ಡಿಜಿಟಲ್ ಇಂಡಿಯಾ ಸೇಲ್: 11ರವರೆಗೆ ರಿಲಯನ್ಸ್ ಡಿಜಿಟಲ್ ಆಯೋಜನೆ

Digital India
Published on

ಬೆಂಗಳೂರು: ರಿಲಯನ್ಸ್ ಡಿಜಿಟಲ್​ನ ಬಹುನಿರೀಕ್ಷಿತ ‘ಡಿಜಿಟಲ್ ಇಂಡಿಯಾ ಸೇಲ್’ ಆರಂಭಗೊಂಡಿದ್ದು, ದೇಶದ ಎಲ್ಲ ರಿಲಯನ್ಸ್ ಡಿಜಿಟಲ್ ಮಳಿಗೆಗಳು ಹಾಗೂ ಡಿಡಿಡಿ.ಛ್ಝಿಜಿಚ್ಞ್ಚಛಜಿಜಜಿಠಿಚ್ಝ.ಜ್ಞಿನಲ್ಲಿ ಗ್ರಾಹಕರು ರಿಯಾಯಿತಿ ದರದಲ್ಲಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸಬಹುದಾಗಿದೆ. ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ‘ಡಿಜಿಟಲ್ ಇಂಡಿಯಾ ಸೇಲ್’ ಆಯೋಜಿಸಲಾಗಿದ್ದು, ಆ.11ರವರೆಗೆ ಗ್ರಾಹಕರು ರಿಲಯನ್ಸ್ ಡಿಜಿಟಲ್, ಮೈಜಿಯೋ ಮಳಿಗೆಗಳು ಹಾಗೂ ರಿಲಯನ್ಸ್ ವೆಬ್​ಸೈಟ್​ನಲ್ಲಿ

ಎಚ್​ಡಿಎಫ್​ಸಿ ಬ್ಯಾಂಕ್ ಕಾರ್ಡ್​ಗಳ ಮೂಲಕ ಖರೀದಿಸುವ ವಸ್ತುಗಳ ಮೇಲೆ ಶೇ.10 ರಿಯಾಯಿತಿ ಪಡೆಯಲಿದ್ದಾರೆ. ‘ಗ್ರೇಟ್ ಡೀಲ್ಸ್, ಎವರಿಡೇ’ ಥೀಮ್ೊಂದಿಗೆ ಈ ವರ್ಷದ ಡಿಜಿಟಲ್ ಇಂಡಿಯಾ ಸೇಲ್ ಆಯೋಜಿಸಲಾಗಿದ್ದು, ಗ್ರಾಹಕರಿಗೆ ಟೆಲಿವಿಷನ್​ಗಳು, ಗೃಹೋಪಯೋಗಿ ವಸ್ತುಗಳು, ಮೊಬೈಲ್ ಫೋನ್​ಗಳು, ಲ್ಯಾಪ್​ಟಾಪ್​ಗಳು ಸೇರಿ ವಿವಿಧ ವಿಭಾಗಗಳಲ್ಲಿ ವಿಶೇಷ ಕೊಡುಗೆಗಳು ಲಭ್ಯವಿರುತ್ತವೆ.

