾಡಿದೆ. ಇದು ಸಂಖ್ಯೆಯ ಆಧಾರದಲ್ಲಿ ಭಾರತದ ಇಂಕ್ಜೆಟ್ ಮಾರುಕಟ್ಟೆಯ ಶೇ. 46.07 ಹಾಗೂ ಮೌಲ್ಯದ ಆಧಾರದಲ್ಲಿ ಶೇ. 56.01 ಎಂದು ವರದಿ ತಿಳಿಸಿದೆ. 2017ರಿಂದಲೂ ಇಂಕ್ಜೆಟ್ ಮಾರುಕಟ್ಟೆಯಲ್ಲಿ ಎಪ್ಸಾನ್ ಮೊದಲ ಸ್ಥಾನ ಕಾಯ್ದುಕೊಂಡಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಪ್ಸಾನ್ ಇಂಡಿಯಾ ಸಂಸ್ಥೆಯ ಇಂಕ್ಜೆಟ್ ವಿಭಾಗದ ಹಿರಿಯ ಪ್ರಧಾನ ವ್ಯವಸ್ಥಾಪಕ ಶಿವಕುಮಾರ್, ಈ ವರ್ಷ ಆರ್ಥಿಕ ಸಂಕಷ್ಟದ ಪರಿಸ್ಥಿತಿಯಲ್ಲೂ ನಾವು ಮಾರುಕಟ್ಟೆ ಪಾಲು ಹಾಗೂ ಮೊದಲ ಸ್ಥಾನವನ್ನು ಕಾಯ್ದುಕೊಂಡಿದ್ದೇವೆ ಎಂಬುದು ಸಂತಸದ ವಿಚಾರ. ಭಾರತದಲ್ಲಿ ಇಂಕ್ಟ್ಯಾಂಕ್ ಪ್ರಿಂಟರ್ಗಳನ್ನು ಬಿಡುಗಡೆ ಮಾಡಿದ ಮೊದಲಿಗರಾಗಿ, ನಮ್ಮ ಪ್ರಿಂಟರ್ಗಳಿಗೆ ದರ, ಗುಣಮಟ್ಟ ಹಾಗೂ ಪರಿಸರ ಕಾಳಜಿ ಇರುವ ಗ್ರಾಹಕರಿಂದ ಹೆಚ್ಚು ಸ್ವೀಕೃತಿ ದೊರಕಿದೆ. ಮನೆ, ಕಚೇರಿ, ಉದ್ಯಮ ಸೇರಿ ಎಲ್ಲ ಸಂದರ್ಭಗಳಲ್ಲೂ ಗ್ರಾಹಕರು ಎಪ್ಸಾನ್ ಇಕೊಟ್ಯಾಂಕ್ ಪ್ರಿಂಟರ್ಗಳ ಮೇಲೆ ಭರವಸೆ ಹೊಂದಿದ್ದಾರೆ. ನಮ್ಮ ಇಕೊಟ್ಯಾಂಕ್ ಪ್ರಿಂಟರ್ಗಳು ಕಡಿಮೆ ದರದ ಜತೆಗೆ ಪರಿಸರಸ್ನೇಹಿಯೂ ಆಗಿದ್ದು, ಗ್ರಾಹಕರು ಇದನ್ನು ಮೆಚ್ಚಿದ್ದಾರೆ ಎಂದು ತಿಳಿಸಿದ್ದಾರೆ.
ಕಡಿಮೆ ದರದಲ್ಲಿ ಮುದ್ರಣ, ಹೆಚ್ಚಿನ ಪುಟಗಳ ಮುದ್ರಣ ಹಾಗೂ ಪರಿಸರಸ್ನೇಹಿ ಎಂಬ ಕಾರಣಕ್ಕೆ 2019-20ರಲ್ಲಿ ಎಪ್ಸಾನ್ ಸಂಸ್ಥೆಯು ಇಂಕ್ ಕಾಟ್ರಿಡ್ಜ್ ಮಾದರಿಯಿಂದ ಹೆಚ್ಚಿನ ಸಾಮರ್ಥ್ಯದ ಇಂಕ್ಟ್ಯಾಂಕ್ ಪ್ರಿಂಟರ್ನತ್ತ ಪರಿವರ್ತನೆ ತೀವ್ರಗೊಳಿಸಿತು. ಪ್ರಸ್ತುತ ಜಾಗತಿಕ ಸಂಕಷ್ಟದ ನಡುವೆಯೂ 2020ರಲ್ಲಿ ಎಪ್ಸಾನ್ ಪ್ರಿಂಟರ್ ಬೇಡಿಕೆ ಮುಂದುವರಿಯಲಿದೆ ಎಂಬ ನಂಬಿಕೆ ಇದೆ. ನೌಕರರು ಹಾಗೂ ವಿದ್ಯಾರ್ಥಿಗಳು ಮನೆಯಿಂದ ಕೆಲಸ ಮಾಡುವ ಸಂಸ್ಕೃತಿಯ ಕಾರಣಕ್ಕೆ ಬೇಡಿಕೆ ಹೆಚ್ಚುವ ನಿರೀಕ್ಷೆ ಇದೆ. ಹೆಚ್ಚು ಪರಿಸರ ಸ್ನೇಹಿ ಹಾಗೂ ಆರ್ಥಿಕ ಮಿತವ್ಯಯದ ಕಾರಣಕ್ಕೆ ಲೇಸರ್ನಿಂದ ಇಂಕ್ಜೆಟ್ಗೆ ಬದಲಾವಣೆಯನ್ನೂ ಮುನ್ನೆಡಸಲಿದೆ ಎಂದು ಎಪ್ಸಾನ್ ತಿಳಿಸಿದೆ.