

ಬೆಂಗಳೂರು: ಐಷಾರಾಮಿ ಕಾರುಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮರ್ಸಿಡಿಸ್ ಬೆಂಜ್, ಮೇಡ್ ಇನ್ ಇಂಡಿಯಾ ಪರಿಕಲ್ಪನೆಯಲ್ಲಿ ಅತ್ಯಾಧುನಿಕ ವಿನ್ಯಾಸದ 10ನೇ ಉತ್ಪನ್ನವಾಗಿ ಮರ್ಸಿಡಿಸ್ ಬೆಂಜ್ ಜಿಎಲ್ಸಿ ಕೂಪ್ ಮತ್ತು ಎಂಬಿಯುಎಕ್ಸ್ ತಂತ್ರಜ್ಞಾನವುಳ್ಳ ಕಾರನ್ನು ‘ರೆಸ್ಟ್ಲೆಸ್ ನೈಟ್ಸ್ ’ಕಾರ್ಯಕ್ರಮದ ಮೂಲಕ ನಗರದ ಕಸ್ತೂರಬಾ ರಸ್ತೆಯಲ್ಲಿರುವ ಸುಂದರಂ ಮೋಟಾರ್ಸ್ನಲ್ಲಿ ಅನಾವರಣಗೊಳಿಸಲಾಯಿತು.
ಭಾರತೀಯರಿಗಾಗಿ ಭಾರತದಲ್ಲೇ ತಯಾರಾದ ಉತ್ಪನ್ನಗಳ ಸರಣಿಯಲ್ಲಿ ಜಿಎಲ್ಸಿ ಕೂಪ್ ವಾಹನ ಮೊದಲ ಬಾರಿಗೆ ಲಭ್ಯವಾಗುತ್ತಿದೆ. ಎಸ್ಯುುವಿ ಕೂಪ್ಗೆ ಬೇಡಿಕೆ ಹೆಚ್ಚಾಗುತ್ತಿದೆ. ಅದಕ್ಕೆ ತಕ್ಕಂತೆ ಪೂರೈಕೆ ಮಾಡಲು ಮರ್ಸಿಡೀಸ್ ಬೆಂಜ್ 300ಡಿ 4 ಮ್ಯಾಟಿಕ್ ಡೀಸೆಲ್ ಮತ್ತು 300 4 ಮ್ಯಾಟಿಕ್ ಪೆಟ್ರೋಲ್ ಕಾರುಗಳನ್ನು ಬಿಡುಗಡೆ ಮಾಡಲಾಗುತ್ತಿದೆ.
ವಿಶೇಷತೆಗಳು: ಹೊಸ ಜಿಎಲ್ಸಿ ಕೂಪ್ ವಾಹನವು ಮರ್ಸಿಡೀಸ್ ಮಿ ಕನೆಕ್ಟ್ ಸೌಲಭ್ಯವನ್ನು ಹೊಂದಿದೆ. ರಿಮೋಟ್ ಲಾಕ್, ಅನ್ಲಾಕ್, ಕಾರ್ ಲೊಕೇಟರ್, ಸ್ಪೀಡ್ ಮಾನಿಟರ್, ತುರ್ತು ಇ-ಕಾಲ್ ಮತ್ತಿತರ ಸೌಲಭ್ಯಗಳನ್ನು ಅಳವಡಿಸಲಾಗಿದೆ. ಇವೆಲ್ಲವನ್ನೂ ಗ್ರಾಹಕರ ಸ್ಮಾರ್ಟ್ಫೋನ್ ಮೂಲಕವೇ ನಿಯಂತ್ರಿಸಬಹುದಾಗಿದೆ. ಹೊಸ ಪೀಳಿಗೆಯ ಟೆಲಿಮ್ಯಾಟಿಕ್ಸ್ ಹೊಂದಿದ್ದು, ಮರ್ಸಿಡೀಸ್ ಬೆಂಜ್ ಗ್ರಾಹಕ ಅನುಭವ (ಎನ್ಟಿಜಿ 6.0) ಸೌಲಭ್ಯ, ವರ್ಚುವಲ್ ಅಸಿಸ್ಟೆಂಟ್ ಮತ್ತು ಇನ್ಪೋಟೇನ್ಮೆಂಟ್ ಸಿಸ್ಟಂ ಅನ್ನು ಪಡೆದಿದೆ.
ತಾಂತ್ರಿಕ ವಿವರ
ಎಕ್ಸ್ ಶೋರೂಂ ಬೆಲೆ
ಮರ್ಸಿಡಿಸ್ ಜಿಎಲ್ಸಿ 300 4 ಮ್ಯಾಟಿಕ್ 62.70 ಲಕ್ಷ ರೂ.
ಮರ್ಸಿಡಿಸ್ ಜಿಎಲ್ಸಿ 300ಡಿ 4 ಮ್ಯಾಟಿಕ್ 63.70 ಲಕ್ಷ ರೂ.
ಇಂಜಿನ್: ಬಿಎಸ್ 6 4 ಸಿಲಿಂಡರ್ (ಡೀಸೆಲ್)/ ಬಿಎಸ್ 6 4 ಸಿಲಿಂಡರ್ (ಪೆಟ್ರೋಲ್) ಟ್ರಾನ್ಸ್ಮಿಷನ್: 9ಜಿ-ಟ್ರಾನಿಕ್ ಆಟೋಮ್ಯಾಟಿಕ್ ಟಾರ್ಕ್: 500 ಎನ್ಎಂ/370 ಎನ್ಎಂ ಗರಿಷ್ಠ ವೇಗ: ಗಂಟೆಗೆ 250 ಕಿ.ಮೀ. 0-100 ಕಿ.ಮೀ. ವೇಗ: 6.3 ಸೆಕೆಂಡ್ ಅಶ್ವಶಕ್ತಿ (ಕೆಡಬ್ಲ್ಯು ) ಎಚ್ಪಿ/ಆರ್ಎಂಪಿ : 180 (245)/190 (258) ಡ್ರೖೆವಿಂಗ್ ಸಿಸ್ಟಮ್ 4 ಮ್ಯಾಟಿಕ್ ಬ್ರೇಕಿಂಗ್: 4 ವ್ಹೀಲ್ಗಳಿಗೂ ವೆಂಟಿಲೇಟೆಡ್ ಡಿಸ್ಕ್ ಬ್ರೇಕ್ ಇಂಧನ ಕ್ಷಮತೆ: ಲೀಟರ್ಗೆ 16.34 ಕಿ.ಮೀ./12.74
77 ಸಾವಿರ ರೂ.ಗಳಿಗೆ ಸರ್ವೀಸ್ ಪ್ಯಾಕೇಜ್
300ಡಿ 4 ಮ್ಯಾಟಿಕ್ ಕಾರಿಗೆ 77 ಸಾವಿರ ರೂ. ಪಾವತಿಸಿ ಅನಿಯಮಿತ ಕಿ.ಮೀ.ವರೆಗೆ 2 ವರ್ಷ ಸರ್ವೀಸ್ ಸೌಲಭ್ಯ ಪಡೆದುಕೊಳ್ಳಬಹುದು. ಜಿಎಲ್ಸಿ 300 4 ಮ್ಯಾಟಿಕ್ ಕಾರಿಗೆ 67,300 ರೂ. ಪಾವತಿಸಿ 2 ವರ್ಷಗಳ ಅವಧಿಗೆ ಅನಿಯಮಿತ ಕಿಲೋಮೀಟರ್ ಸರ್ವೀಸ್ ಪ್ಯಾಕೇಜ್ ಪಡೆದುಕೊಳ್ಳಬಹುದು.