ಕಾರ್ನಿವಲ್ ಪ್ರೀಮಿಯಮ್ ಎಂಪಿವಿ ಮಾರುಕಟ್ಟೆಗೆ; ಕಿಯಾ ಮೋಟಾರ್ಸ್ ಇಂಡಿಯಾ ನಿರ್ವಿುಸಿದ ಕಾರು

carnival premium mpv
Published on

ಬೆಂಗಳೂರು: ಕಿಯಾ ಮೋಟಾರ್ಸ್ ಕಾರ್ಪೋರೇಷನ್​ನ ಅಂಗ ಸಂಸ್ಥೆಯಾದ ಕಿಯಾ ಮೋಟಾರ್ಸ್ ಇಂಡಿಯಾ ‘ಆಟೋ ಎಕ್ಸ್​ಪೋ-2020’ ಕಾರ್ಯಕ್ರಮದಲ್ಲಿ ‘ಕಾರ್ನಿವಲ್ ಪ್ರೀಮಿಯಂ ಎಂಪಿವಿ’ ಕಾರನ್ನು ಬಿಡುಗಡೆ ಮಾಡಿದೆ. ‘ಸೊನೆಟ್ ಕಂಪ್ಯಾಕ್ಟ್ ಎಸ್​ಯುುವಿ’ ಪರಿ ಕಲ್ಪನೆಯನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಭಾರತೀಯ ಮಾರು ಕಟ್ಟೆಗೆ ಅನುಗುಣವಾಗಿ ಮಹತ್ವಾಕಾಂಕ್ಷೆಯ ಮತ್ತು ಅತ್ಯಾಧುನಿಕ ಕಿಯಾ ಕಾರ್ನಿವಲ್ ಪ್ರೀಮಿಯಂ ಎಂಪಿವಿ ಕಾರನ್ನು ಪರಿಚಯಿಸಲಾಗಿದೆ. 2020ರ ದ್ವಿತೀಯಾರ್ಧದಲ್ಲಿ ಭಾರತೀಯ ಮಾರು ಕಟ್ಟೆಯಲ್ಲಿ ಸೊನೆಟ್ ಕಂಪ್ಯಾಕ್ಟ್ ಎಸ್​ಯುುವಿ’ ಬಿಡುಗಡೆಯಾಗುವ ಮುನ್ನ ಈ ಪರಿಕಲ್ಪನೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಲಿದೆ.

ಕಾರ್ನಿವಲ್ ಅಧಿಕೃತವಾಗಿ ಮೂರು ವಿಶೇಷತೆಗಳನ್ನು ಹೊಂದಿದೆ. ಪ್ರೀಮಿಯಂ ಮಾದರಿಗೆ (ಎಕ್ಸ್-ಶೋರೂಮ್ 24.95 ಲಕ್ಷ ರೂ., ಪ್ರೆಸ್ಟೀಜ್ ಮಾದರಿಗೆ (ಎಕ್ಸ್-ಶೋರೂಮ್ 28.95 ಲಕ್ಷ ರೂ. ಹಾಗೂ ಲಿಮೋಸಿನ್ ಮಾದರಿಗೆ 33.95 ಲಕ್ಷ ರೂ. ನಿಗದಿಪಡಿಸಲಾಗಿದೆ.

ಯುವ ಪೀಳಿಗೆ, ಗಣ್ಯರು ಹಾಗೂ ಎಲ್ಲ ವರ್ಗದ ಜನರಿಗೆ ಹೊಂದುವ ರೀತಿಯಲ್ಲಿ ಕಾರ್ನಿವಲ್ ಕಾರು ವಿನ್ಯಾಸಗೊಳಿಸಲಾಗಿದೆ. ಕಿಯಾ ಹೊಸ ಕಾರು ಬಿಡುಗಡೆಯಾದ ಆರಂಭದಲ್ಲಿ 1,400ಕ್ಕೂ ಹೆಚ್ಚು ಬುಕಿಂಗ್​ಗಳನ್ನು ಪಡೆದುಕೊಂಡಿದ್ದು, ಇಲ್ಲಿಯವರೆಗೆ ಒಟ್ಟು 3,500ಕ್ಕೂ ಹೆಚ್ಚು ಬುಕಿಂಗ್​ಗಳನ್ನು ಸ್ವೀಕರಿಸಲಾಗಿದೆ.

ಹೆಚ್ಚಿನ ಇಂಜಿನ್ ಸಾಮರ್ಥ್ಯ

ಮಾರುಕಟ್ಟೆಗೆ ಬಿಡುಗಡೆಯಾದ ಕಾರ್ನಿವಲ್ ಕಾರು 2.2 ಲೀಟರ್ ವಿಜಿಟಿ ಬಿಎಸ್ 6 ಡೀಸೆಲ್ ಇಂಜಿನ್ ಹೊಂದಿದೆ. ಆರಾಮದಾಯಕವಾದ, ಐಷಾರಾಮಿ ಸವಲತ್ತುಗಳನ್ನು ಅಳವಡಿಸಲಾಗಿದೆ. 18 ಇಂಚಿನ ಲೋಹಮಿಶ್ರಿತ ವ್ಹೀಲ್​ಗಳನ್ನು ಹೊಂದಿದೆ. ಆಕರ್ಷಕವಾದ ವಿನ್ಯಾಸ ಹೊಂದಿರುವ ಕಾರ್ನಿವಲ್ ಕಾರು, ಹೆಚ್ಚಿನ ಇಂಜಿನ್ ಸಾಮರ್ಥ್ಯ ಹೊಂದಿದೆ.

ಕಿಯಾ ಮೋಟಾರ್ಸ್ ಭಾರತೀಯ ಗ್ರಾಹಕರ ಮನ ಗೆದ್ದಿದೆ. ಇಲ್ಲಿನ ಜನರಿಗೆ ಹೊಂದುವ ಮಾದರಿಯಲ್ಲಿ ಕಾರನ್ನು ನಿರ್ವಿುಸುತ್ತಿದ್ದೇವೆ. ಇತ್ತೀಚೆಗೆ ನಿರ್ವಿುಸಲಾದ ಕಿಯಾ ಕಾರ್ನಿವಲ್ ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. | ಕುಖಿಯುನ್ ಶಿಮ್, ಕಿಯಾ ಮೋಟಾರ್ಸ್ ಎಂಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net