ಆಕರ್ಷಕ ಬೆಲೆ: ಡಿಜಿಟಲ್ ಇಂಡಿಯಾ ಸೇಲ್​ನಲ್ಲಿ ಆ.11ರವರೆಗೆ ಪ್ರತಿದಿನ ಅತ್ಯಾಕರ್ಷಕ ಕೊಡುಗೆಗಳು ಅನಾವರಣಗೊಳ್ಳಲಿದ್ದು, ಗೃಹೋಪಯೋಗಿ ವಸ್ತುಗಳಾದ ಸೈಡ್ ಬೈ ಸೈಡ್ ರೆಫ್ರಿಜರೇಟರ್​ಗಳು 48,490 ರೂ.ಗಳಿಂದ ಆರಂಭವಾಗಲಿವೆ. ಫ್ರಾಸ್ಟ್ ಫ್ರೀ ರೆಫ್ರಿಜರೇಟರ್​ಗಳ ಬೆಲೆ 18,990 ರೂ.ಗಳಿಂದ ಆರಂಭಗೊಂಡರೆ, ಡೈರೆಕ್ಟ್ ಕೂಲ್ ರೆಫ್ರಿಜರೇಟರ್​ಗಳ ಆರಂಭಿಕ ಬೆಲೆ 10,790 ರೂ. ಇರಲಿದೆ. ಫ್ರಂಟ್​ಲೋಡ್ ವಾಷಿಂಗ್ ಮಷೀನ್​ಗಳು 20,990 ರೂ.ಗಳಿಂದ ಆರಂಭಗೊಳ್ಳಲಿದೆ. ಟಾಪ್​ಲೋಡ್ ವಾಷಿಂಗ್ ಮಷೀನ್​ಗಳು 12,490 ರೂ. ಆರಂಭಿಕ ಬೆಲೆಗೆ ದೊರೆಯಲಿವೆ. ಆಂಡ್ರಾಯ್ಡ್ ಸರಣಿಯ 32, 43 ಹಾಗೂ 55 ಇಂಚುಗಳ ಟೆಲಿವಿಷನ್​ಗಳು ಕ್ರಮವಾಗಿ 11,990 ರೂ., 24,990 ರೂ. ಹಾಗೂ 33,990 ರೂ. ಆರಂಭಿಕ ಬೆಲೆಗೆ ಸಿಗಲಿವೆ.

ವಿಶೇಷ ಕೊಡುಗೆ

ಹಗುರವಾದ ಲ್ಯಾಪ್​ಟಾಪ್​ಗಳು 22,999 ರೂ., ಕರ್ನÌಬಲ್ ಲ್ಯಾಪ್​ಟಾಪ್​ಗಳು 50,999 ರೂ. ಹಾಗೂ ಗೇಮಿಂಗ್ ಲ್ಯಾಪ್​ಟಾಪ್​ಗಳ ದರ 61,499 ರೂ.ನಿಂದ ಆರಂಭಗೊಳ್ಳಲಿವೆ. ಪ್ರತಿ ಲ್ಯಾಪ್​ಟಾಪ್ ಖರೀದಿಯೊಂದಿಗೆ 22,444 ರೂ.ವರೆಗೂ ಉಡುಗೊರೆಗಳ ಜತೆಗೆ ಹೆಚ್ಚುವರಿ ಬ್ರಾಂಡ್ ಕೊಡುಗೆಗಳನ್ನು ಪಡೆಯಬಹುದಾಗಿದೆ. ಆಯ್ದ ಮಾಡೆಲ್​ಗಳ ಸ್ಮಾರ್ಟ್​ಫೋನ್ ಖರೀದಿಸುವ ಗ್ರಾಹಕರಿಗೆ 18 ತಿಂಗಳ ವಾರಂಟಿ ದೊರೆಯಲಿದೆ. ಇದಲ್ಲದೆ, ರಿಲಯನ್ಸ್ ಡಿಜಿಟಲ್ ಗ್ರಾಹಕರು ಒನ್​ಪ್ಲಸ್ ನಾರ್ಡ್ ಮೊಬೈಲ್​ಗಳನ್ನು ರಿಲಯನ್ಸ್ ಡಿಜಿಟಲ್, ಮೈಜಿಯೋ ಸ್ಟೋರ್​ಗಳಲ್ಲಿ ನೇರವಾಗಿ ಖರೀದಿಸಬಹುದಾಗಿದ್ದು, ಆ.11ರವರೆಗೆ ಎಚ್​ಡಿಎಫ್​ಸಿ ಬ್ಯಾಂಕ್ ಕಾರ್ಡ್​ಗಳಲ್ಲಿ ಶೇ.10 ರಿಯಾ ಯಿತಿ ಪಡೆಯಲಿದ್ದಾರೆ. ಫಿಟ್​ನೆಸ್ ಬ್ಯಾಂಡ್​ಗಳು, ಸ್ಮಾರ್ಟ್ ವಾಚ್​ಗಳ ಆಯ್ದ ಮಾಡೆಲ್​ಗಳ ಮೇಲೆ ಶೇ. 50ರವರೆಗೂ ರಿಯಾಯಿತಿ ದೊರೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net