ಬಹುಭಾಷೆಯ ಧ್ವನಿ ಆಧಾರಿತ ಆಲ್ ಇನ್ ಒನ್ ಆ್ಯಪ್​ ಅನ್ನು ಗ್ರಾಹಕರಿಗೆ ಪರಿಚಯಿಸಿದ ಸಿಟಿ ಯೂನಿಯನ್ ಬ್ಯಾಂಕ್

CUB Lakshmi 4 JAN 20
Published on

ಬೆಂಗಳೂರು: ಗ್ರಾಹಕರಿಗೆ ಟೆಕ್ನಾಲಜಿ ಆಧಾರಿತ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಸಿಟಿ ಯೂನಿಯನ್ ಬ್ಯಾಂಕ್ (ಸಿಯುಬಿ) ಈಗ ಬಹುಭಾಷೆಯ ಧ್ವನಿ ಆಧಾರಿತ ಆಲ್ ಇನ್ ಒನ್ ಮೊಬೈಲ್ ಆ್ಯಪನ್ನು ಪರಿಚಯಿಸಿದೆ.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬಹುಭಾಷೆಯ ಧ್ವನಿ ಆಧಾರಿತ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಷನ್ ಅನ್ನು ದೇಶದಲ್ಲೇ ಮೊದಲ ಬಾರಿಗೆ ಗ್ರಾಹಕರಿಗೆ ಪರಿಚಯಿಸಿದ ಕೀರ್ತಿ ಸಿಯುಬಿ ಪಾಲಾಗಿದೆ. ಗ್ರಾಹಕರು "ಆಸ್ಕ್ ಲಕ್ಷ್ಮಿ" ಎಂಬ ಚಾಟ್​ ಬೋಟ್​ ಜತೆಗೆ ಸಂವಹನ ನಡೆಸಬಹುದಾಗಿದ್ದು, ತಮಿಳು, ಇಂಗ್ಲಿಷ್, ಹಿಂದಿ ಅಥವಾ ತೆಲುಗಿನಲ್ಲಿ ವ್ಯವಹರಿಸಬಹುದಾಗಿದೆ.
ಈ ಚಾಟ್ ಬೋಟ್​ ಹತ್ತಿರ ಜನರಲ್ ಬ್ಯಾಂಕಿಂಗ್​ ಅಗತ್ಯಗಳು ಅಂದರೆ ಬ್ಯಾಲೆನ್ಸ್ ಎನ್​ಕ್ವೈರಿ, ಮಿನಿ ಸ್ಟೇಟ್​ಮೆಂಟ್​, ಫಂಡ್ ಟ್ರಾನ್ಸ್​ಫರ್​ ಮುಂತಾದವುಗಳ ಕುರಿತು ಧ್ವನಿ ಅಥವಾ ಟೆಕ್ಸ್ಟ್​ ಮೂಲಕ ಸಂವಹನ ನಡೆಸಬಹುದು.

