ಜಿಯೋಗೆ ಬಂಪರ್ ಹೂಡಿಕೆ

Jio
Published on

ಮುಂಬೈ: ವಿಶ್ವದ ಅತಿದೊಡ್ಡ ಗ್ರಾಹಕ ಕೇಂದ್ರಿತ ಖಾಸಗಿ ಈಕ್ವಿಟಿ ಸಂಸ್ಥೆಗಳಲ್ಲಿ ಪ್ರಮುಖವಾದ ಎಲ್ ಕ್ಯಾಟರ್​ಟನ್  1894.50 ಕೋಟಿ ರೂ. ಹೂಡಿಕೆಯನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರಐಎಲ್) ಹಾಗೂ ಭಾರತದ ಮುಂಚೂಣಿ ಡಿಜಿಟಲ್ ಸೇವೆಗಳ ವೇದಿಕೆ ಜಿಯೋ ಫ್ಲಾಟ್​ಫಾರ್ಮ್ಸ್​​ ಲಿಮಿಟೆಡ್​ನಲ್ಲಿ (ಜಿಯೋ) ಘೋಷಣೆ ಮಾಡಿದೆ.

ಈ ಹೂಡಿಕೆಯಿಂದ ಜಿಯೋ ಫ್ಲಾಟ್​ಫಾರ್ಮ್ಸ್ ಈಕ್ವಿಟಿ ಮೌಲ್ಯ   4.91 ಲಕ್ಷ ಕೋಟಿ ರೂ.ಗೆ ಹಾಗೂ ಎಂಟರ್​ಪ್ರೖೆಸ್ ಮೌಲ್ಯ  5.16 ಲಕ್ಷ ಕೋಟಿ ರೂ.ಗೆ ಏರಿಕೆಯಾಗಲಿದೆ. ಎಲ್ ಕ್ಯಾಟರ್​ಟನ್ ಹೂಡಿಕೆಯು ಜಿಯೋ ಫ್ಲಾಟ್​ಫಾರ್ಮ್ಸ್ ಶೇ. 0.39 ಈಕ್ವಿಟಿ ಪಾಲುದಾರಿಕೆಗೆ ಸಮಾನವಾಗಿರಲಿದೆ. ಈ ಮೂಲಕ ಕಳೆದ ಏಪ್ರಿಲ್ 22ರಿಂದ ಈವರೆಗೆ ಫೇಸ್​ಬುಕ್, ಸಿಲ್ವರ್ ಲೇಕ್, ವಿಸ್ತಾ ಈಕ್ವಿಟಿ ಪಾರ್ಟ್​ನರ್ಸ್, ಜನರಲ್ ಅಟ್ಲಾಂಟಿಕ್, ಕೆಕೆಆರ್, ಮುಬಾದಲ, ಎಡಿಐಎ, ಟಿಪಿಜಿ ಸೇರಿ ಮುಂಚೂಣಿ ಜಾಗತಿಕ ಹೂಡಿಕೆದಾರರು ಜಿಯೋದಲ್ಲಿ  1,04,326.95 ಕೋಟಿ ರೂ. ಬಂಡವಾಳ ಹೂಡಿದ್ದಾರೆ. ಇದನ್ನೂ ಓದಿ: 2019ರ ಜೂನ್​ 7ರಂದು ಮೇಘನಾ ಹಾಕಿದ್ದ ಇನ್ಸ್ಟಾಗ್ರಾಂ ಪೋಸ್ಟ್​ನ್ನು ಈ ಜೂ.7ರಂದು ಕ್ರೂರ ವಿಧಿ ನಿಜ ಮಾಡಿತು… 388 ದಶಲಕ್ಷ ಚಂದಾದಾರರು: ಜಿಯೋ ಭಾರತದಾದ್ಯಂತ ಉನ್ನತ ಗುಣಮಟ್ಟದ ಹಾಗೂ ಕೈಗೆಟುಕುವ ದರದ ಡಿಜಿಟಲ್ ಸೇವೆ ಒದಗಿಸುವತ್ತ ಗಮನ ಕೇಂದ್ರೀಕರಿಸಿದ್ದು, ಮುಂದಿನ ತಲೆಮಾರಿನ ತಂತ್ರಜ್ಞಾನ ವೇದಿಕೆಯಾಗಿದೆ. ಅದಕ್ಕೆ 388 ದಶಲಕ್ಷಕ್ಕೂ ಹೆಚ್ಚಿನ ಚಂದಾದಾರರಿದ್ದಾರೆ. ಬ್ರಾಡ್​ಬ್ಯಾಂಡ್ ಸಂಪರ್ಕ, ಸ್ಮಾರ್ಟ್ ಸಾಧನಗಳು, ಕ್ಲೌಡ್ ಮತ್ತು ಎಡ್ಜ್ ಕಂಪ್ಯೂಟಿಂಗ್, ಬಿಗ್ ಡೇಟಾ ಅನಲಿಟಿಕ್ಸ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಇಂಟರ್​ನೆಟ್ ಆಫ್ ಥಿಂಗ್ಸ್, ಆಗ್ಮೆಂಟೆಡ್ ಮತ್ತು ಮಿಕ್ಸೆಡ್ ರಿಯಾಲಿಟಿ ಹಾಗೂ ಬ್ಲಾಕ್​ಚೈನ್​ನಂತಹ ಮುಂಚೂಣಿ ತಂತ್ರಜ್ಞಾನಗಳಿಂದ ಚಾಲಿತವಾಗಿರುವ ಡಿಜಿಟಲ್ ಇಕೋಸಿಸ್ಟಂನಲ್ಲಿ ಜಿಯೋ ಗಮನಾರ್ಹ ಹೂಡಿಕೆ ಮಾಡಿದೆ. ಎಲ್ಲರನ್ನು ಒಳಗೊಳ್ಳುವ ಥೀಮ್ಂತೆ ಸಣ್ಣ ವರ್ತಕರು, ಅತಿಸಣ್ಣ ಉದ್ಯಮಗಳು ಹಾಗೂ ರೈತರೂ ಸೇರಿ ಭಾರತದಾದ್ಯಂತ 1.30 ಶತಕೋಟಿ ಜನರು ಹಾಗೂ ಉದ್ಯಮಗಳಿಗೆ ಡಿಜಿಟಲ್ ಇಂಡಿಯಾ ಸೇವೆಯನ್ನು ಸಾಧ್ಯವಾಗಿಸುವುದು ಜಿಯೋದ ದೂರದೃಷ್ಟಿಯಾಗಿದೆ. ಇದನ್ನೂ ಓದಿ:  ಭೂಸುಧಾರಣಾ ಕಾಯ್ದೆ ತಿದ್ದುಪಡಿಗೆ ವಿರೋಧ

