ಕೇಂದ್ರ ಬಜೆಟ್​ 2020: ಸಂಸತ್ತಿನಲ್ಲಿಂದು ಏನೇನು ನಡೆಯಲಿದೆ?

Budget vvani
Published on

ನವದೆಹಲಿ: ಕೇಂದ್ರ ಬಜೆಟ್​ಗೆ ಕ್ಷಣಗಣನೆ ಆರಂಭವಾಗಿದೆ. ಇಂದು ಬೆಳಗ್ಗೆ 11 ಗಂಟೆಗೆ ವಿತ್ತಸಚಿವೆ ನಿರ್ಮಲಾ ಸೀತಾರಾಮನ್​ ಅವರು ಬಜೆಟ್​ ಮಂಡಿಸಲಿದ್ದು, ಇಂದು ಏನೆಲ್ಲ ನಡೆಯಲಿದೆ ಎಂಬುದರ ಒಂದು ಸಣ್ಣ ಝಲಕ್​ ಇಲ್ಲಿದೆ....

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಕೇಂದ್ರ ಸರ್ಕಾರದ ಬಜೆಟ್​ ಮಂಡಿಸಲಿದ್ದಾರೆ. ವಿಶೇಷವೆಂದರೆ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಬಿಟ್ಟರೆ ಎರಡನೇ ವಿತ್ತ ಸಚಿವೆಯಾಗಿರುವ ನಿರ್ಮಲಾ ಅವರಿಗೂ ಇದು ಎರಡನೇ ಆಯವ್ಯಯ ಮಂಡನೆಯಾಗಿದೆ.

ಮಾರ್ಚ್ 2021ಕ್ಕೆ ಕೊನೆಗೊಳ್ಳುವ ವರ್ಷದ ಪೂರ್ಣ ಬಜೆಟ್ ಅನ್ನು ನಿರ್ಮಲಾ ಸೀತಾರಾಮನ್ ಇಂದು ಮಂಡಿಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಬಜೆಟ್​ ಮಂಡನೆ ಆರಂಭವಾಗಲಿದೆ. ಲೋಕಸಭಾ ಸ್ಪೀಕರ್​ ಮುಂದೆ ಪ್ರಸ್ತುತ ಪಡಿಸುವ ಮೂಲಕ ಆಯವ್ಯಯ ಮಂಡನೆ ಶುರು ಮಾಡಲಿದ್ದಾರೆ. ಸಾಮಾನ್ಯವಾಗಿ 90 ರಿಂದ 120 ನಿಮಿಷ ಬಜೆಟ್​ ಪ್ರಸ್ತುತಪಡಿಸಲಾಗುತ್ತದೆ.

ಈಗಾಗಲೇ ಶುಕ್ರವಾರ ವಿತ್ತಸಚಿವೆ ಸಂಸತ್ತಿನಲ್ಲಿ ಬಜೆಟ್​ ಪೂರ್ವ 2019-20ರ ಆರ್ಥಿಕ ಸಮೀಕ್ಷೆಯನ್ನು ವಿವರಿಸಿದ್ದಾರೆ. ಆರ್ಥಿಕ ಸಮೀಕ್ಷೆಯು ದೇಶದ ಮುಂದಿರುವ ಸಮಸ್ಯೆಗಳು ಹಾಗೂ ಸವಾಲುಗಳನ್ನು ಪ್ರತಿಬಿಂಬಿಸುತ್ತದೆ. ಈ ಸಮೀಕ್ಷೆಯನ್ನು ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್​ ಅವರು ಬಿಡುಗಡೆ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net