ಈ ಆ್ಯಪ್​ಗೆ ಲಾಗಿನ್ ಆದ ಬಳಿಕ, ಗ್ರಾಹಕರು ಬಲಭಾಗದಲ್ಲಿ ಕೆಳಗೆ ಇರುವ "ICON" ಮೇಲೆ ಕ್ಲಿಕ್ ಮಾಡಬಹುದು ಮತ್ತು ಆ ಮೂಲಕ ಧ್ವನಿ ಆಧಾರಿತ ಚಾಟ್ ಬೋಟ್​ "ಆಸ್ಕ್ ಲಕ್ಷ್ಮಿ" ಯನ್ನು ಸಂವಹನಕ್ಕಾಗಿ ಆ್ಯಕ್ಟಿವೇಟ್ ಮಾಡಿಕೊಳ್ಳಬಹುದು. ಐಕಾನ್ ಕ್ಲಿಕ್ ಮಾಡಿದ ಬಳಿಕ ಗ್ರಾಹಕರು ತಮ್ಮ ಆಯ್ಕೆಯ ಭಾಷೆ ( ಇಂಗ್ಲಿಷ್, ತಮಿಳು, ಹಿಂದಿ ಅಥವಾ ತೆಲುಗು)ಯನ್ನು ಸೆಲೆಕ್ಟ್​ ಮಾಡಿಕೊಂಡು ಧ್ವನಿಯ ಮೂಲಕ ಸಂವಹನ ನಡೆಸಬಹುದು. ಅಕೌಂಟ್ ಬ್ಯಾಲೆನ್ಸ್​, ಫಂಡ್ ಟ್ರಾನ್ಸ್​ಫರ್​, ಕಳೆದ ಕೆಲವು ವಹಿವಾಟಿನ ಲಿಸ್ಟ್​ ಪ್ರದರ್ಶಿಸುವುದು, ಠೇವಣಿಯ ಮೆಚುರಿಟಿ ಮತ್ತು ಇತರೆ ಹಣಕಾಸೇತರ ವಹಿವಾಟುಗಳ ವಿವರವನ್ನೂ ಈ ಆ್ಯಪ್ ಮೂಲಕ ಪಡೆಯಬಹುದು. ಧ್ವನಿಗೆ ಈ ಬೋಟ್ ಪ್ರತಿಕ್ರಿಯೆ ನೀಡುತ್ತಿದ್ದು, ಇದೇ ವೇಳೆ ಟೆಕ್ಸ್ಟ್ ಮೆಸೇಜನ್ನೂ ಕೂಡ ಪರದೆ ಮೇಲೆ ತೋರಿಸುತ್ತದೆ.

ಈ ಹೊಸ ಸುಧಾರಿತ ಆಲ್ ಇನ್ ಒನ್ ಆ್ಯಪ್​ನಲ್ಲಿ ಹಣಕಾಸು, ಹಣಕಾಸೇತರ ವಹಿವಾಟುಗಳಾದ ಫಂಡ್ ಟ್ರಾನ್ಸ್​ಫರ್​, ಬಿಲ್ ಪಾವತಿ, ಠೇವಣಿ ಇಡುವುದು, ತೆಗೆಯುವುದು, ಸಾಲ ಪಡೆಯುವುದು, ಚುಕ್ತಾಗೊಳಿಸುವುದು, ಬ್ಯಾಲೆನ್ಸ್ ಎನ್​ಕ್ವೈರಿ, ಅಕೌಂಟ್ ಸ್ಟೇಟ್​ಮೆಂಟ್​, ಸ್ಟಾಪ್​ ಪೇಮೆಂಟ್ ಆಫ್ ಚೆಕ್​, ಕಾರ್ಡ್ ಲಿಮಿಟ್​ ಸೆಟ್ ಮಾಡುವುದು, ವ್ಯಾಲೆಟ್, ಯುಪಿಐ, ಮ್ಯೂಚುವಲ್ ಫಂಡ್​ನಲ್ಲಿ ಹೂಡಿಕೆಯನ್ನು ಕೂಡ ಸರಳ ಮಾರ್ಗದರ್ಶನ ಪಡೆದು ಮಾಡಬಹುದು.

ಇನ್ವೆಸ್ಟ್ ಆಪ್ಶನ್ ಮೂಲಕ ಗ್ರಾಹಕರು ಮಾರುಕಟ್ಟೆಯಲ್ಲಿ ಲಭ್ಯವಿರುವ ಯಾವುದೇ ಅಸೆಟ್ ಮ್ಯಾನೇಜ್​ಮೆಂಟ್ ಕಂಪನಿಯ ಮೂಲಕ ಸಿಸ್ಟಮ್ಯಾಟಿಕ್ ಇನ್​ವೆಸ್ಟ್​ಮೆಂಟ್ ಪ್ಲಾನ್​(ಎಸ್​ಐಪಿ) ಅಥವಾ ಏಕ ಕಂತಿನ ಹೂಡಿಕೆಯನ್ನು ಮಾಡಬಹುದು. ಹೀಗೆ ಸಿಯುಬಿಯ ಆಲ್​ ಇನ್ ಒನ್ ಆ್ಯಪ್​ ಸಿಯುಬಿ ಬ್ಯಾಂಕಿಂಗ್ ಸೇವೆಗಳ ಏಕ ಗವಾಕ್ಷಿಯಾಗಿ ಕೆಲಸ ಮಾಡುತ್ತದೆ.

ಹೆಚ್ಚಿನ ಮಾಹಿತಿಗೆ          

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net