

ನವದೆಹಲಿ: ಕಳೆದ ಹಣಕಾಸು ವರ್ಷದ ಐಟಿ ರಿಟರ್ನ್ಸ್ ಸಲ್ಲಿಕೆಗೆ ಇಂದು (ಸೆಪ್ಟೆಂಬರ್ 30) ಕೊನೇ ದಿನವಾಗಿತ್ತು. ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಬುಧವಾರ ಸಂಜೆ ತೆರಿಗೆದಾರರು ರಿಲಾಕ್ಸ್ ಆಗುವಂಥ ಸುದ್ದಿ ಕೊಟ್ಟಿದೆ!
ಕೋವಿಡ್ 19 ಪರಿಸ್ಥಿತಿಯ ಕಾರಣ ತೆರಿಗೆದಾರರು ಅನುಭವಿಸುತ್ತಿರುವ ಸಂಕಷ್ಟ, ಸಂಕಟಗಳನ್ನು ಮನಗಂಡು 2018-19ನೇ ಸಾಲಿನ ಐಟಿ ರಿಟರ್ನ್ಸ್ ಸಲ್ಲಿಕೆಯ ಅವಧಿಯನ್ನು ಇನ್ನೂ ಎರಡು ತಿಂಗಳು ವಿಸ್ತರಿಸಿರುವುದಾಗಿ ಸಿಬಿಡಿಟಿ ಪ್ರಕಟಿಸಿದೆ. ಇದರಂತೆ, ಐಟಿ ರಿಟರ್ನ್ಸ್ ಸಲ್ಲಿಕೆ ಅವಧಿ ನ.30ರ ತನಕ ವಿಸ್ತರಣೆಯಾಗಿದೆ.
ಇದನ್ನೂ ಓದಿ: ಕಾಲು ಹಿಡ್ಕೋತ್ತಿನಿ ಬಿಟ್ಟು ಬಿಡಿ ಸರ್ !
ಇದರೊಂದಿಗೆ ಐಟಿಆರ್ ಸಲ್ಲಿಸುವ ಅಂತಿಮ ದಿನಾಂಕವನ್ನು ನಾಲ್ಕು ಸಲ ವಿಸ್ತರಿಸಿದಂತಾಗಿದೆ. ಮೊದಲ ಬಾರಿ ಜೂನ್ 30 ರ ತನಕ ವಿಸ್ತರಿಸಲಾಗಿತ್ತು. ನಂತರ ಜುಲೈ 31, ಸೆಪ್ಟೆಂಬರ್ 30 ಈಗ ನವೆಂಬರ್ 30ರ ತನಕ ವಿಸ್ತರಿಸಿದಂತಾಗಿದೆ. (ಏಜೆನ್ಸೀಸ್)