ಮಾಸಾಂತ್ಯಕ್ಕೆ ಇಪಿಎಫ್ ಬಡ್ಡಿ ಪಾವತಿ

epfo
Published on

ನವದೆಹಲಿ: ಡಿಸೆಂಬರ್ ಅಂತ್ಯದ ವೇಳೆಗೆ 6 ಕೋಟಿ ಚಂದಾದಾರ ಭವಿಷ್ಯ ನಿಧಿ (ಇಪಿಎಫ್) ಖಾತೆಗೆ 2019-20ನೇ ಸಾಲಿನ ಶೇ.8.5 ಬಡ್ಡಿಯನ್ನು ಜಮೆ ಮಾಡುವುದಾಗಿ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್​ಒ) ಮೂಲಗಳು ತಿಳಿಸಿವೆ.

ಶೇ.8.5ರಷ್ಟು ಬಡ್ಡಿಯನ್ನು 2 ಕಂತುಗಳಲ್ಲಿ (ಶೇ, 8.15 ಮತ್ತು ಶೇ. 0.35) ಜಮೆ ಮಾಡಲು ಸೆಪ್ಟೆಂಬರ್​ನಲ್ಲಿ ನಡೆದಿದ್ದ ಇಪಿಎಫ್​ಒ ಟ್ರಸ್ಟಿಗಳ ಸಭೆಯಲ್ಲಿ ತೀರ್ವನಿಸಲಾಗಿತ್ತು ಕರೊನಾ ಸಂಕಷ್ಟ ಸ್ಥಿತಿಯಿಂದಾಗಿ 2 ಕಂತುಗಳಲ್ಲಿ ಬಡ್ಡಿ ನೀಡಲು ನಿರ್ಧರಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net