

ನವದೆಹಲಿ: ಡೀಸೆಲ್ ದರ ಭಾನುವಾರು ಪ್ರತಿ ಲೀಟರ್ಗೆ 25 ಪೈಸೆವರೆಗೆ ಇಳಿಕೆ ಕಂಡಿದೆ. ಮತ್ತೊಂದೆಡೆ ಪೆಟ್ರೋಲ್ ಬೆಲೆ ಕೋಲ್ಕತ ಹೊರತುಪಡಿಸಿ ಉಳಿದ ಎಲ್ಲ ಕಡೆಗಳಲ್ಲಿ ಸ್ಥಿರವಾಗಿದೆ. ದೆಹಲಿಯಲ್ಲಿ ಪ್ರತಿ ಲೀಟರ್ ಡೀಸೆಲ್ ದರ 24 ಪೈಸೆ ಇಳಿಕೆ ಕಂಡು 71.58 ರೂ. ತಲುಪಿದೆ.
ಪೆಟ್ರೋಲ್ ಲೀಟರ್ಗೆ 81.14 ರೂ. ಇದೆ. ಕೋಲ್ಕತದಲ್ಲಿ ಪೆಟ್ರೋಲ್ ದರ 2 ಪೈಸೆ ಇಳಿಕೆಯಾಗಿ 82.65 ತಲುಪಿದೆ. ಮುಂಬೈನಲ್ಲಿ ಡೀಸೆಲ್ ಬೆಲೆ 78.02 ರೂ., ಚೆನ್ನೈನಲ್ಲಿ 76.99 ರೂ., ಕೋಲ್ಕತದಲ್ಲಿ 75.08 ಇದೆ.