ಜಿಯೋದಲ್ಲಿ ಟಿಪಿಜಿ 4,546 ಕೋಟಿ ರೂ.ಬಂಡವಾಳ

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ನ ಜಿಯೋ ಫ್ಲಾಟ್​ಫಾರ್ಮ್ಸ್ ಲಿಮಿಟೆಡ್​ನಲ್ಲಿ ಟಿಪಿಜಿ -ಠಿ; 4,546.80 ಕೋಟಿ ಹೂಡಿಕೆ ಮಾಡುತ್ತಿದೆ. ಈ ಹೂಡಿಕೆ ಮೂಲಕ ಜಿಯೋದಲ್ಲಿ ಟಿಪಿಜಿ ಶೇ 0.93 ಪಾಲುದಾರಿಕೆ ಹೊಂದಲಿದೆ. 1992ರಲ್ಲಿ ಸ್ಥಾಪನೆಯಾದ ಟಿಪಿಜಿ ಪ್ರಮುಖ ಜಾಗತಿಕ ಪರ್ಯಾಯ ಆಸ್ತಿ ಸಂಸ್ಥೆಯಾಗಿದ್ದು, ಪ್ರೖೆವೇಟ್ ಈಕ್ವಿಟಿ, ಗ್ರೋಥ್ ಈಕ್ವಿಟಿ, ರಿಯಲ್ ಎಸ್ಟೇಟ್ ಹಾಗೂ ಪಬ್ಲಿಕ್ ಈಕ್ವಿಟಿ ಸೇರಿದಂತೆ ವಿವಿಧ ಆಸ್ತಿ ವರ್ಗಗಳಲ್ಲಿ 79 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿಗಳನ್ನು ನಿರ್ವಹಿಸುತ್ತಿದೆ. 25ಕ್ಕೂ ಹೆಚ್ಚು ವರ್ಷಗಳ ಟಿಪಿಜಿ ಇತಿಹಾಸದಲ್ಲಿ, ಅದು ನೂರಾರು ಪೋರ್ಟ್​ಫೋಲಿಯೋ ಕಂಪನಿಗಳಿಂದ ಕೂಡಿದ ಇಕೋಸಿಸ್ಟಂ ಅನ್ನು ನಿರ್ವಿುಸಿದೆ ಮತ್ತು ಸಲಹೆಗಾರರ ಮೌಲ್ಯವರ್ಧಿತ ವಿಶ್ವವ್ಯಾಪಿ ಜಾಲವನ್ನು ನಿರ್ವಿುಸಿದೆ. ಏರ್​ಬಿಎನ್​ಬಿ, ಉಬರ್ ಮತ್ತು ಸ್ಪಾಟಿಫೈ ಮುಂತಾದ ಹಲವು ಜಾಗತಿಕ ತಂತ್ರಜ್ಞಾನ ಸಂಸ್ಥೆಗಳಲ್ಲಿ ಇದರ ಹೂಡಿಕೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net