ಕರೊನಾದಿಂದಾಗಿ ಮೊಟ್ಟೆ ಸಗಟು ದರದಲ್ಲಿ ಭಾರಿ ಇಳಿಕೆ

egg vvani
Published on

ಬೆಂಗಳೂರು: ಕರೊನಾ ಸೋಂಕು ಭೀತಿ ಹಿನ್ನೆಲೆ ಕಳೆದೆರಡು ದಿನಗಳಿಂದ ಮೊಟ್ಟೆ ಸಗಟು ದರದಲ್ಲಿ ಭಾರಿ ಇಳಿಕೆ ಕಂಡಿದೆ. ಕಳೆದ ವಾರ 100ಕ್ಕೆ 320 ರೂ. ಇದ್ದ ಬೆಲೆ ಮಂಗಳವಾರ 290 ರೂ. ಇತ್ತು. ಒಂದು ಡಜನ್​ಗೆ 45 ರೂ.ಗೆ ಮಾರಾಟವಾಗುತ್ತಿದೆ. ಜನವರಿ ಹಾಗೂ ಫೆಬ್ರವರಿಯಲ್ಲಿ 480 ರೂ. ತಲುಪಿದ್ದ ಮೊಟ್ಟೆ ದರ, ಮಾ. 1 ರಿಂದ ಕುಸಿತ ಕಾಣುತ್ತಿದೆ. ಚಿಲ್ಲರೆ ಮಾರಾಟಗಾರರು ಪ್ರತಿ ಮೊಟ್ಟೆಗೆ 4.50 ರೂ. ಮಾರಾಟ ಮಾಡುತ್ತಿದ್ದಾರೆ. ಕೊರೊನಾ ಸೋಂಕು ಭೀತಿ ಜನರಲ್ಲಿ ಗಾಢವಾಗಿ ಹರಡಿರುವ ಕಾರಣ ಕೋಳಿ ಮಾಂಸದಂತೆ ಮೊಟ್ಟೆ ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಮೊಟ್ಟೆಯಿಂದ ಕೊರೊನಾ ಸೋಂಕು ಹರಡುತ್ತಿಲ್ಲ ಎಂದು ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಮೊಟ್ಟೆ ವ್ಯಾಪಾರಿ ಮೋಹನ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net